ಬಿಗ್​ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ ಮನೆಗೆ ಹೊಸ ಅತಿಥಿ ಆಗಮನ; ಏನದು?

author-image
Veena Gangani
Updated On
ಬಿಗ್​ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ ಮನೆಗೆ ಹೊಸ ಅತಿಥಿ ಆಗಮನ; ಏನದು?
Advertisment
  • ಬಿಗ್​ಬಾಸ್​ ಮೂಲಕ ಫೇಮಸ್​ ಆದ ನಟಿ ಐಶ್ವರ್ಯ
  • ಬಿಗ್​ಬಾಸ್​ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದ ಐಶೂ
  • ಐಶ್ವರ್ಯ ಶಿಂಧೋಗಿ ಮನೆಗೆ ಹೊಸ ಅತಿಥಿ ಎಂಟ್ರಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ ಈ ನಟಿ. ನಾಗಿಣಿ ಸೀರಿಯಲ್​ ಮೂಲಕ ಫೇಮಸ್​ ಆಗಿ ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಅಪ್ಪನಾಗೋ ಖುಷಿಯಲ್ಲಿರೋ ವಾಸುಕಿ ವೈಭವ್​ಗೆ ಕ್ಯೂಟ್ ಸರ್​ಪ್ರೈಸ್​ ಕೊಟ್ಟ ಅರುಣ್​ ಸಾಗರ್ ದಂಪತಿ

publive-image

ಬಿಗ್​ಬಾಸ್​ ಮನೆಯಲ್ಲೇ ಹುಟ್ಟುಕೊಂಡಿದ್ದ ಸ್ನೇಹಿತರ ಜೊತೆಗೆ ದೇಶ ವಿದೇಶ ಸುತ್ತಿ ಎಕ್ಸಪ್ಲೋರ್  ಮಾಡುವುದರಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹೌದು, ಅವರು ಬೇರೆ ಯಾರು ಅಲ್ಲಾ, ಕರ್ನಾಟಕದ ಮಗಳು ಐಶ್ವರ್ಯ ಶಿಂಧೋಗಿ.

publive-image

ನಟಿ ಐಶ್ವರ್ಯ ಶಿಂಧೋಗಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ದುಬಾರಿ ಬೆಲೆಯ ಕಾರನ್ನು ನಟಿ ಐಶ್ವರ್ಯ ಶಿಂಧೋಗಿ ಖರೀದಿ ಮಾಡಿದ್ದಾರೆ. ಹೊಚ್ಚ ಹೊಸ ಕಾರನ್ನು ಖರೀದಿ ಸಮಯದಲ್ಲಿ ಸ್ನೇಹಿತರಾದ ಮೋಕ್ಷಿತಾ ಪೈ ಹಾಗೂ ಶಿಶಿರ್​ ಶಾಸ್ತ್ರಿ ಕೂಡ ಭಾಗಿಯಾಗಿದ್ದರು.

publive-image

ಇನ್ನೂ, ನಟಿ ಐಶ್ವರ್ಯ ಶಿಂಧೋಗಿ MG ಹೆಕ್ಟರ್ ಪ್ಲಸ್ ಕಾರನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆಯೂ ಭಾರತದಲ್ಲಿ ₹17.50 ಲಕ್ಷದಿಂದ ₹23.67 ಲಕ್ಷದವರೆಗೆ ಇದೆ. ಸದ್ಯ ಹೊಸ ಕಾರನ್ನು ಖರೀದಿ ಮಾಡಿರೋ ಖುಷಿಯಲ್ಲಿ ಐಶ್ವರ್ಯ ಶಿಂಧೋಗಿ ಇದ್ದಾರೆ.

publive-image

ಸದ್ಯ ಹೊಸ ಕಾರನ್ನು ಪರ್ಚೇಸ್ ಮಾಡಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೇ ನೋಡಿದ ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment