/newsfirstlive-kannada/media/post_attachments/wp-content/uploads/2025/05/gouthami.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಸತ್ಯ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದು ಗೌತಮಿ ಜಾಧವ್, ಈ ಸೀರಿಯಲ್ ಬಳಿಕ ಬಿಗ್ಬಾಸ್ ಸೀಸನ್ 11ಕ್ಕೂ ಹೋದರು. ಬಿಗ್ಬಾಸ್ನಿಂದ ಆಚೆ ಬಂದ ಬಳಿ ನಟಿ ಗೌತಮಿ ಜಾದವ್ ಯಾವುದೇ ಪ್ರಾಜಕ್ಟ್ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಇದನ್ನೂ ಓದಿ:ಗ್ರ್ಯಾಂಡ್ ಆಗಿ ಅತ್ತೆ-ಮಾವನ ಮದುವೆ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ ರಜತ್ ಕಿಶನ್! PHOTOS
View this post on Instagram
ಆದ್ರೆ ಇದೀಗ ದಿಢೀರ್ ಅಂತ ಗೌತಮಿ ಜಾಧವ್ ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಧೂರಿ ಎಂಬ ಪೊಲೀಸ್ ಪಾತ್ರದಲ್ಲಿ ಅವರು ಮಿಂಚಲು ರೆಡಿ ಆಗಿದ್ದಾರೆ. ಸತ್ಯ ಸೀರಿಯಲ್ನಲ್ಲಿ ಟಾಮ್ ಬಾಯ್ ಲುಕ್ ಈಗ ಸೀರೆಗೆ ಬದಲಾಗಿದೆ.
ನಟಿ ಗೌತಮಿ ‘ಭಾರ್ಗವಿ LL.B’ ಧಾರಾವಾಹಿ ಕಾಣಿಸಿಕೊಂಡಿದ್ದಾರೆ. ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸುತ್ತಿದ್ದಾರೆ. ಇದೇ ಧಾರಾವಾಹಿಯಲ್ಲಿ ಭಾರ್ಗವಿಗೆ ಪ್ರಾಣಾಪಾಯ ಎದುರಾಗಿದ್ದು, ಅವಳನ್ನು ಕಾಪಾಡಲು ಗೌತಮಿ ಜಾಧವ್ ಅವರ ಆಗಮನ ಆಗಿದೆ. ವಿಶೇಷ ಅತಿಥಿ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ. ಅಷ್ಟೇ ಅಲ್ಲದೇ ವಿಲನ್ ಮುಖಕ್ಕೆ ಡಿಚ್ಚಿ ಹೊಡೆದು ಖಡಕ್ ಡೈಲಾಗ್ ಹೊಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ