Bigg Boss: 24 ಗಂಟೆಯಲ್ಲೇ ಎಲಿಮಿನೇಟ್‌ ಆದ ಮೊದಲ ಸ್ಪರ್ಧಿ; ಕಾರಣವೇನು?

author-image
admin
Updated On
Bigg Boss: 24 ಗಂಟೆಯಲ್ಲೇ ಎಲಿಮಿನೇಟ್‌ ಆದ ಮೊದಲ ಸ್ಪರ್ಧಿ; ಕಾರಣವೇನು?
Advertisment
  • ಬಿಗ್ ಬಾಶ್ ಶೋ ಶುರುವಾದ 24 ಗಂಟೆಯಲ್ಲೇ ಬಿಗ್ ಶಾಕ್‌!
  • ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ನಿರ್ಧಾರ
  • 24 ಗಂಟೆಯಲ್ಲೇ ಬಿಗ್ ಬಾಸ್ ಮನೆಯಲ್ಲಿದ್ದವರ ಮುಖವಾಡ ಬಯಲು

ಬಿಗ್ ಬಾಸ್ ರಿಯಾಲಿಟಿ ಶೋ ಅಂದ್ರೆನೇ ಅಲ್ಲಿ ಬಿಗ್ ಟ್ವಿಸ್ಟ್ ಇರಲೇ ಬೇಕು. ಮನೆಯೊಳಗೆ ಯಾರು ಗೆಸ್ ಮಾಡದ ತಿರುವುಗಳು ಸಿಕ್ಕಾಗಲೇ ಎಂಟರ್ಟೈನ್‌ಮೆಂಟ್ ಕಿಕ್ ಜಾಸ್ತಿ ಆಗೋದು. ಬಿಗ್ ಬಾಸ್ ಕೊಡೋ ಶಾಕ್‌ಗೆ ಮನೆಯಲ್ಲಿ ಇರೋ ಸ್ಪರ್ಧಿಗಳು ಕಕ್ಕಾಬಿಕ್ಕಿ ಆಗುತ್ತಾರೆ. ಬಿಗ್ ಬಾಸ್ ನೋಡೋ ವೀಕ್ಷಕರು ಫುಲ್ ಶಾಕ್ ಆಗುತ್ತಾರೆ.

publive-image

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ರಿಯಾಲಿಟಿ ಶೋ ಶುರುವಾದ 24 ಗಂಟೆಯಲ್ಲೇ ಒಬ್ಬ ಸ್ಪರ್ಧಿಯನ್ನ ಮನೆಯಿಂದ ಆಚೆ ಕಳುಹಿಸಲಾಗಿದೆ. ಅಸಲಿಗೆ ಇಂತಹದೊಂದು ಟ್ವಿಸ್ಟ್ ಸಿಕ್ಕಿರೋದು ಕನ್ನಡದ ಬಿಗ್ ಬಾಸ್ ಸೀಸನ್ 11ರಲ್ಲಿ ಅಲ್ಲ. ತಮಿಳು ಕಿರುತೆರೆಯ ಬಿಗ್‌ ಬಾಸ್ ರಿಯಾಲಿಟಿ ಶೋದಲ್ಲಿ ಶಾಕಿಂಗ್ ಅನೌನ್ಸ್ ಮೆಂಟ್ ಆಗಿದೆ.

ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯಲ್ಲಿ ಅತಿ ದೊಡ್ಡ ಎಡವಟ್ಟು.. ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೆ ಕಠಿಣ ಶಿಕ್ಷೆ; ಏನಾಯ್ತು? 

ಕಳೆದ 2 ದಿನದ ಹಿಂದಷ್ಟೇ ತಮಿಳು ಕಿರುತೆರೆಯ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿತ್ತು. ಇದೇ ಮೊದಲ ಬಾರಿಗೆ ನಟ ವಿಜಯ್ ಸೇತುಪತಿ ಅವರು ಬಿಗ್ ಬಾಸ್ ರಿಯಾಲಿಟಿ ಶೋವನ್ನ ನಿರೂಪಕರಾಗಿ ಪದಾರ್ಪಣೆ ಮಾಡಿದ್ದರು.

publive-image

ಬಿಗ್ ಬಾಸ್ ಸೀಸನ್‌ 8ರಲ್ಲಿ ಒಟ್ಟು 18 ಸ್ಪರ್ಧಿಗಳ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದರು. ಆದರೆ 24 ಗಂಟೆಯೊಳಗೆ ಒಬ್ಬ ಸ್ಪರ್ಧಿಯನ್ನ ಎಲಿಮಿನೇಟ್ ಮಾಡಿ ಕಳುಹಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಸ್ಪರ್ಧಿಗಳ ವರ್ತನೆ ಮೇಲೆ ಮನೆ ಸದಸ್ಯರು ವೋಟಿಂಗ್ ಮಾಡಿದ್ದಾರೆ. ಈ ವೋಟಿಂಗ್ ಪ್ರಕಾರ ನಟಿ ಸಚನಾ ನಮಿದಾಸ್ ಅವರು ಬಿಗ್ ಬಾಸ್ ಸೀಸನ್ 8ರಿಂದ ಔಟ್‌ ಆಗಿದ್ದಾರೆ.


">October 7, 2024

ಸಚನಾ ನಮಿದಾಸ್‌ ವಿಜಯ್ ಸೇತುಪತಿ ಅಭಿನಯದ ತಮಿಳಿನ ಮಹಾರಾಜ ಚಿತ್ರದಲ್ಲಿ ಮಗಳಾಗಿ ಅಭಿನಯಿಸಿದ್ದರು. ಖುಷ್, ಖುಷಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದ ಸಚನಾ ಎಲಿಮಿನೇಟ್ ಎನ್ನುತ್ತಿದ್ದ ಕಣ್ಣೀರು ಹಾಕುತ್ತಾ ಹೊರಗಡೆ ಬಂದಿದ್ದಾರೆ. ಈ ಮೂಲಕ ಬರೀ 24 ಗಂಟೆಯಲ್ಲೇ ಬಿಗ್ ಬಾಸ್ ಶೋ ಮುಗಿಸಿದ ಮೊದಲ ಸ್ಪರ್ಧಿಯನ್ನು ಹೆಸರು ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment