Advertisment

ಬಿಗ್​ಬಾಸ್​ ಖ್ಯಾತಿಯ ಗೋಲ್ಡ್​ ಸುರೇಶ್​ ವಿರುದ್ಧ ಗಂಭೀರ ಆರೋಪ.. ಏನದು?

author-image
Veena Gangani
Updated On
ಗೋಲ್ಡ್​ ಸುರೇಶ್​​ಗೆ ಬಿಗ್ ಶಾಕ್ ನೀಡಲು ಮುಂದಾದ ಯುವಕ.. ವಂಚನೆ ಕೇಸ್​​ಗೆ ಟ್ವಿಸ್ಟ್..!
Advertisment
  • ಬಿಗ್​ಬಾಸ್​ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಆರೋಪ
  • ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬಾತನಿಂದ ಗಂಭೀರ ಆರೋಪ
  • 4 ಲಕ್ಷ ಹಣ ಹಿಂದಿರುಗಿಸಲು ಯಾಮಾರಿಸುತ್ತಿದ್ದಾರಾ ಸುರೇಶ್​?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ಗೋಲ್ಡ್​ ಸುರೇಶ್​ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕೇಬಲ್ ಚಾನೆಲ್ ಸೆಟ್ ಅಪ್ ಮಾಡಿ ಕೊಡೋದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಆರೋಪ ಮಾಡಿದ್ದಾರೆ. ನಾಲ್ಕು ಲಕ್ಷ ಹಣ ಹಿಂದಿರುಗಿಸಲು ಯಾಮಾರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisment

ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..

publive-image

ಹೌದು, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮೈನುದ್ದಿನ್ ಎಂಬ ಯುವಕನ ಜೊತೆ ಗೋಲ್ಡ್​ ಸುರೇಶ್​ ಬರೋಬ್ಬರಿ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದರಂತೆ. ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿ 2017ರಲ್ಲೇ ಗೋಲ್ಡ್ ಸುರೇಶ್ ಜೊತೆ 14 ಲಕ್ಷ ರೂ.ಗೆ ಒಪ್ಪಂದ (ಅಗ್ರಿಮೆಂಟ್) ಮಾಡಲಾಗಿತ್ತಂತೆ. ಇದರ ಭಾಗವಾಗಿ ಪ್ರಾರಂಭದಲ್ಲಿ 4 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ನಂತರ ಹಂತ ಹಂತವಾಗಿ 7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ. ಆದರೆ, ಕೆಲಸವನ್ನು ಅರ್ಧಕ್ಕೆ ಬಿಟ್ಟು, ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ ಅಂತಾ ಕಿಡಿಕಾರಿದ್ದಾರೆ.

publive-image

ಹಣ ಕೊಟ್ಟ ಕೆಲವು ದಿನಗಳು ಮಾತ್ರ ಒಂದಷ್ಟು ಕೆಲಸ ಮಾಡಿ ನಂತರ ಕೆಲಸ ಮಾಡಿಸದೇ ಗೋಲ್ಡ್ ಸುರೇಶ್ ಸುಮ್ಮನಾಗಿದ್ದಾರಂತೆ. ಜೊತೆಗೆ ಬಾಕಿ ಹಣವನ್ನು ಕೊಟ್ಟರೂ ಕೆಲಸ ಮುಗಿಸಲು ನಿರಾಕರಿಸಿದ್ದಾರಂತೆ. ನಂತರ ಮೈನುದ್ದಿನ್ ಮತ್ತು ಆತನ ಸ್ನೇಹಿತ ಬಸವರಾಜ್ ಅವರು ಸುರೇಶ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಸುರೇಶ್ ಕಾಣೆಯಾಗಿದ್ದಾರೆ ಎಂದು ದೂರಿದ್ದಾರೆ.

Advertisment

publive-image

2025ರ ಏಪ್ರಿಲ್ 29ರಂದು ಸುರೇಶ್ ಮೈನುದ್ದಿನ್ ಸ್ನೇಹಿತ ಬಸವರಾಜ್ ಅವರ ಖಾತೆಗೆ 50,000 ರೂ. ವರ್ಗಾಯಿಸಿದ್ದರೂ ಉಳಿದಿರುವ ಸುಮಾರು 4 ಲಕ್ಷ ರೂ. ಪಾವತಿ ಮಾಡಿಲ್ಲ ಎನ್ನಲಾಗಿದೆ. ಬಾಕಿ ಹಣ ನೀಡುವ ಭರವಸೆ ನೀಡಿ 'ಮುಂಬೈಗೆ ಬನ್ನಿ, ಹಣ ಕೊಡ್ತೀನಿ' ಎಂದು ಲೊಕೇಶನ್ ಶೇರ್ ಮಾಡಿದ್ದರು. ಅಲ್ಲಿಯೂ ಹಣ ಪಾವತಿ ಮಾಡಿಲ್ಲ ಎಂದು ಮೈನುದ್ದಿನ್ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment