/newsfirstlive-kannada/media/post_attachments/wp-content/uploads/2025/02/Saanya-Iyer.jpg)
ಪುಟ್ಟ ಗೌರಿ ಮದುವೆ, ಬಿಗ್ಬಾಸ್ನಿಂದ ಖ್ಯಾತಿ ಪಡೆದ ಸಾನ್ಯಾ ಅಯ್ಯರ್ ಪ್ರಯಾಗ್ ರಾಜ್ಗೆ ಭೇಟಿ ನೀಡಿದ್ದಾರೆ. ಹೌದು, ದಿನದಿಂದ ದಿನಕ್ಕೆ ಪ್ರಯಾಗ್ ರಾಜ್ಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಾ ಕುಂಭಮೇಳಕ್ಕೆ ಹೋಗಿದ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗುತ್ತಿದ್ದಾರೆ.
ಇದನ್ನೂ ಓದಿ: ಸರಿಗಮಪ ವೇದಿಕೆಗೆ ಶಿವಣ್ಣ ಸಡನ್ ಎಂಟ್ರಿ ಕೊಡಲು ಒಂದು ಬಹುಮುಖ್ಯ ಕಾರಣವಿತ್ತು; ಏನದು?
ಇದೀಗ ಅದೇ ಸಾಲಿನಲ್ಲಿ ಸ್ಯಾಂಡಲ್ವುಡ್ ನಟಿ ಸಾನ್ಯಾ ಅಯ್ಯರ್ ಅವರು ಪ್ರಯಾಗ್ ರಾಜ್ಗೆ ಭೇಟಿ ನೀಡಿದ್ದಾರೆ. ಜೊತೆಗೆ ನಾಗಾ ಸಾಧುಗಳಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ದೈವ ಭಕ್ತೆಯಾಗಿರುವ ಸಾನ್ಯಾ ಅಯ್ಯರ್ ಅವರು ತಮ್ಮ ತಾಯಿಯ ಜೊತೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ತೆರಳಿದ್ದಾರೆ.
ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದ ಸಾನ್ಯಾ ಅಯ್ಯರ್ ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸಾನ್ಯಾ ಅಯ್ಯರ್, ಜನಸಾಗರದ ಮಧ್ಯೆ ಓಡಾಡುತ್ತಾ, ಹಣೆ ಮೇಲೆ ಮೂರು ನಾಮ ಹಾಗೂ ಕೇಸರಿ ತಿಲಕ ಇಟ್ಟುಕೊಂಡು, ನಾಗ ಸಾಧುಗಳನ್ನು ಭೇಟಿ ನೀಡಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೊತೆಗೆ ಕುಂಭ ಮೇಳದಲ್ಲಿ ಆದ ಅನುಭವನ್ನು ಬಿಚ್ಚಿಟ್ಟಿದ್ದಾರೆ.
View this post on Instagram
ಮಹಾಕುಂಭಮೇಳ 2025! ಸಂಗಮದಲ್ಲಿ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವು ನನ್ನ ಆಂತರಿಕ ಜಗತ್ತನ್ನೆ ಅಲುಗಾಡಿಸುವಂತೆ ಮಾಡಿತು. ಈ ಪವಿತ್ರ ಸ್ನಾನವು ನನಗೆ ಪುನರ್ಜನ್ಮವಲ್ಲದೆ ಬೇರೇನೂ ಅಲ್ಲ ಎಂದು ನಾನು ಭಾವಿಸಿದೆ. ಮತ್ತು ನನ್ನ ಮುಂದಿನ ಹೊಸ ಪ್ರಯಾಣಕ್ಕಾಗಿ ನನ್ನ ಎಲ್ಲಾ ಪಿತೃಗಳು / ಪೂರ್ವಜರಿಂದ ಆಶೀರ್ವಾದವನ್ನು ಕೋರಿದೆ. ನಾವೆಲ್ಲರೂ ಮಾನವ ಜೀವನವನ್ನು ಅನುಭವಿಸುತ್ತಿರುವ ಆಧ್ಯಾತ್ಮಿಕ ಜೀವಿಗಳು, ನೀವೆಲ್ಲರೂ ಉನ್ನತ ಕ್ಷೇತ್ರಗಳಿಗೆ ಏರಬಹುದು ಮತ್ತು ನೀವು ನಿಜವಾಗಿಯೂ ಯಾರೆಂದು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಭೂಮಿಯ ಮೇಲಿನ ನಿಮ್ಮ ಉದ್ದೇಶವು ನೆರವೇರಲಿ. ಲೋಕ ಸಮಸ್ತ ಸುಖಿನೋ ಭವತು ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ