/newsfirstlive-kannada/media/post_attachments/wp-content/uploads/2025/03/Vinay-Rajat-kishan-Arrest-2-1.jpg)
ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಅವರದ್ದು 10 ವರ್ಷದ ಗೆಳೆತನ. ಈ ಇಬ್ಬರ ಮಧ್ಯೆ ಇದೀಗ ಬಿರುಕು ಮೂಡಿದೆ. ಒಂದೇ ಒಂದು ರೀಲ್ಸ್​ ಈ ಇಬ್ಬರ ಮಧ್ಯೆ ಮೈಮನಸ್ಸು ಮೂಡೋದಕ್ಕೆ ಕಾರಣವಾಗಿದೆ. ಹೌದು, ಬಿಗ್​ಬಾಸ್​ ಮೂಲಕ ಸಖತ್​ ಫೇಮಸ್​ ಆಗಿದ್ದರು ಈ ಇಬ್ಬರು.
ಇದನ್ನೂ ಓದಿ:10 ವರ್ಷದ ಗೆಳೆತನಕ್ಕೆ ಗುಡ್ ಬೈ ಹೇಳಿದ ರಜತ್.. ವಿನಯ್ ಗೌಡಗೆ ತಿರುಗೇಟು! ಅಸಲಿಗೆ ಆಗಿದ್ದೇನು?
/newsfirstlive-kannada/media/post_attachments/wp-content/uploads/2025/04/Rajath-bujji-on-Vinay-gowda-1.jpg)
ಬಿಗ್​ಬಾಸ್​ನಿಂದ ಆಚೆ ಬಂದ ಕೂಡಲೇ ರಜತ್​ ಕಿಶನ್​ ಹಾಗೂ ವಿನಯ್ ಗೌಡ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೇ ಶೋ ಮಧ್ಯೆ ರಜತ್ ಹಾಗೂ ವಿನಯ್ ಗೌಡ ಮಚ್ಚು ಹಿಡಿದುಕೊಂಡು ರೀಲ್ಸ್​ ಮಾಡಿದ್ದರು. ಆದ್ರೆ ಇದೇ ರೀಲ್ಸ್​ ಈ ಇಬ್ಬರ ಸ್ನೇಹದ ಮಧ್ಯ ಬಿರುಕು ಮೂಡುವಂತೆ ಮಾಡಿದೆ.
ಕೋಟಿ ಕೊಟ್ಟರು ರಜತ್​ ಜೊತೆಗೆ ರೀಲ್ಸ್​ ಮಾಡಲ್ಲ ಎಂದಿದ್ದ ವಿನಯ್​ ಗೌಡ..
ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ರಜತ್​ ಕಿಶನ್, ವಿನಯ್​ ನನಗಿಂತ 10 ವರ್ಷ ದೊಡ್ಡವನು. ಅವನಿಗೆ ಗೊತ್ತಿದೆ ಎಲ್ಲಿ ಏನು ಮಾತಾಡಬೇಕು ಅಂತ ಚೆನ್ನಾಗಿ ಗೊತ್ತಿದೆ. ಅವನು ನಮ್ಮ ಅಣ್ಣ ತಾನೇ ಮಾತಾಡಲಿ ಬಿಡಿ. ರೀಲ್ಸ್​ ಮಾಡಬೇಕು ಅನ್ನೋ ಅವಶ್ಯಕತೆ ಇಲ್ಲ. ಇಲ್ಲಿ ಯಾರು ವಿನಯ್​ ಗೌಡ ಜೊತೆಗೆ ರೀಲ್ಸ್​ ಮಾಡಬೇಕು ಅಂತ ಕಾಯುತ್ತ ಕುತ್ತಿಲ್ಲ. ಅವನ ಪಾಡಿಗೆ ನೆಮ್ಮದಿಯಾಗಿ ಇರಲಿ ಎಂದರು.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail.jpg)
ಇನ್ನೂ, ಸೋಷಿಯಲ್ ಮೀಡಿಯಾದಲ್ಲಿ ರಜತ್​ ಜೊತೆಗೀನ ಸಹವಾಸ ಬಿಟ್ಟು ಬಿಡಿ ಅನ್ನೋ ಕಾಮೆಂಟ್ಸ್​ಗೆ ವಿನಯ್​ ಗೌಡ ಅವರು ಲೈಕ್​ ಮಾಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಾಡಿದ ರಜತ್, ಅದು ತುಂಬಾ ಬೇಜಾರ್​ ಆಗಿದ್ದು. ವಿನಯ್​ ಗೌಡ ಕಾಮೆಂಟ್ಸ್​ಗೆ ಲೈಕ್​ ಮಾಡಬಾರದಿತ್ತು. ನಂದು ವಿನಿದು 10 ವರ್ಷದ ಗೆಳತನ. ವಿನಯ್​ ಏನ್​ ಅಂತ ನನಗೆ ಗೊತ್ತು, ನಾ ಏನ್​ ಅಂತ ವಿನಯ್​ಗೆ ಗೊತ್ತು. ಯಾರೋ 3ನೇ ವ್ಯಕ್ತಿ ಬಂದು ಹೀಗೆ ಕಾಮೆಂಟ್ಸ್​ ಮಾಡಿದಾಗ ಬಿಟ್ಟು ಬಿಡಬೇಕಾಗಿತ್ತು. ಆದ್ರೆ ಫ್ರೆಂಡ್ಶಿಪ್ ಅನ್ನು ಬಿಟ್ಟು ಕೊಡಬಾರದಿತ್ತು. ನನಗೆ ಇದು ವ್ಯಯಕ್ತಿಕವಾಗಿ ಬೇಸರ ಆಗಿದೆ. ಆದ್ರೆ ನಾನು ಫೋನ್​ ಮಾಡಿ ಹೀಗೆ ಮಾಡಬಾರದಾಗಿತ್ತು ಅಂತ ಹೇಳಿದ ಕೂಡಲೇ ನನ್ನ ಜೊತೆಗೆ ಮಾತು ಬಿಟ್ಟ. ನನ್ನ ಹಾಗೂ ವಿನಯ್​ ಗೌಡ ಮಧ್ಯೆ ಮನಸ್ತಾಪ ಆಗಿದೆ. ನಾನು ಯಾವತ್ತು ಅವನನ್ನು ಬಿಟ್ಟು ಕೊಟ್ಟಿಲ್ಲ. ಬಿಟ್ಟು ಕೊಡೋದು ಇಲ್ಲ. ಆದ್ರೆ ಅವನಿಗೆ ಅರ್ಥ ಆಗಬೇಕಿತ್ತು. ವಿನಯ್​ ತುಂಬಾ ಒಳ್ಳೆಯವನು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us