/newsfirstlive-kannada/media/post_attachments/wp-content/uploads/2025/04/bhavya-gowda.jpg)
ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಸೀರಿಯಲ್​ ಮೂಲಕ ಸಖತ್ ಫೇಮಸ್ ಆಗಿದ್ದರು ಭವ್ಯಾ ಗೌಡ. ಈ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡು ಬಿಗ್​ಬಾಸ್​ ಮನೆಗೂ ಎಂಟ್ರಿ ಕೊಟ್ಟು ಸೂಪರ್​ ಪರ್ಪಾಮೆನ್ಸ್ ಕೂಡ ಕೊಟ್ಟಿದ್ದರು. ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡಿದ್ದ ಭವ್ಯಾ ಗೌಡಗೆ ಇದೀಗ ಮತ್ತೆ ಕಿರುತೆರೆ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!
ಹೌದು, ಗೀತಾ ಸೀರಿಯಲ್​ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟು ಜನಪ್ರಿಯತೆ ಪಡೆದುಕೊಂಡರು. ಇದಾದ ಬಳಿಕ ಬಿಗ್​ಬಾಸ್​ ಸೀಸನ್ 11ಕ್ಕೆ ಎಂಟ್ರಿ ಕೊಟ್ಟರು. ಬಿಗ್​ಬಾಸ್​ ಮುಕ್ತಯಾಗೊಂಡ ಬೆನ್ನಲ್ಲೇ ಇದೀಗ ಮತ್ತೊಂದು ಸೀರಿಯಲ್​ನಲ್ಲಿ ಮಿಂಚೋದಕ್ಕೆ ಸಜ್ಜಾಗಿದ್ದಾರೆ ಭವ್ಯಾ ಗೌಡ.
ಅದು ಕೂಡ ಬಹುನಿರೀಕ್ಷಿತ ಸೀರಿಯಲ್​ನಲ್ಲಿ ನಟಿ ಭವ್ಯಾ ಗೌಡ ಅಭಿನಯಿಸೋದಕ್ಕೆ ಸಜ್ಜಾಗಿದ್ದಾರೆ. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರೋ ಕರ್ಣ ಧಾರಾವಾಹಿಗೆ ಭವ್ಯಾ ಗೌಡ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇಷ್ಟು ದಿನ ಕಿರಣ್​ ರಾಜ್​ಗೆ ಜೋಡಿಯಾಗಿ ಬರೋದು ಯಾರು ಅಂತ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಅದರಲ್ಲೂ ಮುಖ್ಯವಾಗಿ ಕೇಳಿ ಬಂದಿರೋ ಹೆಸರುಗಳು ರಂಜಿನಿ ರಾಘವನ್​, ಮೋಕ್ಷಿತಾ ಪೈ ಹಾಗೂ ಭವ್ಯಾ ಗೌಡ.
ಕಿರಣ್​ ಫ್ಯಾನ್ಸ್ ಸೇರಿದಂತೆ ಮೂವರು ನಾಯಕಿರ ಅಭಿಮಾನಿಗಳೂ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡಿದ್ರು. ಸದ್ಯ ಫೈನಲಿ ನಾಯಕಿ ಯಾರು ಅನ್ನೋದು ರಿವೀಲ್​ ಆಗಿದೆ. ಅವ್ರು ಬೇರೆ ಯಾರು ಅಲ್ಲ, ಅಭಿಮಾನಿಗಳ ಆಶಯಂತೆ ಎಂಟ್ರಿ ಕೊಡ್ತಿದ್ದಾರೆ ಭವ್ಯಾ ಗೌಡ. ಇಷ್ಟು ದಿನ ಯಾವ ಪ್ರಾಜೆಕ್ಟ್​ಗೂ ಕೈ ಹಾಕದ ಭವ್ಯಾ ಗೌಡ ಇದೀಗ ಹೊಚ್ಚ ಹೊಸ ಕರ್ಣ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ