/newsfirstlive-kannada/media/post_attachments/wp-content/uploads/2025/06/Aishwarya-Shindogi1.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಮೂಲಕ ಸಖತ್​​ ಫೇಮಸ್​ ಆಗಿದ್ದ ಐಶ್ವರ್ಯ ಸಿಂಧೋಗಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.
ಇದನ್ನೂ ಓದಿ:ಬಿ.ದಯಾನಂದ್ ತಲೆದಂಡ ಬೆನ್ನಲ್ಲೇ ಹೊಸ ಆಯುಕ್ತರ ನೇಮಕ.. ನೂತನ ಪೊಲೀಸ್ ಕಮಿಷನರ್ ಇವರೇ..!
ನಟಿ ಐಶ್ವರ್ಯ ಸಿಂಧೋಗಿ ಅವರು ಬಿಗ್​ಬಾಸ್ ಮೂಲಕವೇ ಮನೆ ಮಗಳು ಎಂದು ಕರೆಸಿಕೊಂಡರು. ಐಶ್ವರ್ಯ ಸಿಂಧೋಗಿ ಅವರು ತಮ್ಮ ತಂದೆ ಕಳೆದುಕೊಂಡಿದ್ದಾರೆ. ಹೋಗಾಗಿ ಬಿಗ್​ಬಾಸ್​ ಮನೆಯಲ್ಲಿದ್ದಾಗ ಆ ಸ್ಥಾನವನ್ನು ಸ್ವತಃ ಬಿಗ್ ಬಾಸ್ ತುಂಬಿದರು.
ಸದ್ಯ ಬಿಗ್​ಬಾಸ್​ನಿಂದ ಆಚೆ ಬಂದ ಮೇಲೆ ನಟಿ ಐಶ್ವರ್ಯ ಸಿಂಧೋಗಿ ಅವರು ಹೊಚ್ಚ ಹೊಸ ಸೀರಿಯಲ್​ನಲ್ಲಿ ನಟಿಸೋದಕ್ಕೆ ಸಜ್ಜಾಗಿದ್ದಾರೆ. ಹೌದು, ಐಶ್ವರ್ಯ ಸಿಂಧೋಗಿ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್​ನಲ್ಲಿ ನಟಿಸೋದಕ್ಕೆ ಸಜ್ಜಾಗಿದ್ದಾರೆ.
ಈಗ ಐಶ್ವರ್ಯ ಸಿಂಧೋಗಿ ಅವರು ಇರೋ ಪ್ರೋಮೋವನ್ನು ಸ್ಟಾರ್ ಸುವರ್ಣ ವಾಹಿನಿಯು ಹಂಚಿಕೊಂಡಿದೆ. ‘ಹೆಸರು ಮಾತ್ರ ಸಾಕ್ಷಿ, ಆದರೆ ಮನಸಾಕ್ಷಿ ಇಲ್ಲ. ಮಹಾಭಾರತದಲ್ಲಿ ಮೆರೆಯೋ ದುರಹಂಕಾರಿ ಧುರ್ಯೋದನ ಇಷ್ಟ’ ಎಂದು ಐಶ್ವರ್ಯ ಅವರ ಪಾತ್ರ ಪರಿಚಯ ಆಗುತ್ತದೆ. ಇದು ನೆಗೆಟಿವ್ ಶೇಡ್ ಎಂಬುದು ಸ್ಪಷ್ಟವಾಗಿದೆ. ಕಥಾ ನಾಯಕ-ನಾಯಕಿ ಮಧ್ಯೆ ಸಾಕ್ಷಿ ಬರುತ್ತಾಳೆ. ರಾಣಾ ಪಾತ್ರದಲ್ಲಿ ಸುಂದರ್ ಅವರು ನಟಿಸಿದ್ದಾರೆ. ಈ ಪ್ರೋಮೋ ಅಭಿಮಾನಿಗಳ ಗಮನ ಸೆಳೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ