ವಿನಯ್ ಗೌಡ, ರಜತ್​ ರಿಲೀಸ್​ ಕೇಸ್​ಗೆ ಟ್ವಿಸ್ಟ್​; ಏನಿದು ಪೊಲೀಸರ ವರಸೆ..?

author-image
Veena Gangani
Updated On
ದರ್ಶನ್​ ಸರ್ ಕೇಸ್​ಗೂ, ರೀಲ್ಸ್‌ಗೂ ಸಂಬಂಧ ಏನು? ಕೊನೆಗೂ ಮಚ್ಚು ಬಿಸಾಕಿದ ಸತ್ಯ ಬಿಚ್ಚಿಟ್ಟ ರಜತ್‌!
Advertisment
  • ಇನ್ಸ್ಟಾಗ್ರಾಮ್ ರೀಲ್ಸ್​ನಲ್ಲಿ ಮಚ್ಚು ಪ್ರದರ್ಶಿಸಿದ ಬಿಗ್​ಬಾಸ್ ಮಾಜಿ ಸ್ಪರ್ಧಿಗಳು
  • ರೀಲ್ಸ್​ನಲ್ಲಿ ಬಳಸಿದ್ದ ಮಚ್ಚು ಪೊಲೀಸರಿಗೆ ಒಪ್ಪಿಸಿರುವ ಆರೋಪಿಗಳು
  • ಮಧ್ಯಾಹ್ನ ಬಂಧನ, ಮಧ್ಯರಾತ್ರಿ ರಿಲೀಸ್ ಆಗಿದ್ದು ಹೇಗೆ ಈ ಇಬ್ಬರು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಹಾಗೂ 11ರ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​  ರಿಲೀಸ್​ ಆಗಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಭಯದ ವಾತಾವರಣ ಸೃಷ್ಟಿಸುವಂತ ರೀಲ್ಸ್​ ಮಾಡಿದ್ದಕ್ಕಾಗಿ ಇಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು.

ಇದನ್ನೂ ಓದಿ: SSLC, ITI, BE ಮುಗಿಸಿದವ್ರಿಗೆ ಗುಡ್​​ನ್ಯೂಸ್​.. 9,970 ಹುದ್ದೆಗಳಿಗೆ ಅರ್ಜಿ ಆಹ್ವಾನ

publive-image

ಅಲ್ಲದೇ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರನ್ನ ಬಂಧಿಸಿದ್ರು. ಆದ್ರೆ ರಾತ್ರೋರಾತ್ರಿ ಈ ಇಬ್ಬರನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಮಧ್ಯಾಹ್ನ ಬಂಧಿಸಿದ್ದ ಅವರನ್ನು ರಾತ್ರೋರಾತ್ರಿ ರಿಲೀಸ್​ ಮಡಿದ್ದು ಏಕೆ ಅಂತ ಪೊಲೀಸರ ಮೇಲೆ ಅನುಮಾನ ಹುಟ್ಟುಹಾಕಿದೆ.

publive-image

ಹೌದು, ಬಿಗ್​ಬಾಸ್ ಮೂಲಕ ಆನೆ ಅಂತಲೇ ಫೇಮಸ್​ ಆಗಿದ್ದ ವಿನಯ್ ಗೌಡ ಹಾಗೂ ರಜತ್‌ ರಾತ್ರೋರಾತ್ರಿ ರಿಲೀಸ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಜತ್ ಹಾಗೂ ವಿನಯ್​ ಕೈಯಲ್ಲಿ ಮಚ್ಚು ಹಿಡಿದು ವಿಡಿಯೋ ಶೂಟ್​ ಮಾಡಿದ್ದರು. ಇದೇ ರೀಲ್ಸ್​ ವೈರಲ್​ ಆಗುತ್ತಿದ್ದಂತೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಮತ್ತು ವಿನಯ್ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯ ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆದ್ರೆ ಮಧ್ಯ ರಾತ್ರಿ ರಿಲೀಸ್​ ಆಗಿದ್ದಾರೆ.

publive-image

ವಿನಯ್‌ ಗೌಡ ಮತ್ತು ರಜತ್ ಅವರು ಮಚ್ಚು ಪ್ರದರ್ಶಿಸಿದ ಕೇಸ್‌ನಲ್ಲಿ ಬಸವೇಶ್ವರನಗರ ಪೊಲೀಸರು ರಾತ್ರೋರಾತ್ರಿ ವರಸೆ ಬದಲಿಸಿದ್ರಾ ಎಂಬ ಅನುಮಾನ ಹುಟ್ಟು ಹಾಕಿದೆ. ಬೆಳಗ್ಗೆ ಹೊತ್ತು ಒರಿಜಿನಲ್ ಮಚ್ಚು ಎಂದಿದ್ದ ಪೊಲೀಸರು, ಏಕಾಏಕಿ ರಾತ್ರಿ ಆಗ್ತಿದ್ದಂತೆ ಫೈಬರ್ ಮಚ್ಚು ಎನ್ನುತ್ತಿರೋದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ರೀಲ್ಸ್​ನಲ್ಲಿ ಬಳಸಿದ್ದ ಮಚ್ಚನ್ನ ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ್ದರು. ಇಬ್ಬರ ಕೈನಲ್ಲಿ ರಾರಾಜಿಸಿದ್ದ ಮಚ್ಚು ಫೈಬರ್‌ನಿಂದ ಮಾಡಿದ್ದು ಎಂದು ಪೊಲೀಸರು ಹೇಳ್ತಿದ್ದಾರೆ. ಇದನ್ನೇ ಇಟ್ಟುಕೊಂಡು ಪೊಲೀಸ್ ಠಾಣೆಯಿಂದ ವಿನಯ್ ಗೌಡ ಹಾಗೂ ರಜತ್‌ನ ರಾತ್ರೋರಾತ್ರಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ನೋಟಿಸ್ ನೀಡಿ ಆರೋಪಿಗಳನ್ನ ಬಿಟ್ಟು ಕಳಿಸಿದ್ದು, ಇವತ್ತು ಬೆಳಗ್ಗೆ 10.30ಕ್ಕೆ ಠಾಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment