/newsfirstlive-kannada/media/post_attachments/wp-content/uploads/2025/03/kavya1.jpg)
ಕನ್ನಡದ ನಟಿ, ನಿರೂಪಕಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಕಾವ್ಯ ಶಾಸ್ತ್ರಿ ಅವರು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಭಿಕ್ಷೆ ಬೇಡಿ ಊಟ ಮಾಡಿದ್ದಾರೆ. ಹೌದು ಬಿಗ್ಬಾಸ್ ಸೀಸನ್ 4ರ ಮಾಜಿ ಸ್ಪರ್ಧಿ ಕಾವ್ಯ ಶಾಸ್ತ್ರಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ವಂತಾರಾದಲ್ಲಿ ಪ್ರಧಾನಿ ಮೋದಿ ಹುಲಿ, ಸಿಂಹದ ಮರಿಗಳ ಜೊತೆ ಆಟ; ವಿಡಿಯೋ ಇಲ್ಲಿದೆ!
ಹೌದು, ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರೋ ಕಾಶಿ ವಿಶ್ವನಾಥನ ಸನ್ನಿಧಿಗೆ ನಟಿ ಕಾವ್ಯಾ ಶಾಸ್ತ್ರಿ ಅವರು ಭೇಟಿ ಕೊಟ್ಟಿದ್ದಾರೆ. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತೇನೆ ಅಂತ ಹರಕೆ ಹೊತ್ತಿಕೊಂಡಿದ್ದರು. ಇದೀಗ ಆ ಹರಕೆಯನ್ನು ನಟಿ ತಿರಿಸಿದ್ದಾರೆ.
View this post on Instagram
2020ರಲ್ಲಿ ಕರೋನಾ ಎನ್ನುವ ಭಯ ಯಾರನ್ನೂ ಬಿಟ್ಟಿಲ್ಲ. ಕರೋನಾದಿಂದಾಗಿ ನನ್ನ ತಂದೆ ಕಳೆದೆ ಹೋಗುತ್ತಾರೆ ಎನ್ನುವ ಭಯದಲ್ಲಿ ಸಿಕ್ಕ ಸಿಕ್ಕ ದೇವರಿಗೆ, ಸಿಕ್ಕ ಸಿಕ್ಕ ಹರಕೆ ಹೊತ್ತುಕೊಂಡಿದ್ದೆ. ಅದರಲ್ಲಿ ಒಂದು ಹರಕೆ ಇದು. ಕಾಶಿ ವಿಶ್ವನಾಥನ ಸನ್ನಿಧಿ. ಕಾಶಿ ವಿಶ್ವನಾಥನಲ್ಲಿ, ನನ್ನ ತಂದೆಯ ಜೀವದ ಭಿಕ್ಷೆ ಕೊಡು. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಒಂದಿಡೀ ದಿನದ ಊಟ ಮಾಡ್ತೇನೆ ಅಂತ ಕೇಳಿಕೊಂಡಿದ್ದೆ. ಈ ಹರಕೆ ತೀರಿಸುವ ಸೌಭಾಗ್ಯ ನಾನು ಮೊನ್ನೆ ಕಾಶಿಗೆ ಹೋದಾಗ ಸಿಕ್ಕಿತು. ಇದೇನು ಅಂಧ ವಿಶ್ವಾಸ ಎಂದು ನೀವು ಅಂದುಕೊಳ್ಳಬಹುದು. ಕಷ್ಟದಲ್ಲಿ ಇದ್ದಾಗ ನಾವು ಏನು ಬೇಕಾದರೂ ಮಾಡುತ್ತೇವೆ. ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಒಂದು ಪವಿತ್ರವಾದ ಸ್ಥಾನವಿದೆ. ಅದು ನಾನು ನನ್ನದು ಅಹಂಕಾರ ಎಲ್ಲ ಮೋಹವನ್ನು ಕಳೆಸುತ್ತೆ. ಒಬ್ಬರ ಮುಂದೆ ಕೈ ಚಾಚಿ ಭಿಕ್ಷೆ ಬೇಡುವಾಗ, ದುರಂಕಾರ ಎಲ್ಲ ಹೋಗುತ್ತೆ. ಇದೇ ಭೀಕ್ಷಾಟನೆಯ ಪಾವಿತ್ರತೆ. ದುಡ್ಡು ಹೆಸರು ಎಲ್ಲ ಜೀವನದ ಮುಂದೆ ಏನು ಅಲ್ಲ. ಜೀವ ಅನ್ನೋದೇ ಪರಮಾತ್ಮನ ಭಿಕ್ಷೆ, ಒಟ್ಟಿನಲ್ಲಿ ಇಂದು ನಾನು ತಂದೆ ತಾಯಿ ಜೊತೆ ಖುಷಿಯಾಗಿದ್ದೇನೆ ಎಂದು ಹೇಳುತ್ತಲೇ ಭಿಕ್ಷೆ ಬೇಡಿ ಅದರಿಂದ ಬಂದ ಹಣದಲ್ಲಿ ಊಟ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ