/newsfirstlive-kannada/media/post_attachments/wp-content/uploads/2025/03/anusha-1.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಅನುಷಾ ರೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟೀವ್ ಆಗಿರೋ ಚೆಲುವೆ.
ಸದಾ ನಗು ಮುಖದ ಚೆಲುವೆ ಬಿಗ್ಬಾಸ್ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಯಾವಾಗಲೂ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಸ್ಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ನಟಿ ಅನುಷಾ ರೈ ಮತ್ತೊಂದು ವಿಡಿಯೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.
ಹೌದು, ನಟಿ ಅನುಷಾ ರೈ ಅವರು ಸದ್ಯ ಊರ ಹಬ್ಬದ ಸಂಭ್ರಮದಲ್ಲಿದ್ದಾರೆ. ಊರ ಹಬ್ಬದಲ್ಲಿ ಅನುಷಾ ರೈ ಅವರು ಕೆಂಡ ಹಾಯ್ದಿದ್ದಾರೆ.
ಊರ ಹಬ್ಬದಲ್ಲಿ ನಟಿ ಅನುಷಾ ರೈ ಚಂದವಾಗಿ ಸಿಂಗಾರಗೊಂಡು ಜಾತ್ರೆಯಲ್ಲಿ ಮಿಂಚಿದ್ದಾರೆ. ಕೆಂಡದಲ್ಲಿ ನಡೆದುಕೊಂಡು ಹೋಗಿರೋ ವಿಡಿಯೋವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನಟಿ ದೇವರ ಮೇಲೆ ಇಟ್ಟಿರೋ ಭಕ್ತಗೆ ಮನಸೋತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ