ರೇಣುಕಾಸ್ವಾಮಿ ಕೇಸ್ ನೆನಪಿಸಿದ ವಿನಯ್ ಗೌಡ, ರಜತ್ ಕಿಶನ್.. ಕೊನೆಗೂ ಸತ್ಯ ಒಪ್ಪಿಕೊಂಡ್ರಂತೆ..!

author-image
Veena Gangani
Updated On
ರೇಣುಕಾಸ್ವಾಮಿ ಕೇಸ್ ನೆನಪಿಸಿದ ವಿನಯ್ ಗೌಡ, ರಜತ್ ಕಿಶನ್.. ಕೊನೆಗೂ ಸತ್ಯ ಒಪ್ಪಿಕೊಂಡ್ರಂತೆ..!
Advertisment
  • ಅಸಲಿ ಮಚ್ಚಿಗಾಗಿ ಪೊಲೀಸರ ತೀವ್ರ ಹುಡುಕಾಟ
  • ರಜತ್​ ಮಚ್ಚು ಹಿಡಿದ ರೀಲ್ಸ್​ ಕೇಸ್​ಗೆ ಬಿಗ್​ ಟ್ವಿಸ್ಟ್​
  • ಪೊಲೀಸರ ಮುಂದೆ​ ಮಚ್ಚಿನ ರಹಸ್ಯ ಬಾಯ್ಬಿಟ್ರು?

ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ ಒಂದೇ ಒಂದು ರೀಲ್ಸ್​ನಿಂದ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಿಗೆ ಸಂಕಷ್ಟ ಎದುರಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ರಜತ್​ ಕಿಶನ್​ ಮಚ್ಚು ಹಿಡಿದುಕೊಂಡು ರೀಲ್ಸ್​ ಮಾಡಿ ಪೋಸ್ಟ್​ ಮಾಡಿದ್ದರು. ಹೀಗಾಗಿ ಮಾರ್ಚ್ 25ರಂದು ಬಸವೇಶ್ವರನಗರ ಪೊಲೀಸರು ವಿನಯ್ ಗೌಡ ಹಾಗೂ ರಜತ್​ ಕಿಶನ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ:ವಿನಯ್​ ಗೌಡ, ರಜತ್​ಗೆ ಮತ್ತೆ ಸಂಕಷ್ಟ.. ಕೊನೆಗೂ ಮಚ್ಚಿನ ಸತ್ಯ ಬಾಯ್ಬಿಟ್ಟ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು..!

publive-image

ಆದರೆ ಇದೀಗ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ​ರೀಲ್ಸ್​ನಲ್ಲಿ ಬಳಸಿದ ಅಸಲಿ ಮಚ್ಚನ್ನು ಬಿಟ್ಟು ಪೊಲೀಸರಿಗೆ ಫೈಬರ್ ಮಚ್ಚು ನೀಡಿ ಯಾಮಾರಿಸಿದ್ದರು ಎನ್ನಲಾಗಿತ್ತು. ಇದೀಗ ರಜತ್​ ಹಾಗೂ ವಿನಯ್​ ಪೊಲೀಸರ ಮುಂದೆ​ ಮಚ್ಚಿನ ರಹಸ್ಯವನ್ನು ಬಾಯ್ಬಿಟ್ಟಿದ್ದಾರಂತೆ.

publive-image

2024, ಜೂನ್ 8 ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅನ್ನೋರ ಕೊಲೆಯಾಗಿತ್ತು. ಬಳಿಕ ಆರೋಪಿಗಳು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಮೃತದೇಹವನ್ನು ಬಿಸಾಡಿ ಬಂದಿದ್ದರು. ಈ ವಿಚಾರ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ರಾಜಕಾಲುವೆಯ ಅದೇ ಜಾಗದಲ್ಲೇ ರಜತ್ ಹಾಗೂ ವಿನಯ್ ಮಚ್ಚು ಬಿಸಾಡಿರೋದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚನ್ನೂ ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದಾಗಿ ತಿಳಿಸಿದ್ದಾರಂತೆ.

publive-image

ಹೀಗಾಗಿ ವಿನಯ್, ರಜತ್​ರನ್ನು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಕರೆದುಕೊಂಡು ಹೋಗಿ ಸ್ಥಳ ಮಹಜರ್ ನಡೆಸಿದ್ದಾರೆ. ಪೊಲೀಸರ ಮಹಜರ್ ವೇಳೆಯೂ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚು ಪತ್ತೆಯಾಗಿರಲಿಲ್ಲ. ಆರೋಪಿಗಳು ಪೊಲೀಸರಿಗೆ ಮೊದಲು ನೀಡಿದ್ದ ಫೈಬರ್ ಮಚ್ಚನ್ನ ಎಫ್.ಎಸ್.ಎಲ್ ಗೆ ರವಾನೆ ಮಾಡಿದ್ದಾರೆ. ಎಫ್.ಎಸ್.ಎಲ್ ವರದಿ ಬರುತ್ತಿದ್ದಂತೆ ಆರ್ಮ್ಸ್ ಆಕ್ಟ್ ಜೊತೆಗೆ ಸಾಕ್ಷನಾಶ ಸೆಕ್ಷನ್ ಅಡಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment