newsfirstkannada.com

BBK10: ವರ್ತೂರು ಸಂತೋಷ್‌ ಮನೆಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಸಮಾಗಮ; ಏನಿದರ ಸ್ಪೆಷಲ್?

Share :

Published February 4, 2024 at 4:29pm

  ತುಕಾಲಿ ಸಂತೋಷ್, ನೀತು, ಮೈಕಲ್, ಇಶಾನಿ, ಪವಿ ಪೂವಯ್ಯ

  ರಕ್ಷಕ್ ಬುಲೆಟ್‌ಗೆ ಭರ್ಜರಿ ಸ್ವಾಗತ ಕೋರಿದ ವರ್ತೂರು ಸಂತೋಷ್

  ಬಿಗ್‌ಬಾಸ್ ಸ್ಪರ್ಧಿಗಳನ್ನು ನೋಡಲು ಮುಗಿಬಿದ್ದ ವರ್ತೂರಿನ ಜನರು

ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಗಳು ಎಲ್ಲೇ ಹೋದ್ರು ಸುದ್ದಿಯಲ್ಲಿದ್ದಾರೆ. ಒಬ್ಬರಲ್ಲ, ಮೂರ್ನಾಲ್ಕು ಜನ ಸೇರಿದ್ರೆ ಹಬ್ಬವೇ ಆಚರಿಸುತ್ತಿದ್ದಾರೆ. ವರ್ತೂರು ಸಂತೋಷ್ ಅವರ ಮನೆಯಲ್ಲೂ ಇದೇ ಹಬ್ಬದ ಸಂಭ್ರಮ ಇವತ್ತು ಮನೆ ಮಾಡಿದೆ.

ಇಂದು ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಅಕ್ಕನ ಮಗಳ ನಾಮಕರಣ ಸಮಾರಂಭವಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಬಳಿಯ ಗುಂಜೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ ಸ್ಪರ್ಧಿಗಳು ಆಗಮಿಸಿದ್ದು ವಿಶೇಷವಾಗಿದೆ.

ವರ್ತೂರು ಸಂತೋಷ್ ಅವರ ಮನೆಗೆ ತುಕಾಲಿ ಸಂತೋಷ್, ನೀತು, ಮೈಕಲ್, ಇಶಾನಿ, ಪವಿ ಪೂವಯ್ಯ, ರಕ್ಷಕ್ ಬುಲೆಟ್ ಆಗಮಿಸಿದ್ದಾರೆ. ಒಬ್ಬೊಬ್ಬರನ್ನು ಪ್ರೀತಿಯಿಂದ ಆಹ್ವಾನಿಸಿದ ವರ್ತೂರು ಸಂತೋಷ್ ಮೈಸೂರು ಪೇಟ ಹಾಕಿ ಬರಮಾಡಿಕೊಂಡಿದ್ದಾರೆ.

ಮನೆಗೆ ಬಂದ ಅತಿಥಿಗಳಿಗೆ ವರ್ತೂರು ಸಂತೋಷ್ ಭರ್ಜರಿ ಸ್ವಾಗತ ಕೋರಿದ್ರೆ, ಬಿಗ್‌ಬಾಸ್ ಸ್ಪರ್ಧಿಗಳು ಅಷ್ಟೇ ಖುಷಿಯಾಗಿ ಫೋಟೋಗಳಿಗೆ ಸಖತ್‌ ಪೋಸ್‌ ಕೊಟ್ಟರು.

ಇದನ್ನೂ ಓದಿ: ಹೊರಟರೆ ಜಾತ್ರೆ ನಿಂತರೆ ಚರಿತ್ರೆ; ಬಿಗ್‌ಬಾಸ್ ವರ್ತೂರು ಸಂತೋಷ್​ ಮೆರವಣಿಗೆ ಹೇಗಿತ್ತು ಗೊತ್ತಾ?

ಕಾರ್ಯಕ್ರಮಕ್ಕೆ ಆಗಮಿಸಿದ್ದ ತುಕಾಲಿ ಸಂತೋಷ್, ನೀತು, ರಕ್ಷಕ್ ಬುಲೆಟ್, ಮೈಕಲ್, ಇಶಾನಿ, ಪವಿ ಪೂವಯ್ಯ ಅವರನ್ನು ನೋಡಲು ಜನ ಮುಗಿಬಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ವರ್ತೂರು ಸಂತೋಷ್‌ ಮನೆಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಸಮಾಗಮ; ಏನಿದರ ಸ್ಪೆಷಲ್?

https://newsfirstlive.com/wp-content/uploads/2024/02/varthuru-4.jpg

Load More