ಬೋಟ್​ ಒಳಗೆ ಹಾಟ್​ ಪೋಸ್ ಕೊಟ್ಟ ಬಿಗ್​ಬಾಸ್​ ಬೆಡಗಿ ದೀಪಿಕಾ ದಾಸ್..

author-image
Veena Gangani
Updated On
ಬೋಟ್​ ಒಳಗೆ ಹಾಟ್​ ಪೋಸ್ ಕೊಟ್ಟ ಬಿಗ್​ಬಾಸ್​ ಬೆಡಗಿ ದೀಪಿಕಾ ದಾಸ್..
Advertisment
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ದೀಪಿಕಾ ದಾಸ್​ ಫೋಟೋಸ್
  • ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಾಗಿಣಿ
  • ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್, ನಾಗಿಣಿ ಸೀರಿಯಲ್​​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಟಿ ದೀಪಿಕಾ ದಾಸ್ ಖುಷಿ ಮೂಡ್​ನಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಳ್ಳುತ್ತೇನೆ ಅಂತ ಹೇಳಿದ್ದ ದೀಪಿಕಾ ದಾಸ್​ ಮತ್ತೆ ವಾಪಸ್​​ ಆಗಿದ್ದಾರೆ.

ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!

publive-image

ಹೌದು, ಕನ್ನಡದ ನಟಿ ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಇದೀಗ ಇನ್​ಸ್ಟಾ ಖಾತೆಯಲ್ಲಿ ಮಿನಿ ಡ್ರೆಸ್​ ಧರಿಸಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

publive-image

ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ದೀಪಿಕಾ ದಾಸ್​ ಬೋಟ್​ ಒಳಗೆ ನಿಂತುಕೊಂಡು ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಫೋಟೋಶೂಟ್​ನಲ್ಲಿ ಬಿಳಿ ಬಣ್ಣದ ಮಿನಿ ಡ್ರೆಸ್​ನಲ್ಲಿ ಕಂಗೊಳಿಸಿದ್ದಾರೆ.

ಸದ್ಯ ಇದೇ ಫೋಟೋಸ್​ ನೋಡಿದ ಅಭಿಮಾನಿಗಳು, ಸೂಪರ್​ ದೀಪ್ಸ್​, ನಿಮ್ಮ ಡ್ರೆಸ್​​ ಮಸ್ತ್​ ಕಾಣುತ್ತಿದೆ ಅಂತೆಲ್ಲಾ ಕಾಮೆಂಟ್ಸ್​ ಹಾಕಿ ಅಭಿಪ್ರಾಯ ತಿಳಿಸಿದ್ದಾರೆ. ಸದ್ಯ ಇದೆ ಫೋಟೋ ವೈರಲ್​​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment