2ನೇ ಮದುವೆಗೆ ಸಜ್ಜಾದ ವರ್ತೂರು ಸಂತೋಷ್​; ಹಳ್ಳಿಕಾರ್ ಒಡೆಯ ಹೇಳಿದ್ದೇನು?

author-image
Veena Gangani
Updated On
2ನೇ ಮದುವೆಗೆ ಸಜ್ಜಾದ ವರ್ತೂರು ಸಂತೋಷ್​; ಹಳ್ಳಿಕಾರ್ ಒಡೆಯ ಹೇಳಿದ್ದೇನು?
Advertisment
  • 2ನೇ ಮದುವೆ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಹಳ್ಳಿಕಾರ್ ಒಡೆಯ
  • ಬಿಗ್​ಬಾಸ್​ ಮೂಲಕ ಫೇಮಸ್​ ಆಗಿದ್ದ ವರ್ತೂರು ಸಂತೋಷ್
  • ಮದುವೆ ಯಾವಾಗ ಎಂದವರಿಗೆ ಗುಡ್​ನ್ಯೂಸ್​ ಕೊಟ್ಟ ಹಳ್ಳಿಕಾರ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 10ರ ಸ್ಪರ್ಧಿಗಳನ್ನು ವೀಕ್ಷಕರು ಮರೆತ್ತಿಲ್ಲ.​ ಅದರಲ್ಲೂ ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ವರ್ತೂರು ಸಂತೋಷ್‌ ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..

publive-image

ಸೋಷಿಯಲ್​ ಮೀಡಿಯಾದಲ್ಲಿ ವರ್ತೂರು ಸಂತೋಷ್‌ ಅವರಿಗೆ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳು ಉತ್ತರ ಕೊಟ್ಟಿದ್ದಾರೆ. ಹಳ್ಳಿಕಾರ್ ಒಡೆಯ ಅಂತಲೇ ಖ್ಯಾತಿ ಪಡೆದುಕೊಂಡಿರೋ ವರ್ತೂರು ಸಂತೋಷ್‌ ಮದುವೆಯಾಗಲು ಸಜ್ಜಾಗಿದ್ದಾರೆ. ಈ ಬಗ್ಗೆ ಖುದ್ದು ಅವರೇ ಮದುವೆ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

publive-image

ಹೌದು, ವರ್ತೂರು ಸಂತೋಷ್‌ ಅವರು ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸ್ನೇಹಿತರೊಬ್ಬರು ವರ್ತೂರು ಸಂತೋಷ್‌ ಅವರು ಇದೇ ವರ್ಷ ಮದುವೆಯಾಗುತ್ತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಹೇಳಿದ್ದಾರೆ. ಆಗ ವರ್ತೂರು ಸಂತೋಷ್​ ಅವರು ನಾನು ಮದುವೆ ಆಗುತ್ತಿದ್ದೇನೆ ಎಂದಿದ್ದಾರೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ವರ್ತೂರು ಸಂತೋಷ್‌ ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಎಂದು ಹಲವರು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ವಿಡಿಯೋದಲ್ಲಿ ಸಂತೋಷ್‌ ಅವರು ಭಾವಿ ಪತ್ನಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಒಟ್ಟಾರೆ ಈ ವರ್ಷವೇ ಸಂತೋಷ್‌ ಅವರು ಹಸೆಮಣೆ ಏರುವುದು ಫಿಕ್ಸ್‌ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment