Advertisment

ಪುನೀತ್ ರಾಜ್‌ಕುಮಾರ್‌ ಪ್ರೇರಣೆ.. ಅಂಧ ಮಗುವನ್ನು ದತ್ತು ಪಡೆದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ

author-image
admin
Updated On
ಪುನೀತ್ ರಾಜ್‌ಕುಮಾರ್‌ ಪ್ರೇರಣೆ.. ಅಂಧ ಮಗುವನ್ನು ದತ್ತು ಪಡೆದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ
Advertisment
  • ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 49ನೇ ಹುಟ್ಟುಹಬ್ಬ
  • ಅಂಧ ಮಗುವನ್ನ ದತ್ತು ಪಡೆದ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ
  • ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆಗೆ ಭೇಟಿ ನೀಡಿದ ವಿನಯ್ ಕುಟುಂಬ

ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 49ನೇ ಹುಟ್ಟುಹಬ್ಬ. ಮರೆಯಾದ ಜೀವ ಎಂದೆಂದಿಗೂ ಜೀವಂತ ಅಂತಿರೋ ಅವರ ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

Advertisment

publive-image

ಡಾ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಸೀಸನ್ 10 ಸ್ಪರ್ಧಿ ವಿನಯ್ ಗೌಡ ಅವರು ಅಂಧ ಮಗುವನ್ನ ದತ್ತು ಪಡೆದುಕೊಂಡಿದ್ದಾರೆ. ಅಪ್ಪು ಬರ್ತ್ ಡೇ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಅವರು ಶೇಷಾದ್ರಿಪುರಂನ ಒಂದನೇ ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆಗೆ ಭೇಟಿ ನೀಡಿದ್ದರು.

publive-image

ಇದನ್ನೂ ಓದಿ: ‘ಅವಳು ನನ್ನ ತಂಗಿ, ತೊಂದರೆ ಕೊಡೋದು ನಿಲ್ಲಿಸಿ’- ಖಡಕ್​​ ವಾರ್ನಿಂಗ್​ ಕೊಟ್ಟ ವಿನಯ್​ ಗೌಡ!

ಕ್ಷೇಮಾಭ್ಯುದಯ ಸಂಸ್ಥೆಯಲ್ಲಿರುವ 32 ಅಂಧ ಮಕ್ಕಳಿಗೂ ವಿನಯ್ ಗೌಡ ಅವರ ಫ್ಯಾಮಿಲಿ ಇಂದು ಬ್ರೇಕ್ ಫಾಸ್ಟ್ ಆಯೋಜಿಸಿತ್ತು. ವಿನಯ್ ದಂಪತಿ ಅಂಧ ಮಕ್ಕಳಿಗೆ ಖುದ್ದು ತಿಂಡಿ ಬಡಿಸಿ ಬಳಿಕ ಅಂಧ ಮಕ್ಕಳ ಜೊತೆ ಕೂತು ಬ್ರೇಕ್ ಫಾಸ್ಟ್ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment