ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಬಿಗ್​ಬಾಸ್​ ಖ್ಯಾತಿಯ ರಕ್ಷಕ್​ ಬುಲೆಟ್; ಕಣ್ಣೀರಿಗೆ ಕಾರಣವೇನು? ​

author-image
Veena Gangani
Updated On
ದರ್ಶನ್​ ಸಿನಿಮಾದ ಡೈಲಾಗ್ ಹೇಳಿದ್ದೇ ರಕ್ಷಕ್​ ಬುಲೆಟ್​ಗೆ ಮುಳುವಾಯ್ತಾ? ಹಿಂದೂ ಸಂಘಟನೆ ಕೆರಳಿ ಕೆಂಡ!
Advertisment
  • ಭರ್ಜರಿ ಬ್ಯಾಚುಲರ್ಸ್ 2 ವೇದಿಕೆ ಮೇಲೆ ಕಣ್ಣೀರು ಹಾಕಿದ ರಕ್ಷಕ್
  • ಕನ್ನಡದ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ರಕ್ಷಕ್​ ಬುಲೆಟ್​
  • ರಕ್ಷಕ್​ ಬುಲೆಟ್​ ಅಳುತ್ತಿದ್ದಂತೆ ನೆರೆದಿದ್ದ ಎಲ್ಲರೂ ಕೂಡ ಭಾವುಕ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಮೂಲಕ ಸಖತ್​ ಫೇಮಸ್​ ಆಗಿದ್ದ ರಕ್ಷಕ್​ ಬುಲೆಟ್​ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮೊರೆ ಹೋದ ಬಾಲಿವುಡ್ ನಟಿ ಕತ್ರಿನಾ ಕೈಫ್; ಫೋಟೋ ಇಲ್ಲಿದೆ!

publive-image

ಬಿಗ್​ಬಾಸ್​ನಿಂದ ಆಚೆ ಬಂದಿದ್ದ ರಕ್ಷಕ್​ ಬುಲೆಟ್​ ಅವರು ಸುವರ್ಣ ಸೆಲೆಬ್ರಿಟಿ ಲೀಗ್​ನಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2ಗೆ ಎಂಟ್ರಿ ಕೊಟ್ಟಿದ್ದಾರೆ.

publive-image

ಇನ್ನೂ, ರಕ್ಷಕ್​ ಬುಲೆಟ್​ಗೆ ಕನ್ನಡತಿ ಸೀರಿಯಲ್​ ಖ್ಯಾತಿಯ ರೋಮಲ ಅವರು ಜೋಡಿಯಾಗಿದ್ದಾರೆ. ಹೀಗೆ ಈ ವಾರ ಈ ವಾರ 10 ಬ್ಯಾಚ್ಯುಲರ್ಸ್​ ಮತ್ತು ಏಂಜಲ್ಸ್ 10 ಸೂಪರ್ ಹಿಟ್ ಸಿನಿಮಾಗಳನ್ನು ಮರುಸೃಷ್ಟಿ ಮಾಡಲಿದ್ದಾರೆ. ಸದ್ಯ ಜೀ ಕನ್ನಡ ರಿಲೀಸ್​ ಮಾಡಿದ ಪ್ರೋಮೋದಲ್ಲಿ ರಕ್ಷಕ್​ ಬುಲೆಟ್​ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ಎಲ್ಲರ ಮುಂದೆ ರಕ್ಷಕ್ ಬುಲೆಟ್​ ಅತ್ತಿದ್ದು ಹೇಗೆ?

ರಿಲೀಸ್​ ಆಗಿರೋ ಪ್ರೋಮೋದಲ್ಲಿ ರಕ್ಷಕ್​ ಬುಲೆಟ್​, ಚಾಲೆಂಜಿಂಗ್ ಸ್ಟಾರ್ ದರ್ಶನ್​ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್‌ ಅಭಿನಯದ ಸೂಪರ್​ ಹಿಟ್​ ಸಿನಿಮಾ ಬುಲ್​ ಬುಲ್​ ಸೀನ್​ ಅನ್ನು ರೀಕ್ರಿಯೇಟ್ ಮಾಡಿದ್ದಾರೆ. ಆಗ ಆ ಸೀಸ್ ಮುಗಿಯುತ್ತಿದ್ದಂತೆ, ಇದೇ ಅಬ್ಬಯ್ಯ ನಾಯ್ಡು ಸ್ಟುಡಿಯೋಗೆ ನಮ್ಮ ಅಪ್ಪನ ಜೊತೆಗೆ ಬರ್ತಿದೆ. ಇವತ್ತು ನಾನು ಈ ವೇದಿಕೆ ಮೇಲೆ ಪರ್ಪಾಮೆನ್ಸ್ ಮಾಡಿದ್ದೀನಿ, ಇನ್ನೂ ಸ್ವಲ್ಪ ದಿನ ಅವರು ಇದ್ದಿದ್ದರೇ ಚೆನ್ನಾಗಿ ಇರುತ್ತಿತ್ತು. ಅದನ್ನು ಮಿಸ್​ ಮಾಡಿಕೊಂಡೇ ಅತ್ತ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment