/newsfirstlive-kannada/media/post_attachments/wp-content/uploads/2025/02/anusha-rai3.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಸಖತ್ ಬ್ಯುಸಿಯಾಗಿದ್ದಾರೆ. ಕೆಲವು ಸ್ಪರ್ಧಿಗಳು ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರೇ, ಇನ್ನೂ ಕೆಲವರು ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಡಾಲಿ ಮದ್ವೆಯಲ್ಲಿ 100 ವರ್ಷ ಇತಿಹಾಸ ಇರೋ ಸೀರೆ ಧರಿಸಿದ್ದ ಮಾಳವಿಕ ಅವಿನಾಶ್; ಇದರ ವಿಶೇಷತೆ ಏನು?
ಇದರ ಮಧ್ಯೆ ಕನ್ನಡ ನಟಿ, ಬಿಗ್ಬಾಸ್ ಸ್ಪರ್ಧಿ ಅನುಷಾ ರೈ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ನಟಿ ಅನುಷಾ ರೈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಆ ವಿಡಿಯೋ ಜೊತೆಗೆ ಪ್ರಯಾಗ್ ರಾಜ್ನ ಮಹಾ ಕುಂಭಮೇಳ ನೋಡುತ್ತಲೇ ಹಾಕಿತ್ತು ಹೃದಯ ತಾಳ. ಗಂಗಾ ಯಮುನಾ ಸರಸ್ವತಿಯ ತ್ರಿವೇಣಿ ಸಂಗಮ ಒಮ್ಮೆ ಮುಳುಗೆದ್ದರೆ ಮನದಲ್ಲಿ ಮಹಾ ಸಂಭ್ರಮ, ಜೊತೆಯಲ್ಲಿ ಕೋಟ್ಯಾಂತರ ಭಕ್ತರ ಸಮಾಗಮ. ಬೆಳಗಲಿ ನಮ್ಮ ಹಿಂದೂ ಧರ್ಮ, ಕಳೆಯಲಿ ಎಲ್ಲ ಪಾಪ ಕರ್ಮ, ಕಡೆಗೂ ಆಯ್ತು ಪುಣ್ಯ ಸ್ನಾನ, ಎದೆಯಲ್ಲಿ ಸದಾ ಶಿವನದ್ದೇ ಧ್ಯಾನ ಎಂದು ಬರೆದುಕೊಂಡಿದ್ದಾರೆ.
ಇನ್ನೂ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳ ಜನವರಿ 13ರಂದು ಆರಂಭಗೊಂಡಿತ್ತು. ಫೆಬ್ರವರಿ 3 ರಂದು ಕೊನೆಯ ಅಮೃತ ಸ್ನಾನ ನಡೆದಿತ್ತು. ಇದೀಗ ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನ ಫೆಬ್ರವರಿ 26ರಂದು ಮಹಾಶಿವರಾತ್ರಿಯಂದು ನಡೆಯಲಿದೆ. ಹೀಗಾಗಿ ಈಗಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ