newsfirstkannada.com

BBK10: ಅಪ್ಪನ ಜತೆ ಮುದ್ದೆ ಮಾಡಿದ ಡ್ರೋನ್ ಪ್ರತಾಪ್​; ವಿಡಿಯೋ ನೋಡಿ ಫ್ಯಾನ್ಸ್‌ ಏನಂದ್ರು?

Share :

Published February 3, 2024 at 5:32pm

    ಬಿಗ್​ಬಾಸ್​ ಮನೆಯಲ್ಲಿದ್ದಾಗ ಇದೇ ರೀತಿ ಮುದ್ದೆ ಮಾಡಿದ್ದ ಪ್ರತಾಪ್​

    ಬಿಗ್​ಬಾಸ್​​ ರನ್ನರ್​ ಅಪ್ ಪಟ್ಟ ಪಡೆದುಕೊಂಡ ಡ್ರೋನ್​ ಪ್ರತಾಪ್​

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಮುದ್ದೆ ವಿಡಿಯೋ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ರನ್ನರ್​ ಅಪ್​​ ಪಟ್ಟವನ್ನು ಡ್ರೋನ್ ಪಡೆದುಕೊಂಡಿದ್ದರು. ಇದಾದ ಬಳಿಕ ಡ್ರೋನ್​ ಪ್ರತಾಪ್​ಗೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್​ಬಾಸ್​​ ರನ್ನರ್​ ಅಪ್ ಪಟ್ಟ ಪಡೆದುಕೊಂಡ ಬಳಿಕ ಡ್ರೋನ್​ ಪ್ರತಾಪ್​ ತಮ್ಮ ಊರಿಗೆ ಹೋಗಿದ್ದಾರೆ.

ಹೌದು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ನೆಟ್ಕಲ್​ ಗ್ರಾಮಕ್ಕೆ ಡ್ರೋನ್​​ ಪ್ರತಾಪ್ ಹೋಗಿದ್ದಾರೆ. ಹಲವು ವರ್ಷಗಳ ನಂತರ ತಮ್ಮ ಊರಿಗೆ ಮರಳಿದ ಡ್ರೋನ್​ ಪ್ರತಾಪ್​ ಅವರನ್ನು ​​​​ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಯಾವ ಜನ ಪ್ರತಾಪ್​ ಅವರನ್ನ ದ್ವೇಷ ಮಾಡುತ್ತಿದ್ದರೋ ಇವತ್ತು ಅದೇ ಜನ ಸನ್ಮಾನ ಮಾಡಿದ್ದಾರೆ. ಬಳಿಕ ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್ ತಂದೆ ಜೊತೆ ಸೇರಿ ರಾಗಿ ಮುದ್ದೆ ತಯಾರಿಸಿದ್ದಾರೆ. ಮುದ್ದೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಇದನ್ನು ಓದಿ: ಡ್ರೋನ್​ ಕೈಯಲ್ಲಿ ‘ಮುದ್ದೆ’ ಆಯ್ತು.. ಗ್ಯಾಸ್​ ಖಾಲಿ ಆಗಿ ಮನೆಯ ಮನಗಳಲ್ಲಿ ಹೊತ್ತಿಕೊಳ್ತು ಕಿಚ್ಚು!

ಹೌದು, ಈ ಹಿಂದೆ ಬಿಗ್​ಬಾಸ್​ ಮನೆಯಲ್ಲಿದ್ದಾಗ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿ ಕೊಟ್ಟಿದ್ದರು. ಆದರೆ ಅದರ ಜೊತೆ ರಾಗಿ ಮುದ್ದೆ ಮಾಡಿದ್ದರಿಂದ ಮನೆಯ ಗ್ಯಾಸ್​ ಖಾಲಿ ಕೂಡ ಆಗಿತ್ತು. ಹೀಗಾಗಿ ರಾಗಿ ಮುದ್ದೆ ತಿನ್ನದ ಸ್ಪರ್ಧಿಗಳು ಕೋಪಗೊಂಡಿದ್ದರು. ಬಳಿಕ ಡ್ರೋನ್​ ಪ್ರತಾಪ್​, ತುಕಾಲಿ, ವರ್ತೂರ್​ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸುತ್ತಾ, ಬಿಗ್​ಬಾಸ್​ ಇಂತಹ ಶಿಕ್ಷೆ ಕೊಡಬೇಡಿ. ಅಲ್ಲಿ ಎಲ್ಲರೂ ರಾಕ್ಷಸರು ಆಗ್ತಾ ಇದ್ದಾರೆ ಎಂದು ಹೇಳಿದ್ದರು. ಇದೀಗ ಹಲವು ವರ್ಷಗಳ ನಂತರ ಡ್ರೋನ್​ ಪ್ರತಾಪ್​ ತಮ್ಮ ತಂದೆಯ ಜೊತೆ ಸೇರಿಕೊಂಡು ರಾಗಿ ಮುದ್ದೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನೀವು ಆರೋಗ್ಯಕ್ಕೆ ಉತ್ತಮವಾದ ರಾಗಿ ಮುದ್ದೆ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದು ಖುಷಿ ಆಯ್ತು. ನಿಜವಾಗ್ಲೂ ಪ್ರತಾಪ್ ತುಂಬಾ ಒಳ್ಳೆಯ ಮನುಷ್ಯ. ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ ಎಂದು ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಅಪ್ಪನ ಜತೆ ಮುದ್ದೆ ಮಾಡಿದ ಡ್ರೋನ್ ಪ್ರತಾಪ್​; ವಿಡಿಯೋ ನೋಡಿ ಫ್ಯಾನ್ಸ್‌ ಏನಂದ್ರು?

https://newsfirstlive.com/wp-content/uploads/2024/02/drone-prathap-5.jpg

Load More