/newsfirstlive-kannada/media/post_attachments/wp-content/uploads/2024/12/Lassya-Nag4.jpg)
ಕನ್ನಡದ ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ. ತಮ್ಮ ಅದ್ಭುತ ಅಭಿನಯದ ಮೂಲಕವೆ ಜನಪ್ರಿಯ ಪಡೆದುಕೊಂಡಿದ್ದ ನಟಿ ಲಾಸ್ಯ ನಾಗರಾಜ್ ಅವರು ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ಇದನ್ನೂ ಓದಿ:ಟ್ರಾಫಿಕ್ನಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿಗಳಿಗೆ ಉದ್ಯೋಗ ಕೊಟ್ಟ ಸರ್ಕಾರ.. ಮನೆಯಲ್ಲಿ ಸಂಭ್ರಮ
ಹೌದು, ಇತ್ತೀಚಿಗೆ ಕೆನಡಾದ ಟೊರೊಂಟೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ನಟಿ ಬಿಗ್‌ಬಾಸ್ ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್ ಅವರು ಭಾಗಿಯಾಗಿದ್ದರು. ಅಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್ ಕಿರೀಟ ನಟಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ನೋವಾಕಾಸ್ಕೋ ವರ್ಲ್ಡ್ ವೈಡ್ ಪೆಜೇಂಟ್ಸ್ ಆಯೋಜನೆ ಮಾಡಿದ್ದ ಫ್ಯಾಷನ್ ಶೋ ಒಂದರಲ್ಲಿ ನಟಿ ಲಾಸ್ಯ ಮಿಂಚಿದ್ದಾರೆ. ಜೊತೆಗೆ ಆಸ್ಕರ್ ಕಾನ್ಸಿಡೆಂಟ್ ಕ್ಲೀನ್ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿದ್ದಾರೆ. ಕೆನಡಾದ ಟೊರೊಂಟೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವದ ನೂರಾರು ಮಾಡೆಲ್ಗಳ ಮಧ್ಯೆ ಱಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನೂ ನಟಿ ಲಾಸ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರನ್ನರ್ ಅಪ್ ಪ್ರಶಸ್ತಿ ಗೆದ್ದ ಖುಷಿಯಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್ ಪ್ರಶಸ್ತಿಯನ್ನು ಗೆಲ್ಲುವುದು ನಿಜವಾಗಿಯೂ ನನ್ನ ಇಚ್ಛೆ, ನನ್ನ ನಂಬಿಕೆ ವ್ಯವಸ್ಥೆ, ತಾಳ್ಮೆ ಮತ್ತು ಸಾಮರ್ಥ್ಯಗಳಿಗೆ ಸವಾಲಾಗಿತ್ತು.
ಸಣ್ಣ ವೈಫಲ್ಯಗಳು ಮತ್ತು ಗೆಲುವುಗಳು ಯಾವಾಗಲೂ ಸಾಧನೆಗೆ ನಿಮ್ಮನ್ನು ಸಿದ್ಧಪಡಿಸುತ್ತವೆ. ಹಾಗಾಗಿ ನಿಮ್ಮ ದಾರಿಯಲ್ಲಿ ಬರುವ ಯಾವುದೇ ಅವಕಾಶವನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಅಂತ ಬರೆದುಕೊಂಡಿದ್ದಾರೆ. ನಟಿ ಶೇರ್ ಮಾಡಿಕೊಂಡ ಫೋಟೋಸ್ ನೋಡಿದ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ