/newsfirstlive-kannada/media/post_attachments/wp-content/uploads/2024/04/deepika-das1.jpg)
ಬಿಗ್ಬಾಸ್ ಬೆಡಗಿ ದೀಪಿಕಾ ದಾಸ್ ಸದ್ಯ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ. ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ದರು ನಟಿ ದೀಪಿಕಾ ದಾಸ್. ನಾಗಿಣಿ ಅಂತಲೇ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ರೀಲ್ಸ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್; ಅಸಲಿಗೆ ಆಗಿದ್ದೇನು? ಹೊಸ ವಿಡಿಯೋ ಶೇರ್!
ಹೌದು, ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಟಿ ದೀಪಿಕಾ ದಾಸ್ ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಌಕ್ಟಿವ್ ಆಗಿಬಿಟ್ಟಿದ್ದಾರೆ. ಪ್ರತಿ ದಿನ ಒಂದಲ್ಲಾ ಒಂದು ಪೋಸ್ಟ್ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ನಟಿ ದೀಪಿಕಾ ದಾಸ್ ಅವರು ಕೆಂಪು ಬಣ್ಣದ ಕಾರಿನ ಬಳಿ ನಿಂತುಕೊಂಡು ಸಖತ್ ಪೋಸ್ ಕೊಟ್ಟಿದ್ದಾರೆ. ಎಲ್ಲರ ಕಣ್ಣು ಕುಕ್ಕುವಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ ನಾಗಿಣಿ ಸೀರಿಯಲ್ ನಟಿ. ಆ ಲೊಕೇಷನ್ಗೆ ಸೂಟ್ ಆಗುವಂತೆ ಡ್ರೆಸ್ ಮಾಡಿಕೊಂಡಿದ್ದ ನಟಿ ದೀಪಿಕಾ ದಾಸ್ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಸದ್ಯ ನಟಿ ಶೇರ್ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೇ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ಸ್ ಮೂಲಕ ನಮ್ಮ ದೀಪ್ಸ್ ಸಖತ್ ಸ್ಟೈಲಿಶ್ ಅಂತ ಬರೆದುಕೊಂಡಿದ್ದಾರೆ.
View this post on Instagram
ಇನ್ನು, ಮೊನ್ನೆಯಷ್ಟೇ ದೀಪಿಕಾ ದೀಪಿಕಾ ದಾಸ್ ಅವರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಅವರು ಶೇರ್ ಮಾಡಿಕೊಂಡ ವಿಡಿಯೋ 307 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಆ ವಿಡಿಯೋದಲ್ಲಿ ನಟಿ ದೀಪಿಕಾ ಅವರು ಮಿಸ್ ಆಗಿ ಫಾಲ್ಸ್ ಬಳಿ ಮುಗ್ಗರಿಸಿ ಬಿದ್ದಿದ್ದರು. ಆದರೆ ಆ ಘಟನೆ ನಡೆದು 3 ತಿಂಗಳ ಬಳಿಕ ನಟಿ ವಿಡಿಯೋವನ್ನು ಶೇರ್ ಮಾಡಿದ್ದರು. ಅದನ್ನೇ ನೋಡಿದ ಅಭಿಮಾನಿಗಳು ನಟಿಗೆ ಏನಾಯ್ತು ಎಂದು ಆತಂಕ ವ್ಯಕ್ತಪಡಿಸಿದ್ದರು. ವಿಡಿಯೋಗೆ ಸಂಬಂಧಿಸಿದಂತೆ ನಟಿ ಕೂಡ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದರು.
ಬಿಗ್ಬಾಸ್ ಮುಗಿದ ಮೇಲೆ ದೀಪಿಕಾ ದಾಸ್ ಫುಲ್ ಜಾಲಿ ಟ್ರಿಫ್ ಹೊಡೆಯುತ್ತಿದ್ದಾರೆ. ದಿನಕ್ಕೊಂದು ಹೊಸ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದು, ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ