/newsfirstlive-kannada/media/post_attachments/wp-content/uploads/2025/03/vinay-gowda1-1.jpg)
ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್ಬಾಸ್ ಮೂಲಕ ಆನೆ ಅಂತಲೇ ಫೇಮಸ್ ಆಗಿದ್ದ ವಿನಯ್ ಗೌಡ ಹಾಗೂ ರಜತ್ ಬುಜ್ಜಿ ಮೇಲೆ ಎಫ್ಐಆರ್ ಆಗಿದೆ.
ಇದನ್ನೂ ಓದಿ: ಭಾರತಕ್ಕೆ ಜಾಕ್‌ಪಾಟ್: ಒಂದಲ್ಲ.. ಎರಡಲ್ಲ.. 7 ಕಡೆ KGF ಮಾದರಿಯ ಚಿನ್ನದ ನಿಕ್ಷೇಪ ಪತ್ತೆ; ಗುಡ್‌ನ್ಯೂಸ್!
ಹೌದು, ಕಾನೂನಿನ ಮುಂದೆ ಎಲ್ಲರೂ ಸಮಾನರು. ಸೋಶಿಯಲ್ ಮೀಡಿಯಾದಲ್ಲಿ ಯಾರೇ ಆಗಲಿ ಲಾಂಗ್, ಮಚ್ಚು ಹಿಡಿದು ಪೋಸ್ ಕೊಡುವಂತಿಲ್ಲ. ಹಾಗೇನಾದ್ರೂ ಹಿಡಿದ್ದಿದ್ದೇ ಆದ್ರೆ ಹೀಗೆ ಆಗುತ್ತದೆ. ಹೀಗೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಮೇಲೆ ಕೇಸ್ ದಾಖಲಾಗಿದೆ. ಐದು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿನಯ್ ಗೌಡ ಹಾಗೂ ರಜತ್ ಕಿಶನ್ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಆ ರೀಲ್ಸ್ ಅನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಅದೇ ವಿಡಿಯೋಯಿಂದ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಇನ್ನೂ, ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ನಟ ವಿನಯ್ ಗೌಡ ಹಾಗೂ ರಜತ್ ಕಿಶನ್ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಇನ್ನೂ ಪೊಲೀಸರಿಗೆ ನೀಡಿದ ಎಫ್ಐಆರ್ನಲ್ಲಿ ವಿನಯ್ ಗೌಡ ಅವರು, ಬೆಂಗಳೂರಿನ ನಾಗರಭಾವಿಯ ಅಕ್ಷಯ್ ಸ್ಟುಡಿಯೋದಲ್ಲಿ, ಖಾಸಗಿ ರಿಯಾಲಿಟಿ ಶೋಗೆ ಸಂಬಂಧಪಟ್ಟಂತೆ ಈ ವಿಡಿಯೋವನ್ನು ಶೂಟ್ ಮಾಡಿದ್ದೇವೆ. ಅಲ್ಲಿ ನಾನು ಪುಷ್ಪಾ ಪಾತ್ರವನ್ನು ಮತ್ತು ರಜತ್ ಕಿಶನ್ ದರ್ಶನ್ ಪಾತ್ರವನ್ನು ನಿರ್ವಹಿಸಿದ್ದಾರೆ.ಮನರಂಜನೆ ಮತ್ತು ಪ್ರಚಾರದ ಉದ್ದೇಶಗಳಿಗಾಗಿ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದೇವೆ. ಹೀಗಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ