/newsfirstlive-kannada/media/post_attachments/wp-content/uploads/2025/01/kiccha-rajath.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 97ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ 11, 50 ದಿನಗಳನ್ನು ಪೂರೈಸಿದ್ದ ಹೊತ್ತಲ್ಲಿ ಅಚ್ಚರಿಯ ರೀತಿಯಲ್ಲಿ ವೈಲ್ ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ರಜತ್ ಕಿಶನ್​. ಬಿಗ್​ಬಾಸ್​ಗೆ ಬಂದ ಕೆಲವೇ ದಿನಗಳಲ್ಲಿ ಕಮಾಲ್​ ಮಾಡಿದ್ದರು.
ಇದನ್ನೂ ಓದಿ: BBK11; ಹನುಮಂತು, ಧನರಾಜ್ ಫುಲ್ ಟ್ರೋಲ್​.. ಇಣುಕಿ ನೋಡಿದ್ದಕ್ಕೆ ಕಿಚ್ಚನ ಕಚಗುಳಿ ಮಾತುಗಳು
/newsfirstlive-kannada/media/post_attachments/wp-content/uploads/2025/01/BBK1142.jpg)
ಚೈತ್ರಾ ಕುಂದಾಪುರಗೆ ಬಾಸ್​ ಬಾಸ್​ ಅಂತಲೇ ತಮಾಷೆ ಮಾಡುತ್ತಿದ್ದ ರಜತ್​ ಈಗ ಬಿಗ್​ಬಾಸ್​ ಕಪ್​ ನನಗೆ ಕೊಟ್ಟು ಬಿಡಿ ಅಂತ ಹೇಳಿದ್ದಾರೆ. ಇದೇ ಮಾತಿಗೆ ಕಿಚ್ಚ ಸುದೀಪ್​ ಫಿದಾ ಆಗಿದ್ದಾರೆ. ಹೌದು, ಬಿಗ್​ಬಾಸ್​ಗೆ ಬಂದ ದಿನದಿಂದಲೇ ಸ್ಪರ್ಧಿಗಳ ಜೊತೆಗೆ ತಮಾಷೆ ಮಾಡುಕೊಂಡು ಇದ್ದರು. ಅದರಲ್ಲೂ ರಜತ್ ಜೋಕ್​ ವೀಕ್ಷಕರಿಗೆ ದಿನದಿಂದ ದಿನಕ್ಕೆ ಬಲು ಇಷ್ಟವಾಗುತ್ತಲೇ ಇದ್ದಾರೆ.
View this post on Instagram
ಇದೀಗ ಕಿಚ್ಚ ಸುದೀಪನಿಗೂ ರಜತ್ ಇಷ್ಟವಾಗಿದ್ದಾರೆ. ವಿಕೇಂಡ್ ಎಪಿಸೋಡ್​ನಲ್ಲಿ ರಜತ್​ಗೆ ಕಿಚ್ಚ ಸುದೀಪ್​ ಪೈಲ್ವಾನ್ ಅಂತಲೇ ಕರೆಯುತ್ತಾರೆ. ಹೀಗೆ ಇಂದಿನ ಎಪಿಸೋಡ್​ನಲ್ಲಿ ರಜತ್ ಮಾತಿಗೆ ಕಿಚ್ಚ ಸುದೀಪ್ ಮುಗುಳ್ನಗೆ ಕೊಟ್ಟಿದ್ದಾರೆ. ಮನೆ ಮಂದಿ ಚೈತ್ರಾ ಕುಂದಾಪುರಗೆ ಜೋಕರ್ ಪಟ್ಟ ಕೊಟ್ಟಿದ್ದರು.
ಆಗ ಚೈತ್ರಾ ಕುಂದಪುರ, ಅದೇ ಜೋಕರ್​ ಆಸ್ಕರ್​ ಗೆದ್ದಿದ್ದನ್ನು ನಾನು ಕೇಳಿದ್ದೀನಿ, ಹೀಗಾಗಿ ಇವರುಗಳ ಅಭಿಪ್ರಾಯ ನನಗೆ ದೊಡ್ಡದು ಅಂತ ಅನೀಸುವುದೇ ಇಲ್ಲ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ರಜತ್ ಅವರು ಬೇಕಾದ್ರೇ ಆಸ್ಕರ್ ಗೆದ್ದುಕೊಳ್ಳಲಿ, ನಾನು ಬಿಗ್​ಬಾಸ್​ ಕಪ್​ ಗೆದ್ದುಕೊಂಡು ಮನೆಗೆ ಹೋಗುತ್ತೇನೆ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಕಿಚ್ಚ ಮುಗುಳುನಗೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us