ವಿಭಿನ್ನ ಥೀಮ್​ನಲ್ಲಿ ಬಿಗ್​ಬಾಸ್​ ಖ್ಯಾತಿಯ ಶಿಶಿರ್​, ಐಶೂ ಜೋಡಿ ಸಖತ್ ಮಿಂಚಿಂಗ್; ವಿಶೇಷತೆ ಏನು ಗೊತ್ತಾ?

author-image
Veena Gangani
Updated On
ವಿಭಿನ್ನ ಥೀಮ್​ನಲ್ಲಿ ಬಿಗ್​ಬಾಸ್​ ಖ್ಯಾತಿಯ ಶಿಶಿರ್​, ಐಶೂ ಜೋಡಿ ಸಖತ್ ಮಿಂಚಿಂಗ್; ವಿಶೇಷತೆ ಏನು ಗೊತ್ತಾ?
Advertisment
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ ಈ ವಿಡಿಯೋ
  • ಬಿಗ್​ಬಾಸ್​ ಮೂಲಕ ಸಖತ್ ಫೇಮಸ್​ ಆಗಿದ್ದ ಸ್ಟಾರ್ ಜೋಡಿ
  • ಫೋಟೋಶೂಟ್ ಮೂಲಕ​ ಸಖತ್​ ಸುದ್ದಿಯಲ್ಲಿದ್ದಾರೆ ಈ ಇಬ್ಬರು

ಬಿಗ್​ಬಾಸ್​ ಮನೆಯಲ್ಲಿ ಜೋಡಿ ಆಗಿ ಹೊರಗಡೆ ಬಂದಿರೋರಿದ್ದಾರೆ. ಅಲ್ಲಿ ಜೋಡಿಯಾಗಿ ಆಚೆ ಬಂದ ಮೇಲೆ ಸಂಬಂಧ ಹಳಸಿ ಹೋಗಿರೋದು ಇದೆ. ಆಚೆ ಬಂದ್ಮೇಲೂ ಪ್ರೀತಿ, ಸ್ನೇಹ ಮತ್ತಷ್ಟು ಗಟ್ಟಿಯಾಗಿರೋ ಮಾತ್ರ ಶಿಶಿರ್​ ಹಾಗೂ ಐಶ್ವರ್ಯಾ ಶಿಂಧೋಗಿ ಮಾತ್ರ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮೀ; ಹುಡುಗ ಯಾರು?

publive-image

ಬಿಗ್​ಬಾಸ್​ ಶೋನಲ್ಲಿ ಈ ಜೋಡಿಗೆ ಫ್ಯಾನ್ಸ್​ ಇದ್ರೂ, ಆದ್ರೆ ಶೋ ಮುಗಿದ್ಮೇಲೆ ಹೆಚ್ಚು ಹೆಚ್ಚು ಈ ಜೋಡಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಎಲ್ಲಿಗೆ ಹೋದ್ರು ಒಟ್ಟಿಗೆ ಹೋಗ್ತಾರೆ. ಯಾವುದೇ ಕಾರ್ಯಕ್ರಮ ಇರಲಿ ಒಟ್ಟಿಗೆ ಕಾಣಿಸಿಕೊಳ್ತಾರೆ. ಇತ್ತಿಚೀಗೆ ಜೋಡಿಯಾಗಿ ಫೋಟೋಶೂಟ್​ ಮಾಡಿಸಿ ಸಖತ್​ ಸುದ್ದಿಯಲ್ಲಿದ್ದರು. ಸದ್ಯ ಈ ವಿಚಾರ ಮಾತ್ರ ಅಭಿಮಾನಿಗಳಿಗೆ ಪುಳಕ ಉಂಟುಮಾಡಿರೋದು.

ಹೌದು, ಎರಡು ವಿಭಿನ್ನ ಥೀಮ್​ನಲ್ಲಿ ಫೋಟೋಶೂಟ್​ ಮಾಡಿಸಿದೆ ಈ ಜೋಡಿ. ಫಸ್ಟ್ ಹೋಳಿ ಹಬ್ಬಕ್ಕೆ ಕಲರ್​ಫುಲ್​ ಆಗಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ರು. ನೀಲಿ ಬಣ್ಣದ ಉಡುಗೆ ಗಮನ ಸೇಳಿಯುವಂತಿತ್ತು. ಈ ಫೋಟೋಗಳ ಬೆನ್ನಲ್ಲೇ ಮತ್ತೊಂದು ವಿಡಿಯೋ ಶೇರ್​ ಮಾಡಿದ್ದಾರೆ.

publive-image

ಅಪ್ಪು ಸರ್​ ಬರ್ತ್​ ಡೇ ವಿಡಿಯೋ ಡೆಡಿಕೇಟ್ ಮಾಡಿದೆ ಜೋಡಿ. ಶಿಶಿರ್​ ಪಂಚೆ ಶಲ್ಯದಲ್ಲಿ ಮಿಂಚ್ತಿದ್ರೇ, ಐಶ್ವರ್ಯಾ ಸೀರೆಯಲ್ಲಿ ದೇವತೆ ಅಂತೆ ಕಾಣ್ತಿದ್ದಾರೆ. ಈ ಸ್ಪೆಷಲ್​ ಗಿಫ್ಟ್​ಗೆ ಫ್ಯಾನ್ಸ್ ಖುಷ್​ ಆಗಿದ್ದಾರೆ. ಯಾರ್​ ದೃಷ್ಟಿನೂ ಬಿಳದಿರಲಿ ಅಂತ ದೃಷ್ಟಿ ತೆಗೆತಿದ್ದಾರೆ. ಬಿಗ್​​ಬಾಸ್​ ನಿಮ್ಮ ಮಗಳು ಸೂಪರ್​.. ಅಂತ ಕಾಲ್​ ಎಳಿತಿದ್ದಾರೆ ವೀಕ್ಷಕರು. ಇಬ್ಬರ ಕೆಮೆಸ್ಟ್ರಿ ತುಂಬಾ ಚೆನ್ನಾಗಿದೆ. ಹೀಗೆ ಲಾಂಗೆಸ್ಟು ಬಂಧನ ನಿಮ್ಮದಾಗಲಿ ಎಂದು ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment