/newsfirstlive-kannada/media/post_attachments/wp-content/uploads/2025/05/CHAITRA_KUNDAPURA.jpg)
ಬಿಗ್ ಬಾಸ್ ಸೀಸನ್- 11ರ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ಅವರು ದಾಂಪತ್ಯ ಜೀವನಕ್ಕೆ ಇಂದು ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದ್ದು ವಿವಾಹ ಸಡಗರದ ಮಾತುಗಳೇ ಬಂಧುಬಳಗದಲ್ಲಿ ಜೋರಾಗಿ ಕೇಳಿ ಬರುತ್ತಿವೆ. ಇದರ ಜೊತೆಗೆ ಚೈತ್ರಾ ಕುಂದಾಪುರ ಅವರು ಕೈಹಿಡಿಯುತ್ತಿರುವ ಹುಡುಗ ಯಾರು?.
ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿದೆ. ಏಕೆಂದರೆ ಬಿಗ್ ಬಾಸ್ ಬಳಿಕ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ಗೊತ್ತು. ಅದರಂತೆ ಅವರು ವಿವಾಹವಾಗುತ್ತಿರುವ ಆ ಹುಡುಗ ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ. ಇದೀಗ ಅವರ ಹೆಸರು, ಅವರ ಫೋಟೋ ಸೇರಿ ಇತರೆ ಮಾಹಿತಿ ಇಲ್ಲಿವೆ.
ಚೈತ್ರಾ ಕುಂದಾಪುರ ಅವರನ್ನು ಮದುವೆ ಆಗುತ್ತಿರುವ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್. ಕಾಲೇಜು ದಿನಗಳಿಂದಲೂ ಚೈತ್ರಾ ಹಾಗೂ ಶ್ರೀಕಾಂತ್ ಕಶ್ಯಪ್ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ನಡುವೆ ಚೈತ್ರಾ ಅವರು ಮದುವೆ ಬಗ್ಗೆ ಮಾತು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಇಬ್ಬರ ಪ್ರೀತಿಗೆ ಅಧಿಕೃತವಾಗಿ ಮುದ್ರೆ ಬೀಳುತ್ತಿದೆ.
ಶ್ರೀಕಾಂತ್ ಕಶ್ಯಪ್ ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕ ಪಟ್ಟಣದವರು. ಆನಿಮೇಷನ್ ಓದಿದ್ದರೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದೆ. ಚೈತ್ರಾಗೆ, ಶ್ರೀಕಾಂತ್ ಕಾಲೇಜು ದಿನಗಳಿಂದಲೇ ಪರಿಚಯ. ಇದೇ ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಯಾಗಿ ಮಾರ್ಪಟ್ಟು 12 ವರ್ಷಗಳ ಕಾಲ ಲವ್ ಮಾಡಿದ್ದರು.
ಇದನ್ನೂ ಓದಿ:ಪಾಕಿಸ್ತಾನದ 7 ನಗರಗಳು ಭಾರತದ ಟಾರ್ಗೆಟ್.. ಲಾಹೋರ್, ಕರಾಚಿ, ಇಸ್ಲಾಮಾಬಾದ್ ತತ್ತರ!
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ಇಂದು ನಡೆಯಲಿದೆ. ಚೈತ್ರಾ ಕುಂದಾಪುರ ಅವರ ಮೆಹಂದಿ ಕಾರ್ಯಕ್ರಮ ಜೋರಾಗಿ ನಡೆದಿದ್ದು ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವಾರು ಜನರು ವಿಶ್ ಮಾಡುತ್ತ, ಕಮೆಂಟ್ಸ್ ಕೂಡ ಮಾಡುತ್ತಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ