/newsfirstlive-kannada/media/post_attachments/wp-content/uploads/2025/07/divbya.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಒಂದಲ್ಲ ಒಂದು ಸುದ್ದಿಯಲ್ಲಿರೋ ಕ್ಯೂಟ್ ಜೋಡಿ. ಬಿಗ್ಬಾಸ್ ಸೀಸನ್ 8ರಲ್ಲಿ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು.
ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?
ಬಿಗ್ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರ ಮಧ್ಯೆ ಸ್ನೇಹ ಬೆಳೆಯಿತು. ಬಿಗ್ ಮನೆಯಿಂದ ಹೊರಗೆ ಬಂದ ಕೂಡಲೇ ಇಬ್ಬರ ನಡುವಿನ ಈ ಅನುಬಂಧ ಮುಂದುವರೆದಿತ್ತು. ಈ ಇಬ್ಬರು ಬಿಗ್ಬಾಸ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಅವರ ಮಾತು, ಟ್ಯಾಲೆಂಟ್ಗೆ ಅದೆಷ್ಟೋ ಜನರು ಫಿದಾ ಆಗಿಬಿಟ್ಟಿದ್ದಾರೆ. ಇದೀಗ ನಟಿ ದಿವ್ಯಾ ಉರುಡುಗ ಸಾಹಸವೊಂದನ್ನು ಮಾಡಿದ್ದಾರೆ. ಹೌದು, ದುಬೈನಲ್ಲಿ ಸ್ಕೈ ಡೈವಿಂಗ್ ಮಾಡಿದ್ದಾರೆ.
ಬರೋಬ್ಬರಿ 13 ಸಾವಿರ ಅಡಿ ಎತ್ತರದಿಂದ ಕೆಳಕ್ಕೆ ಜಂಪ್ ಮಾಡಿದ್ದಾರೆ. ಸ್ಕೈ ಡೈವಿಂಗ್ ಮಾಡಬೇಕು ಅಂತ ನಟಿ ದಿವ್ಯಾ ಉರುಡುಗ ಅವರಿಗೆ ಆಸೆ ಇತ್ತಂತೆ. ಕೊನೆಗೂ ಅದನ್ನೂ ಈಡೇರಿಸಿಕೊಂಡಿದ್ದಾರೆ.
ಇದೇ ವಿಡಿಯೋವನ್ನು ನಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಸ್ ಹಾಗೂ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅದ್ದೊಂದು ಅದ್ಭುತ ಅನುಭವ, ನೀವೇ ಪುಣ್ಯವಂತರು ಅಂತ ಕಾಮೆಂಟ್ಸ್ ಹಾಕಿದ್ದಾರೆ.
View this post on Instagram
ಇನ್ನೂ, ಆಹ್ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಕೇವಲ ಭಯಾನಕ ಆನಂದ. ಇದನ್ನು ಮತ್ತೆ ಮಾಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ನಾನು 13,000 ಅಡಿಗಳಿಂದ ಜಿಗಿದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ