/newsfirstlive-kannada/media/post_attachments/wp-content/uploads/2023/12/DRONE-PRATAP-6.jpg)
ಬಿಗ್ಬಾಸ್ ಸೀಸನ್-10ರ ನಿನ್ನೆಯ ಎಪಿಸೋಡ್ನಲ್ಲಿ ದೊಡ್ಮನೆಗೆ ಡ್ರೋಣ್ ಪ್ರತಾಪ್ ಅವರ ತಂದೆ-ತಾಯಿ ಬಂದಿರೋದು ಪ್ರಸಾರ ಆಗಿದೆ. ಅಪ್ಪ-ಅಮ್ಮನಿಗಾಗಿ ಪರಿತಪಿಸುತ್ತಿದ್ದ ಪ್ರತಾಪ್ಗೆ ನಿನ್ನೆ ಬಿಗ್ ರಿಲೀಫ್ ಸಿಕ್ಕಿದೆ.
ಹೆತ್ತವರನ್ನು ನೋಡುತ್ತಿದ್ದಂತೆಯೇ ಪ್ರತಾಪ್ ಭಾವುಕರಾಗಿ ಕಣ್ಣೀರು ಇಟ್ಟರು. ಯಾಕಂದರೆ ಕಳೆದ ಮೂರ್ನಾಲ್ಕು ಎಪಿಸೋಡ್ಗಳಲ್ಲಿ ಇತರೆ ಸ್ಪರ್ಧಿಗಳು ಪೋಷಕರು ಭೇಟಿ ನೀಡಿದ್ದರು. ಆದರೆ ಪ್ರತಾಪ್ ಅವರ ಮನೆಯಿಂದ ಯಾರ ಸುಳಿವೂ ಇರಲಿಲ್ಲ. ಹೀಗಾಗಿ ಪ್ರತಾಪ್ ಹೆತ್ತವರಿಗಾಗಿ ಕಾದು ಕಣ್ಣೀರು ಇಟ್ಟಿದ್ದರು.
ಕೊನೆಗೂ ಪ್ರತಾಪ್ ಅಪ್ಪ ಮರಿಮಾದಯ್ಯ, ಅಮ್ಮ ಸವಿತಾ ಬಿಗ್ಬಾಸ್ ಮನೆಗೆ ಭೇಟಿ ನೀಡಿ ಪುತ್ರನನ್ನು ಅಪ್ಪಿಕೊಂಡಿದ್ದಾರೆ. ಹಿಂದೆ ಮಾಡಿದ ತಪ್ಪಿಗೆ ಪ್ರತಾಪ್ ತಂದೆ ಮೂರು ವರ್ಷಗಳಿಂದ ಮಾತನಾಡಿರಲಿಲ್ಲವಂತೆ. ಇದೀಗ ಅದೆಲ್ಲವನ್ನೂ ಮರೆದು ಮಗನನ್ನು ಕ್ಷಮಿಸಿ, ಅಪ್ಪನಿಗಾಗಿ ಕಾಯುತ್ತಿದ್ದ ಪ್ರತಾಪ್ರನ್ನು ಸಂತೈಸಿದ್ದಾರೆ.
ಕಲರ್ಸ್ ಕನ್ನಡ ಶೇರ್ ಮಾಡಿರುವ ವಿಡಿಯೋ ಒಂದರಲ್ಲಿ ಅಮ್ಮನ ಮಡಿಲಲ್ಲಿ ಮಲಗಿ ಪ್ರತಾಪ್ ಕಣ್ಣೀರು ಇಟ್ಟಿದ್ದಾರೆ. ಆಗ ಪ್ರತಾಪ್ ತಂದೆ ಬೆನ್ನು ತಟ್ಟಿ ಅಳಬಾರದು ಎಂದು ಸಮಾಧಾನ ಮಾಡಿದ್ದಾರೆ. ಅಷ್ಟಕ್ಕೂ ಅಳು ನಿಲ್ಲಿಸದ ಪ್ರತಾಪ್, ‘ನಾನು ಯಾರಿಗೂ ಏನೂ ಅನ್ನಕ್ಕಾಗಲ್ಲ ಕಣವ್ವ’ ಎಂದು ಜೋರಾಗಿ ಅತ್ತಿದ್ದಾರೆ. ಪ್ರತಾಪ್ರನ್ನು ಸುಮ್ಮನಿರಿಸುತ್ತ ಮಾತನಾಡಿದ ಪ್ರತಾಪ್ ತಂದೆ, ‘ಯಾರು ಏನೇ ಮಾಡಿದರೂ ಅವರು ನಮಗೆ ಒಳ್ಳೆಯದಕ್ಕೆ ಮಾಡಿದ್ದಾರೆ. ಅವರಿಗೆಲ್ಲ ನಾವು ಧನ್ಯವಾದ ಹೇಳಬೇಕು. ನಮ್ಮ ಟೈಂ ಕೆಟ್ಟದ್ದು ಇದ್ದಾಗ ಬೇರೆಯವರು ಹೇಳೋದು ಏನಿದೆ? ನನ್ನ ಮಗನಿಂದ ಯಾರಿಗೇ ತಪ್ಪಾದರೂ ಕ್ಷಮೆ ಕೇಳುತ್ತೇನೆ’ ಎಂದು ಕೈಮುಗಿದು, ನಮಸ್ಕಾರ ಮಾಡಿದ್ದಾರೆ.
ಹೆತ್ತವರ ಮಡಿಲಲ್ಲಿ ಕಣ್ಣೀರಾದ ಪ್ರತಾಪ್!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10#HappyBiggBoss#KichchaSudeep#ColorsKannada#ಬಣ್ಣಹೊಸದಾಗಿದೆ#ಬಂಧಬಿಗಿಯಾಗಿದೆpic.twitter.com/jDHBl36nit— Colors Kannada (@ColorsKannada) December 28, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ