/newsfirstlive-kannada/media/post_attachments/wp-content/uploads/2025/05/hanumatha2.jpg)
RCB ಅಭಿಮಾನಿಗಳ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಸೀಸನ್ನಿಂದಲೂ ಈ ಸೀಸನ್ವರೆಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಫೈನಲ್ವರೆಗೆ ಬಂದಿದ್ದರೂ ಟ್ರೋಫಿಯನ್ನು ಪಡೆಯುವಲ್ಲಿ ಸತತ ವಿಫಲವಾಗಿದೆ. ಆ ನೋವು ಮಾತ್ರ ತಂಡದಲ್ಲಿ ಇದೆ.. ಆದರೆ ಅಭಿಮಾನಿಗಳು ಎಂದಿಗೂ ಆರ್ಸಿಬಿಯನ್ನು ಕೈ ಬಿಟ್ಟಿಲ್ಲ.. ಬಿಡೋದು ಇಲ್ಲ.. ಅಷ್ಟರ ಮಟ್ಟಿಗೆ ಅಭಿಮಾನಿಗಳು ಆರ್ಸಿಬಿ ತಂಡದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ.
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಜಯಭೇರಿ ಬಾರಿಸಿದೆ. ಕೇವಲ 2 ರನ್ಗಳಿಂದ ರಜತ್ ಪಡೆ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ 16 ಅಂಕಗಳಿಂದ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇದೇ ಖುಷಿಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಳಿದು ಕಪ್ಪಳಿಸಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಇನ್ನೂ ಕಾಡುತ್ತಿದೆ ಆ ನೋವು.. ಈಗ ಹುಷಾರಾಗಿರಿ ಅಂತ ಹೇಳಿದ್ದೇಕೆ?
ಇನ್ನೂ, ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ವೀಕ್ಷಿಸಲು ಬಿಗ್ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಹಾಗೂ ಧನರಾಜ್ ಆಚಾರ್ಯ್ ಹೋಗಿದ್ದಾರೆ. ಅಲ್ಲಿ RCB ತಂಡದ ಮೂವರು ಬ್ಯಾಟರ್ಸ್ ಭರ್ಜರಿ ಅರ್ಧಶತಕಗಳನ್ನ ಸಿಡಿಸುತ್ತಿದ್ದಂತೆ ಇತ್ತ ಹನುಮಂತ ಹಾಗೂ ಧನರಾಜ್ ಆಚಾರ್ಯ ಕುಣಿದು ಖುಷಿಪಟ್ಟಿದ್ದಾರೆ. ಜೊತೆಗೆ ಧನರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಕಣಕಣದಲ್ಲೂ RCB.. ಜೈ RCB ಅಂತ ಬರೆದುಕೊಂಡಿದ್ದಾರೆ.
View this post on Instagram
ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಅಂತು ಇಂತೂ ಹೋಗಿ RCB ಗೆಲ್ಸಿದ್ರಿ, ನಮ್ಮ ಹನುಮಂತು ಹೋದಮೇಲೆ ಅದು ಹೇಗೆ ಸೋಲುತ್ತೆ ನಮ್ಮ ಟೀಂ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ