Advertisment

ಮುದ್ದಾದ ಬೇಬಿ ಬಂಪ್ ಲುಕ್​​ನಲ್ಲಿ ಕನ್ನಡದ ಗೊಂಬೆ; ನೇಹಾ ಗೌಡ ದಂಪತಿ ಫೋಟೋಸ್​ಗೆ ಮನಸೋತ ಫ್ಯಾನ್ಸ್​!

author-image
Veena Gangani
Updated On
ಮುದ್ದಾದ ಬೇಬಿ ಬಂಪ್ ಲುಕ್​​ನಲ್ಲಿ ಕನ್ನಡದ ಗೊಂಬೆ; ನೇಹಾ ಗೌಡ ದಂಪತಿ ಫೋಟೋಸ್​ಗೆ ಮನಸೋತ ಫ್ಯಾನ್ಸ್​!
Advertisment
  • 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನೇಹಾ ಹಾಗೂ ಚಂದನ ಗೌಡ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟಿಯ ವಿಡಿಯೋ ಕ್ಲಿಪ್!
  • ಪತಿಯ ಜತೆಗಿರೋ ವಿಡಿಯೋ ಶೇರ್​ ಮಾಡಿ ಶುಭ ಸುದ್ದಿ ಕೊಟ್ಟಿದ್ದ ನೇಹಾ

ಕನ್ನಡ ಕಿರುತೆರೆಯಲ್ಲಿ ಗೊಂಬೆ, ಬಿಗ್​ಬಾಸ್​ ಬೆಡಗಿ ನೇಹಾ ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ನೇಹಾ ಗೌಡ ದಂಪತಿ ಜೂನ್​ 1ರಂದು ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದರು.

Advertisment

publive-image

ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಹಾಗೂ ಚಂದನ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನೇಹಾ ಗೌಡ ದಂಪತಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬ್ಯೂಟಿಫುಲ್​ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹನಿಮೂನ್‌ಗೆ ಹೋದ ನವಜೋಡಿಗಳು ನಾಪತ್ತೆ; ಕೇರಳದ ಭೀಕರತೆ ಬಿಚ್ಚಿಟ್ಟ ಬೆಂಗಳೂರಿನ ಚಾಲಕ- VIDEO

publive-image

ಶೇರ್ ಮಾಡಿಕೊಂಡ ಫೋಟೋದಲ್ಲಿ ನೇಹಾ ಗೌಡ ಬೇಬಿ ಬಂಪ್ ಕಾಣಿಸುತ್ತಿದೆ. ಗುಲಾಬಿ ಬಣ್ಣದ ಸೀರೆಯಲ್ಲಿ ನಟಿ ನೇಹಾ ಗೌಡ ಕಾಣಿಸಿಕೊಂಡರೆ, ಇತ್ತ ಕಿರುತೆರೆ ನಟ ಚಂದನ್ ಗೌಡ ಪಂಚೆಯನ್ನು ತೊಟ್ಟುಕೊಂಡು ಮುದ್ದಾದ ಪತ್ನಿಗೆ ಮುತ್ತು ಕೊಡುತ್ತಿದ್ದಾರೆ. ಇದೇ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು, ನಮ್ಮ ಸುಂದರಿ ನೇಹಾ, ನೋಡುತಾ ನೋಡುತಾ ನಿಮ್ಮನೆ ನೋಡುತಾ ಹೀಗೆ ಕಳೆಯಲಿ ಈ ದಿನ, ಕ್ಯೂಟ್​ ಬೇಬಿ ಬಂಪ್​ ಅಂತಾ ಕಾಮೆಂಟ್​ ಮಾಡಿದ್ದಾರೆ.

Advertisment

ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಟಿ ನೇಹಾ ಗೌಡ ಹಾಗೂ ಚಂದನ್​ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಮದುವೆಯಾಗಿ 6 ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment