ಕಾಲು ಜಾರಿ ಬಿದ್ದ ಬಿಗ್‌ಬಾಸ್ ಬೆಡಗಿ ದೀಪಿಕಾ ದಾಸ್.. ಮುಗ್ಗರಿಸಿ ಬಿದ್ದು ಮುಖಕ್ಕೆ ಪೆಟ್ಟು; ವಿಡಿಯೋ ವೈರಲ್!

author-image
admin
Updated On
ಕಾಲು ಜಾರಿ ಬಿದ್ದ ಬಿಗ್‌ಬಾಸ್ ಬೆಡಗಿ ದೀಪಿಕಾ ದಾಸ್.. ಮುಗ್ಗರಿಸಿ ಬಿದ್ದು ಮುಖಕ್ಕೆ ಪೆಟ್ಟು; ವಿಡಿಯೋ ವೈರಲ್!
Advertisment
  • ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್
  • ವಾಟರ್ ಫಾಲ್ಸ್ ಬಳಿ ನಡೆದು ಬರುವಾಗ ಮುಗ್ಗರಿಸಿದ ದೀಪಿಕಾ
  • ದೀಪಿಕಾ ದಾಸ್ ಫಾಲಿಂಗ್ ಡೌನ್‌ ವಿಡಿಯೋಗೆ ಫ್ಯಾನ್ಸ್ ಕಳವಳ

ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಕಾಲು ಜಾರಿ ಬಿದ್ದಿದ್ದಾರೆ. ವಾಟರ್ ಫಾಲ್ಸ್ ಬಳಿ ನಡೆದು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ.

publive-image

ಬಿಗ್‌ಬಾಸ್ ಬೆಡಗಿ ದೀಪಿಕಾ ದಾಸ್‌ ಮುಗ್ಗರಿಸಿ ಬಿದ್ದಿರೋ ವಿಡಿಯೋವನ್ನು ಸ್ವತಃ ಅವರೇ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದೀಪಿಕಾ ದಾಸ್ ಹನಿಮೂನ್ ಟ್ರಿಪ್​; ಈ ಬಾರಿ ಬಿಗ್​ಬಾಸ್​​ ಬೆಡಗಿ ಹೋಗಿದ್ದು ಎಲ್ಲಿಗೆ ಗೊತ್ತಾ? 

ವಾಟರ್ ಫಾಲ್ಸ್‌ನಲ್ಲಿ ಜಾಲಿಯಾಗಿ ಹೋಗುತ್ತಿದ್ದ ದೀಪಿಕಾ ದಾಸ್‌ ಅವರ ಕಾಲು ಜಾರಿದ್ದು, ಮುಖದ ಎಡಭಾಗದಲ್ಲಿ ಸ್ವಲ್ಪ ಪೆಟ್ಟಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ದಾಸ್‌ ಅವರು ಕಾಲು ಜಾರಿ ಬಿದ್ದಿರೋ ಈ ವಿಡಿಯೋ ವೈರಲ್ ಆಗಿದೆ.

ದೀಪಿಕಾ ದಾಸ್ ಫಾಲಿಂಗ್ ಡೌನ್‌ ವಿಡಿಯೋ ನೋಡಿದ ಕೆಲವ್ರು ನಟಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವ್ರು ರೀಲ್ಸ್ ಮಾಡೋಕೆ ಹೀಗೆ ಮಾಡಿರಬಹುದು ಅಂತ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ದೀಪಿಕಾ ದಾಸ್ ಅವರು ಮುಖಕ್ಕೆ ಸ್ವಲ್ಪ ಪೆಟ್ಟಾಗಿದೆ. ಬಟ್, ಆರಾಮಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment