/newsfirstlive-kannada/media/post_attachments/wp-content/uploads/2025/05/gouthami3.jpg)
ಕನ್ನಡದ ಬಿಗ್ಬಾಸ್ ಸೀಸನ್ 11 ಅಂತ್ಯ ಕಂಡು 5 ತಿಂಗಳು ಕಳೆದಿದೆ. ಆದ್ರೆ ವೀಕ್ಷಕರು ಸ್ಪರ್ಧಿಗಳನ್ನು ಮಾತ್ರ ಮರೆತಿಲ್ಲ. ಆದ್ರೆ ಬಿಗ್ಬಾಸ್ ಮೂಲಕ ಫೇಮಸ್ ಆಗಿರೋ ಉಗ್ರಂ ಮಂಜು ಅವರು ಇನ್ನೂ ಬ್ಯಾಚುಲರ್ ಆಗಿಯೇ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ:‘ಕೊಹ್ಲಿ ನಂಗೆ ಟಿಪ್ಸ್ ಕೊಟ್ರು’ ಎಂದ ಅನಯಾ ಬಂಗಾರ್ -ಯಾರು ಇವರು..?
ಆದ್ರೆ, ಮೊನ್ನೆಯಷ್ಟೇ ಉಗ್ರಂ ಮಂಜು ಬಾಳಲ್ಲಿ ಹೊಸ ಹುಡುಗಿ ಆಗಮನ ಆಗಲಿದ್ದಾರೆ ಎಂಬುವ ಅರ್ಥದಲ್ಲಿ ಗೌತಮಿ ಜಾಧವ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.
ಇದನ್ನು ನೋಡಿದ ಅಭಿಮಾನಿಗಳಿಗೆ ಸರ್ಪ್ರೈಸ್ ಎಂಬಂತೆ ಮಂಜಣ್ಣನಿಗೆ ಹುಡುಗಿ ಸಿಕ್ಕರೆ ಒಳ್ಳೆದಾಗಲಿ ಆದಷ್ಟು ಬೇಗ ಮದುವೆ ಆಗಲಿ, ಮದುಮಗ ಮಂಜಣ್ಣ, ಬೇಗ ಒಳ್ಳೆ ಹುಡುಗಿ ನೋಡಿ ಮದುವೆ ಮಾಡಿ ಅಕ್ಕ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದರು.
ಆದ್ರೆ ಇದೀಗ ಖುದ್ದು ಗೌತಮಿ ಅವರೇ ನ್ಯೂಸ್ಫಸ್ಟ್ನೊಂದಿಗೆ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ನಾನು ಶೇರ್ ಮಾಡಿಕೊಂಡ ರೀಲ್ಸ್ ನೋಡಿ ಎಲ್ಲ ಅಂದುಕೊಂಡಿದ್ದಾರೆ. ನಾನು ಹುಡುಗಿನ ಹುಡುಕಿ ಬಿಟ್ಟಿದ್ದೀನಿ ಅಂತ. ಅದಾದ ಬಳಿಕ ಮಂಜಣ್ಣ ಕಾಲ್ ಮಾಡಿ ಈ ರೀತಿ ಹಾಕಿರುವುದರಿಂದ ಮೆಸೇಜ್ ಮಾಡೋರು ಮುಂದೆ ಮಾಡೋದಿಲ್ಲ ಅನ್ಸುತ್ತೆ ಎಂದರು. ನಿಜ ಹೇಳಬೇಕು ಅಂದ್ರೆ ಹುಡುಗಿ ಸಿಕ್ಕಿಲ್ಲ. ಯಾರು ಅನ್ನೋದು ಇಬ್ಬರಿಗೂ ಗೊತ್ತಿಲ್ಲ. ಅವರ ಮನೆಯಲ್ಲಿ ಹುಡುಕುತ್ತಾ ಇದ್ದಾರೆ. ಯಾರಿಗಾದ್ರೂ ಇಷ್ಟ ಇದ್ರೆ ಅವರಿಗೆ ಮೆಸೇಜ್ ಮಾಡಬಹುದು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ