ಪ್ರೀ-ವೆಡ್ಡಿಂಗ್​ನಲ್ಲಿ ಮಿಂಚಿದ ಬಿಗ್​ಬಾಸ್​ ಖ್ಯಾತಿಯ ರಂಜಿತ್​ ಕುಮಾರ್​; ಬ್ಯೂಟಿಫುಲ್​ ಫೋಟೋಸ್​ ಇಲ್ಲಿವೆ!

author-image
Veena Gangani
Updated On
ಪ್ರೀ-ವೆಡ್ಡಿಂಗ್​ನಲ್ಲಿ ಮಿಂಚಿದ ಬಿಗ್​ಬಾಸ್​ ಖ್ಯಾತಿಯ ರಂಜಿತ್​ ಕುಮಾರ್​; ಬ್ಯೂಟಿಫುಲ್​ ಫೋಟೋಸ್​ ಇಲ್ಲಿವೆ!
Advertisment
  • ಬಿಗ್​ಬಾಸ್​ ಸ್ಪರ್ಧಿ ರಂಜಿತ್​ ಕುಮಾರ್​ ಮನೆಯಲ್ಲಿ ಮದುವೆ ಸಂಭ್ರಮ
  • ಪ್ರೀತಿಸಿದ ಹುಡುಗಿ ಜೊತೆಗೆ ಎಂಗೇಜ್​ ಆಗಿದ್ದ ಬಿಗ್​ಬಾಸ್​ ರಂಜಿತ್​
  • ಮೊನ್ನೆಯಷ್ಟೇ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಂಜಿತ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್​ ಕುಮಾರ್​ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ: ತಾಯಿ- ಮಗನ ಬಗ್ಗೆ ಸುಮಲತಾ ಸ್ಪಷ್ಟನೆ; ದರ್ಶನ್ ಅನ್​ಫಾಲೋ ವಿಚಾರಕ್ಕೂ ಉತ್ತರ..!

publive-image

ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟ ರಂಜಿತ್​ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ನಟ ರಂಜಿತ್ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದಾರೆ.

publive-image

ಹೌದು, ಬಿಗ್​ಬಾಸ್​ ಸೀಸನ್ 11ಕ್ಕೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಂಜಿತ್​ ಮೊನ್ನೆಯಷ್ಟೇ ಪ್ರೀತಿಸಿದ ಹುಡುಗಿ ಜೊತೆಗೆ ಎಂಗೇಜ್​ ಆಗಿದ್ದರು.

publive-image

ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳನ್ನು ರಂಜಿತ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

publive-image

ಇನ್ನೂ, ರಂಜಿತ್​ ಅವರು ಪ್ರೀತಿಸಿದ ಹುಡುಗಿ ಹೆಸರು ಮಾನಸಾ ಗೌಡ. ಇವರು ಫ್ಯಾಷನ್ ಡಿಸೈನರ್ ಆಗಿದ್ದಾರೆ.

publive-image

ಸದ್ಯ ನಿಶ್ಚಿತಾರ್ಥದ ಬೆನ್ನಲ್ಲೇ ನಟ ರಂಜಿತ್​ ಹಾಗೂ ಮಾನಸಾ ಗೌಡ ಪ್ರೀ ವೆಡ್ಡಿಂಗ್​ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

publive-image

ಇಬ್ಬರು ಬಿಳಿ ಬಣ್ಣದ ಉಡುಪನ್ನು ಧರಿಸಿಕೊಂಡು ಸಖತ್​ ಕ್ಯೂಟ್​ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

publive-image

ಇದೇ ಬ್ಯೂಟಿಫುಲ್​ ವಿಡಿಯೋವನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

publive-image

ಸದ್ಯ ರಂಜಿತ್​ ಹಾಗೂ ಮಾನಸಾ ಗೌಡ ಅವರ ಮದುವೆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಶೀಘ್ರದಲ್ಲೇ ಈ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment