ಹೋಳಿ ಹಬ್ಬದ ದಿನವೇ ರಾಜಾ ರಾಣಿಯಂತೆ ಮಿಂಚಿದ ಶಿಶಿರ್, ಐಶ್ವರ್ಯಾ ಸಿಂಧೋಗಿ; ಫ್ಯಾನ್ಸ್​ ಫುಲ್ ಖುಷ್!

author-image
Veena Gangani
Updated On
ಹೋಳಿ ಹಬ್ಬದ ದಿನವೇ ರಾಜಾ ರಾಣಿಯಂತೆ ಮಿಂಚಿದ ಶಿಶಿರ್, ಐಶ್ವರ್ಯಾ ಸಿಂಧೋಗಿ; ಫ್ಯಾನ್ಸ್​ ಫುಲ್ ಖುಷ್!
Advertisment
  • ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದುಕೊಂಡ ಐಶೂ, ಶಿಶಿರ್
  • ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಫೇಮಸ್​ ಈ ಜೋಡಿ
  • ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಮತ್ತೆ ಒಂದಾದ ಈ ಇಬ್ಬರು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಆಚೆ ಬಂದ ಮೇಲೆ ಈ ಇಬ್ಬರು ಮತ್ತಷ್ಟೂ ಕ್ಲೋಸ್​ ಆಗಿದ್ದಾರೆ. ಅವರು ಬೇರೆ ಯಾರೂ ಅಲ್ಲ.. ಅವರೇ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ.

ಇದನ್ನೂ ಓದಿ: ಸೂಪರ್​ ಸ್ಟಾರ್ ರಜನಿಕಾಂತ್ ಬಣ್ಣಗಳ ಹಬ್ಬವನ್ನು ಆಚರಿಸೋದಿಲ್ಲ ಏಕೆ? ಇಲ್ಲಿದೆ ಆ ಸೀಕ್ರೆಟ್!

publive-image

ಇದರ ಮಧ್ಯೆ ಈ ಜೋಡಿ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ರೀಲ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹೋಳಿ ಹಬ್ಬದ ದಿನವೇ ಈ ಕ್ಯೂಟ್​ ರೀಲ್ಸ್​ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಶಿಶಿರ್​ ಅವರ ಕೆನ್ನೆಗೆ ಐಶ್ವರ್ಯಾ ಮುತ್ತು ಕೊಟ್ಟಿದ್ದಾರೆ.

publive-image

ಈ ವಿಡಿಯೋ ಜೊತೆಗೆ ವಸಂತ ಮಾಸವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಹೋಳಿ ಹಬ್ಬವು ನಿಮ್ಮೆಲ್ಲರ ಬದುಕಲ್ಲೂ ಪ್ರೀತಿ,ಸ್ನೇಹ, ಹರುಷದ ಬಣ್ಣಗಳು ಸದಾ ಹೊನಲಾಗಿಸಲಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಇಬ್ಬರು ಸೇಮ್​ ರಾಜಾ ರಾಣಿಯಂತೆ ಕಂಗೊಳಿಸಿದ್ದಾರೆ. ಐಶೂ ನೀಲಿ ಬಣ್ಣದ ಗೌನ್​ನಲ್ಲಿ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ.

publive-image

ಇನ್ನೂ, ಬಿಗ್​ಬಾಸ್​ಗೆ ಬರುವ ಮುನ್ನ ಶಿಶಿರ್ ಹಾಗೂ ಐಶ್ವರ್ಯಾ ​ಸ್ನೇಹಿತರಾಗಿದ್ದರು. ಈ ಇಬ್ಬರು ಒಟ್ಟಿಗೆ ಒಂದು ಸಿನಿಮಾ ಕೂಡ ಮಾಡಿದ್ದರು. ಆದ್ದರಿಂದ ಇವರಿಬ್ಬರ ಮೇಲೆ ವೀಕ್ಷಕರ ಕಣ್ಣು ಕೂಡ ನೆಟ್ಟಿತ್ತು. ಒಂದು ಹಂತದಲ್ಲಿ ಒಬ್ಬರ ಮೇಲೆ ಒಬ್ಬರು ತೋರುವ ಪ್ರೀತಿ ನೋಡಿ, ಇವರಿಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ ಎಂದೇ ಹೇಳಲಾಗಿತ್ತು. ಈ ಬಗ್ಗೆ ಬಿಗ್​ಬಾಸ್​​ನಿಂದ ಆಚೆ ಬಂದ ಮೇಲೆ ಈ ಬಗ್ಗೆ ಮಾತನಾಡಿದ್ದರು.


ಲವ್​, ಕ್ರಷ್​ ಅಂತ ನಮ್ಮ ನಡುವೆ ಇಲ್ಲ. ನಮ್ಮಿಬ್ಬರದ್ದು ಪರಿಶುದ್ಧವಾದ ಸ್ನೇಹ ಅಷ್ಟೇ. ನಾವಿಬ್ಬರೂ ಬಿಗ್​ಬಾಸ್​​ಗಿಂತಲೂ ಮೊದಲೇ ಬಲ್ಲವರು ಅಷ್ಟೇ. ಆದರೆ ನಮ್ಮಿಬ್ಬರ ನಡುವೆ ಒಳ್ಳೆ ಬಾಂಧವ್ಯ ಶುರುವಾಗಿದ್ದೇ ಟಾಸ್ಕ್‌ ಬಳಿಕ. ಆ ಸಮಯದಲ್ಲಿ ಪರಸ್ಪರ ಕುಗ್ಗಿದಾಗ ಪ್ರೋತ್ಸಾಹಿಸುತ್ತಿದ್ದೆವು ಅಷ್ಟೇ.  ಈ ರೀತಿಯಾಗಿ ನಮ್ಮ ಸ್ನೇಹ ಬೆಳೆದಿದೆ ವಿನಃ ಏನೂ ಇಲ್ಲ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment