ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಡ್ರೋನ್ ಪ್ರತಾಪ್.. ಕಾರಣವೇನು?

author-image
Bheemappa
Updated On
ಕೇಸ್​​ವೊಂದರಲ್ಲಿ ಡ್ರೋನ್​ ಪ್ರತಾಪ್​ ಅರೆಸ್ಟ್​; ಪೊಲೀಸರಿಂದ ತೀವ್ರ ವಿಚಾರಣೆ
Advertisment
  • ಡ್ರೋಣ್ ಪ್ರತಾಪ್ ವಿರುದ್ಧ ಸಾರ್ವಜನಿಕವಾಗಿ ವ್ಯಾಪಕ ಟೀಕೆ
  • ವಿಡಿಯೋ ಹಂಚಿಕೊಂಡ ಪ್ರತಾಪ್ ವಿರುದ್ಧ ಹೆಚ್ಚಿದ ಆಕ್ರೋಶ
  • ಸೈನ್ಸ್ ವಿಡಿಯೋ ಹೆಸರಿನಲ್ಲಿ ಡ್ರೋಣ್ ಪ್ರತಾಪ್ ಹುಚ್ಚಾಟ..!?

ಬೆಂಗಳೂರು: ಬಿಗ್​ಬಾಸ್​ ಖ್ಯಾತಿಯ ಡ್ರೋನ್ ಪ್ರತಾಪ್ ಸೈನ್ಸ್ ವಿಡಿಯೋ ಹೆಸರಿನಲ್ಲಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿರ್ಜನ ಪ್ರದರ್ಶನದಲ್ಲಿದ್ದ ಕೃಷಿ ಹೊಂಡದಂತ ಆಳವಾದ ಗುಂಡಿಯಲ್ಲಿನ ನೀರಿಗೆ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಹಾಕಿದ್ದಾರೆ. ನೀರಿಗೆ ಸೋಡಿಯಂ ಮೆಟಲ್ ಹಾಕುತ್ತಿದ್ದಂತೆ ಅದು ತಕ್ಷಣ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದ್ದು ಶಬ್ಧ ಕೂಡ ಅಷ್ಟೇ ಪ್ರಮಾಣದಲ್ಲಿ ಕೇಳಿಸಿದೆ. ಇದನ್ನು ಲೈವ್ ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಬೇರೆ ಹರಿಬಿಟ್ಟಿದ್ದಾರೆ. ಸದ್ಯ ಇದೀಗ ಈ ವಿಡಿಯೋಗೆ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:ಇಂಡಿಯನ್ ಬ್ಯಾಂಕ್​ನಿಂದ ಮಹತ್ವದ ಉದ್ಯೋಗಗಳ ಭರ್ತಿ.. ನುರಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ

publive-image

ಡ್ರೋನ್ ಪ್ರತಾಪ್ ಪೋಸ್ಟ್ ಮಾಡಿರುವ ಈ ವಿಡಿಯೋಗೆ ಸಾರ್ವಜನಿಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ವಿಡಿಯೋದಿಂದ ಕ್ರೇಜ್ ಸೃಷ್ಟಿ ಮಾಡಿಕೊಳ್ಳಲು ಹೋಗಿ ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ. ಅಲ್ಲದೇ ನೀರಿನಲ್ಲಿ ಸ್ಫೋಟ ಮಾಡಿದ್ದರಿಂದ ಒಳಗೆ ಇರುವ ಜಲಚರ ಪ್ರಾಣಿಗಳಿಗೆ ಸಮಸ್ಯೆ ಎಂದು ದೂರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment