/newsfirstlive-kannada/media/post_attachments/wp-content/uploads/2025/03/CHAITRA.jpg)
ಬಿಗ್ ಬಾಸ್ ಕನ್ನಡ ಶೋನ ಮಾಜಿ ಸ್ಪರ್ಧಿ, ನಿರೂಪಕಿ ಚೈತ್ರಾ ವಾಸುದೇವನ್ ಅವರು ಉದ್ಯಮಿ ಜಗದೀಪ್.ಎಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ಕಡೆಯ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ಮಾಡಿಕೊಂಡಿದ್ದಾರೆ.
ಚೈತ್ರಾ ವಾಸುದೇವನ್ ಅವರು ಮೈಸೂರು ಮೂಲದ ಉದ್ಯಮಿ ಜಗದೀಪ್ ಅವರ ಕೈ ಹಿಡಿದಿದ್ದಾರೆ. ಸದ್ಯ ಅದ್ಧೂರಿಯಾಗಿ ಚೈತ್ರಾ ವಾಸುದೇವನ್ ಅವರು 2ನೇ ಮದವೆ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ನಿರೂಪಕಿ ಮತ್ತು ಈವೆಂಟ್ ಆರ್ಗನೈಸರ್ ಆಗಿರುವ ಚೈತ್ರಾ ವಾಸುದೇವನ್, ಎಲ್ಲಾ ಈವೆಂಟ್‌ಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡುತ್ತಾರೆ. ಇದು ತಮ್ಮದೇ ಮದುವೆ ಆಗಿದ್ದರಿಂದ ಇನ್ನು ಕೇಳಬೇಕಾ?. ವಿವಾಹ ಅಂತೂ ಅದ್ಧೂರಿಯಾಗಿ ನೆರವೇರಿದೆ.
ಇದನ್ನೂ ಓದಿ:ಹುಲಿಯಿಂದ ಮಾಲೀಕನ ಕಾಪಾಡಿದ ಜರ್ಮನ್ ಶೆಪರ್ಡ್ ನಾಯಿ.. ಆದ್ರೆ ಆ ಮೇಲೆ ಆಗಿದ್ದೆ ದುಃಖಕರ
ಚೈತ್ರಾ ವಾಸುದೇವನ್ಗೆ ಜಗದೀಪ್ ಪರಿಚಯ ಆಗಿದ್ದೇಗೆ?
ಸ್ನೇಹಿತನ ಮಗುವಿನ ಬರ್ತ್ಡೇಗಾಗಿ ಜಗದೀಪ್ ಅವರು ಚೈತ್ರಾಗೆ ಕಾಲ್ ಮಾಡಿರುತ್ತಾರೆ. ಆ ಮೇಲೆ ಒಮ್ಮೆ ಮೀಟ್ ಆದಾಗ ಇಬ್ಬರು ಒಂದೇ ಜಿಮ್ನಲ್ಲಿ ವರ್ಕೌಟ್ ಮಾಡೋದು ಎನ್ನುವುದು ತಿಳಿದು ಶಾಕ್ ಆಗುತ್ತಾರೆ. ಮೊದಲ ಭೇಟಿಯಲ್ಲೇ ಚೈತ್ರಾಗೆ, ಜಗದೀಪ್ ಪ್ರಪೋಸಲ್ ಮಾಡಿದ್ದರು. ಆದರೆ ತಕ್ಷಣಕ್ಕೆ ಒಪ್ಪಿಕೊಳ್ಳದ ಚೈತ್ರಾ ಸಮಯ ತೆಗೆದುಕೊಂಡಿದ್ದರು. ಚೈತ್ರಾ ಸಮಯ ತೆಗೆದುಕೊಂಡಿದ್ದನ್ನ ಯೋಚಿಸದೇ ಜಗದೀಪ್, ಚೈತ್ರಾ ಅವರ ಅಪ್ಪ ಅಮ್ಮ ಬಳಿ ಈ ಕುರಿತು ಮಾತಾಡಿದ್ದರು. ಇದರ ಬೆನ್ನಲ್ಲೇ ಈಗ ಮದುವೆ ಕೂಡ ಸಂಭ್ರಮದಿಂದ ನೆರವೇರಿದೆ.
ಚೈತ್ರಾ ವಾಸುದೇವನ್ ಅವರು ಈಗಾಗಲೇ ಸತ್ಯ ನಾಯ್ಡು ಎನ್ನುವರನ್ನು ಮದುವೆ ಆಗಿದ್ದರು. ಆ ನಂತರ ಸಂಸಾರದಲ್ಲಿನ ಸಮಸ್ಯೆಗಳಿಂದ ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದರು. ಅಪ್ಪ- ಅಮ್ಮನ ಆಸೆಯಂತೆ ಮೊದಲ ಅರೇಂಜ್ ಮ್ಯಾರೇಜ್ ಆಗಿದ್ದರು. ಆದ್ರೆ ಅದು ಮುರಿದು ಬಿದ್ದಿತ್ತು. ಈ ಬಾರಿ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಜಗದೀಪ್ ಅವರನ್ನು ಮದುವೆ ಆಗಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ