/newsfirstlive-kannada/media/post_attachments/wp-content/uploads/2025/05/aishu.jpg)
ರೀಲ್ಸ್ ಟ್ರೆಂಡ್ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ರಿಯಲ್ ಲೈಫ್ನಲ್ಲಿ ಬದುಕುವುದಕ್ಕಿಂತ ಹೆಚ್ಚಾಗಿ ರೀಲ್ಸ್ನಲ್ಲೇ ಲೈಫ್ನ ಬ್ಯೂಟಿಫುಲ್ ಆಗಿ ತೋರಿಸೋ ಕಾಲ ಇದು. ಆರ್ಟಿಸ್ಟ್ಗಳಿಗೆ ಒಳ್ಳೆ ಪ್ಲಾಟ್ ಫಾರ್ಮ್ ಕೂಡ ಹೌದು. ನಟಿ ಐಶ್ವರ್ಯ ಸಿಂಧೋಗಿ ಹೊಸ ಪ್ರಯತ್ನ ಪಡುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆ ಇಂದಿನಿಂದ ಶಾಲೆ ಆರಂಭ; ಪೋಷಕರು ಓದಲೇಬೇಕಾದ ಸ್ಟೋರಿ ಇದು!
ಇನ್ನೂ, ನಟಿ ಐಶ್ವರ್ಯ ಸಿಂಧೋಗಿ ಕಲರ್ಫುಲ್ ಲೈಫ್ನ ಇಷ್ಟ ಪಡೋ ಚಲುವೆ. ಬಿಗ್ ಬಾಸ್ ನಂತರ ಐಶೂ ಲೈಫೇ ಬದಲಾಗಿದೆ. ಕರ್ನಾಟಕದ ಮಗಳು ಈಗ ಹೊಸ ಪ್ರಯತ್ನಗಳನ್ನ ಮಾಡ್ತಿದ್ದಾರೆ. ಈಗಂತೂ ಸಖತ್ ಟ್ರೆಂಡ್ನಲ್ಲಿದೆ ರೀಲ್ಸ್. ಎರಡುವರೆ ಗಂಟೆಯಲ್ಲಿ ತೋರಿಸೋ ಸಿನಿಮಾನ 30 ಸೆಕೆಂಡ್ನಲ್ಲಿ ಕಟ್ಟಿಕೊಡೋ ಕಾಲ. ಕಾಮಿಡಿ, ಲವ್, ಸಸ್ಪೆನ್ಸ್ ಎಲ್ಲಾ ತರಹದ ಫ್ಲೇವರ್ಸ್ ಚಿಟಿಕೆ ಹೊಡೆಯುವುದರಲ್ಲಿ ಸಿಗುತ್ತೆ.
View this post on Instagram
ವೀಕ್ಷಕರು ಇದಕ್ಕೆ ಅಡಿಕ್ಟ್ ಕೂಡ ಆಗಿದ್ದಾರೆ. ಹೀಗಾಗಿ ರೀಲ್ಸ್ನಲ್ಲೇ ಹೊಸ ಪ್ರಯೋಗಗಳು ನಡೀತಾ ಇರುತ್ತೆ. ಡಿಕೆಡಿ ಖ್ಯಾತಿಯ ಕೊರಿಯೋಗ್ರಾಫರ್ ವರುಣ್ ಜೊತೆ ಐಶ್ವರ್ಯ ರೀಲ್ಸ್ ಮಾಡಿದ್ದು ವೈರಲ್ ಆಗ್ತಿದೆ. ನೀ ಸಿಗೊವರೆಗೂ... ನಗೊವರೆಗೂ... ಕಾದಿರುವೆ... ಹಾಡಿಗೆ ಐಶ್ವರ್ಯ ಹಾಗೂ ವರುಣ್ ಬ್ಯೂಟಿಫುಲ್ ಪರ್ಫಾಮನ್ಸ್ ಮಾಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಸರ್ಪ್ರೈಸ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ