ರಕ್ಷಕ್ ಬುಲೆಟ್ ಕೊಟ್ಟ ಸರ್​ಪ್ರೈಸ್​​ಗೆ ಕಣ್ಣೀರಿಟ್ಟ ನಮ್ರತಾ ಗೌಡ; ವಿಡಿಯೋ ಇಲ್ಲಿದೆ!

author-image
Veena Gangani
Updated On
ರಕ್ಷಕ್ ಬುಲೆಟ್ ಕೊಟ್ಟ ಸರ್​ಪ್ರೈಸ್​​ಗೆ ಕಣ್ಣೀರಿಟ್ಟ ನಮ್ರತಾ ಗೌಡ; ವಿಡಿಯೋ ಇಲ್ಲಿದೆ!
Advertisment
  • ಬಿಗ್​ಬಾಸ್​ ಮೂಲಕ ಫೇಮಸ್​ ಆಗಿದ್ದ ನಟಿ ನಮ್ರತಾ
  • ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ ನಮ್ರತಾ ಗೌಡ
  • ರಕ್ಷಕ್​ ಬುಲೆಟ್​ ಕೊಟ್ಟ ಸರ್​ಪ್ರೈಸ್​ ಏನು ಗೊತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಸದ್ಯ ಖುಷಿಯಲ್ಲಿದ್ದಾರೆ. ನಾಗಿಣಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಮ್ರತಾ ಗೌಡ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ:ಉದ್ಯಮಿ ಜೊತೆಗೆ ವೈಷ್ಣವಿ ಗೌಡ ನಿಶ್ಚಿತಾರ್ಥ; ಇಲ್ಲಿವೆ 10 ಗ್ರ್ಯಾಂಡ್​ ಫೋಟೋಸ್!

publive-image

ನಮ್ರತಾ ಗೌಡ ಅವರ ಖುಷಿಯನ್ನು ದುಪ್ಪಟು ಮಾಡಿದ್ದಾರೆ ಬಿಗ್​ಬಾಸ್​ ಖ್ಯಾತಿಯ ರಕ್ಷಕ್​ ಬುಲೆಟ್​​. ಹೌದು ಹುಟ್ಟು ಹಬ್ಬದ ಖುಷಿಯಲ್ಲಿದ್ದ ನಮ್ರತಾ ಗೌಡ ಅವರಿಗೆ ರಕ್ಷಕ್​ ಬುಲೆಟ್​​ ಮಸ್ತ್​ ಸರ್​ಪ್ರೈಸ್​ವೊಂದನ್ನು ಕೊಟ್ಟಿದ್ದಾರೆ.

publive-image

ರಕ್ಷಕ್​ ಬುಲೆಟ್​ ಕೊಟ್ಟ ಸರ್​ಪ್ರೈಸ್​ ನೋಡಿ ನಮ್ರತಾ ಗೌಡ ಕಣ್ಣೀರು ಹಾಕಿದ್ದಾರೆ. ರಕ್ಷಕ್​ ಬುಲೆಟ್​ ಹಾಗೂ ನಮ್ರತಾ ಗೌಡ ಬಿಗ್​ಬಾಸ್​ ಮೂಲಕ ಪರಿಚಯ ಆದವರು. ಬಿಗ್​ಬಾಸ್​ ಮೂಲಕವೇ ಈ ಇಬ್ಬರು ಸಖತ್​ ಕ್ಲೋಸ್​ ಆಗಿದ್ದಾರೆ. ನಮ್ರತಾ ಗೌಡ ರಕ್ಷಕ್​ ಬುಲೆಟ್​ ಅನ್ನು ತಮ್ಮ ತಮ್ಮ ಎಂದು ಕರೆಯುತ್ತಾ ಇರುತ್ತಾರೆ. ಅದೇ ರೀತಿ ರಕ್ಷಕ್​ ಬುಲೆಟ್​ ನಮ್ರತಾ ಗೌಡ ಅವರನ್ನು ಪ್ರೀತಿಯಿಂದ ಪಪ್ಪು ಎಂದು ಕರೆಯುತ್ತಾರೆ.

publive-image

ಇನ್ನೂ, ನಮ್ರತಾ ಗೌಡ ಹುಟ್ಟು ಹಬ್ಬದ ನಿಮಿತ್ತ ರಕ್ಷಕ್​ ಬುಲೆಟ್​​ ಕೇಕ್​ ಕಟ್​ ಮಾಡಿಸಿದ್ದಾರೆ. ಚಂದವಾಗಿ ಡೆಕೋರೇಷನ್ ಮಾಡಿಸಿ ನಮ್ರತಾ ಗೌಡಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಅವರು ಕೂಡ ನಮ್ರತಾ ಗೌಡ ಹುಟ್ಟು ಹಬ್ಬಕ್ಕೆ ಕೇಕ್​ ಕಟ್​ ಮಾಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment