ಬಿಗ್‌ ಬಾಸ್ ಬ್ಯೂಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್‌; ಅಳಿಯನ ಮೇಲೆ ಆರೋಪ!

author-image
admin
Updated On
ಬಿಗ್‌ ಬಾಸ್ ಬ್ಯೂಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್‌; ಅಳಿಯನ ಮೇಲೆ ಆರೋಪ!
Advertisment
  • ನಿಮ್ಮ ಅಳಿಯ ಬಡಾವಣೆಗಳನ್ನ ಮಾಡಿ ಜೈಲಿಗೆ ಹೋಗಿ ಬಂದಿದ್ದಾನೆ
  • ಪುನೀತ್ ರಾಜ್‌ ಕುಮಾರ್​ ಅವರ ಸಮಾಧಿ ಬಳಿ ಬಂದು ಆಣೆ ಮಾಡಿ
  • ಮಧ್ಯರಾತ್ರಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪ

ಬಿಗ್ ಬಾಸ್ ಮಾಜಿ ಸ್ಪರ್ಧಿ, ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ಮದುವೆಯಾಗಿ 8 ತಿಂಗಳಾಗಿದೆ. ಇದೀಗ ದೀಪಿಕಾ ದಾಸ್ ತಾಯಿ ಪದ್ಮಲತಾ ಅವರಿಗೆ ಬೆದರಿಕೆ ಕರೆಗಳು ಬಂದಿದೆ. ಮಧ್ಯರಾತ್ರಿ ದೂರವಾಣಿ ಕರೆ ಮಾಡಿರುವ ದುಷ್ಕರ್ಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ದೀಪಿಕಾ ದಾಸ್ ತಾಯಿ ಪದ್ಮಲತಾ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ದೂರವಾಣಿ ಕರೆ ಮಾಡಿರುವ ಅಪರಿಚಿತರು ನಿಮ್ಮ ಅಳಿಯ ದೀಪಕ್ ಕುಮಾರ್ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ನಿಮ್ಮ ಅಳಿಯ ಬಡಾವಣೆಗಳನ್ನ ಮಾಡಿ ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಹೇಳಿದ್ದಾರೆ. ಹೀಗಾಗಿ ಯಶವಂತ್​ ಬಿನ್ ಕೃಷ್ಣಮೂರ್ತಿ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ.

publive-image

ಇದಾದ ಬಳಿಕ ನನ್ನ ಮಗಳು ದೀಪಿಕಾದಾಸ್​ಗೂ ಕರೆ ಮಾಡಿ ಹೀಗೆ ಹೇಳಿದ್ದಾನೆ. ನಿಮಗೆ ತಿಳಿದಿಲ್ಲವೇ, ಪುನೀತ್ ಸಮಾಧಿ ಬಳಿ ಆಣೆ ಮಾಡಿ ಹೇಳಿ ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ನನ್ನ ಮಗಳು ಕೂಡ, ಕಾನೂನಾತ್ಮಕ ಕ್ರಮ ಕೈಗೊಳ್ಳಿ ಎಂದಿದ್ದಾಳೆ. ಮಾಧ್ಯಮಗಳಿಗೆ ಸುದ್ದಿ ನೀಡಿ ನಿಮ್ಮ ಹೆಸರಿಗೆ ಧಕ್ಕೆ ತರುತ್ತೇವೆ. ಹಣ ನೀಡಿ ಇಲ್ಲದಿದ್ರೆ ನಿಮ್ಮ ಹೆಸರು ಬರೆದಿಟ್ಟು ಸಾಯೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪದ್ಮಲತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ದೀಪಿಕಾ ದಾಸ್ ತಾಯಿಗೆ ಬೆದರಿಕೆ.. ಆಘಾತಕ್ಕೆ ಒಳಗಾದ ನಟಿ, ಕೇಸ್ ದಾಖಲು 

ಆರೋಪಗಳ ಬಗ್ಗೆ ದೀಪಿಕಾ ದಾಸ್ ಪತಿ ದೀಪಕ್ ಅವರು​ ತಡೆಯಾಜ್ಞೆ ದಾವೆ ಹಾಕಿದ್ದು, ವಿಚಾರಣೆ ಹಂತದಲ್ಲಿದೆ. ಮಗಳು, ಅಳಿಯನ ಹೆಸರು ಬಳಸಿಕೊಂಡು ಅವರ ಘನತೆಗೆ ಕುತ್ತು ತರೋ ಪ್ರಯತ್ನ ಮಾಡಲಾಗುತ್ತಿದೆ. ಅವರು ಒಪ್ಪದ ಕಾರಣ ಪದೇ ಪದೇ ನನಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಯಶವಂತ ಎಂಬುವವರು ನಾನು ಹಣ ಕೊಡದಿದ್ರೆ ಸಾಯುವುದಾಗಿ ಬೆದರಿಕೆ ಹಾಕಿದ್ದಾನೆ. ಯಶವಂತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಪದ್ಮಲತಾ ವಿನಂತಿ ಮಾಡಿಕೊಂಡಿದ್ದಾರೆ. ಪದ್ಮಲತಾ ಅವರ ದೂರಿನ ಹಿನ್ನೆಲೆಯಲ್ಲಿ ಆರೋಪಿಗಾಗಿ ಪೊಲೀಸರ‌ು ಹುಡಕಾಟ ನಡೆಸುತ್ತಿದ್ದಾರೆ.

publive-image

ದೀಪಿಕಾ ದಾಸ್ ತಾಯಿ ದೂರಿನಲ್ಲೇನಿದೆ?
ನನ್ನ ಮಗಳು ದೀಪಿಕಾ ದಾಸ್ ಚಲನಚಿತ್ರ ನಟಿಯಾಗಿದ್ದು, ಈಕೆಗೆ ಈಗ ಸುಮಾರು 8 ತಿಂಗಳ ಹಿಂದೆ ದೀಪಕ್ ಕುಮಾರ್ ಅವರೊಂದಿಗೆ ವಿವಾಹವಾಗಿರುತ್ತೆ. ನನ್ನ ಮಗಳು ಮತ್ತು ಅಳಿಯ ಸುಮಾರು 1 ತಿಂಗಳ ಹಿಂದೆ ಇಂಗೆಂಡ್ ಪ್ರವಾಸಕ್ಕೆ ಹೋಗಿರುತ್ತಾರೆ.

ಹೀಗಿರುವಾಗ ಸುಮಾರು 7 ತಿಂಗಳಿಂದ ನನ್ನ ಮೊಬೈಲ್​ಗೆ ಯಶವಂತ್ ಬಿನ್ ಕೃಷ್ಣ ಮೂರ್ತಿ ಎಂದು ಹೇಳಿಕೊಂಡು ನನಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಏಕೆ ಮದುವೆ ಮಾಡಿದ್ದೀರಿ. ನಿಮ್ಮ ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಡಾವಣೆಗಳನ್ನು ಮಾಡಿ ಜನರಿಗೆ ಮೋಸ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಿದ್ರು. ನಾನು ಹಾಗೇನಾದರೂ ಇದ್ದರೆ ನನ ಅಳಿಯನ ಮೇಲೆ ಕಾನೂನಾತ್ಮಕವಾಗಿ ದೂರು ನೀಡಿ ಎಂದು ಹೇಳಿ ಸುಮ್ಮನಾಗಿರುತ್ತೇನೆ. ನಂತರ ಕೆಲವು ದಿನಗಳಾದ ಮೇಲೆ ನನ್ನ ಮಗಳು ದೀಪಿಕಾ ದಾಸ್​ನ ನಂಬರ್​ಗೆ ಸಹ ಯಶವಂತ್​ ಫೋನ್ ಮಾಡಿ ನಿಮ್ಮ ಯಜಮಾನರು ಅಕ್ರಮ ಚಟುವಟಿಕೆಗಳಿಂದ ಬಡಾವಣೆ ಮಾಡಿ ಜನರಿಗೆ ಮೋಸ ಮಾಡಿರುತ್ತಾರೆ. ಇದು ನಿಮಗೆ ತಿಳಿದಿಲ್ಲವೇ? ನೀವು ಪುನೀತ್ ರಾಜ್‌ ಕುಮಾರ್​ರವರ ಸಮಾಧಿ ಬಳಿ ಆಣೆ ಮಾಡಿ ಎಂದು ಹೇಳಿರುತ್ತಾನೆ. ಅದರೆ, ನನ್ನ ಮಗಳು ಈ ಆರೋಪಗಳೆಲ್ಲಾ ಸುಳ್ಳು ಇದಕ್ಕೆ ಪುನೀತ್ ರಾಜ್ ಕುಮಾರ್ ರವರ ಹೆಸರು ತರಬೇಡಿ. ನೀವು ಕಾನೂನು ರೀತಿ ದೂರು ನೀಡಿ ಎಂದು ಹೇಳಿರುತ್ತಾಳೆ.

ಇದನ್ನೂ ಓದಿ: ಅದ್ಧೂರಿಯಾಗಿ ನಡೆದ ಲಕ್ಷ್ಮೀ ನಿವಾಸ ಖ್ಯಾತಿಯ ಚಂದನಾ, ಪ್ರತ್ಯಕ್ಷ್‌ ವಿವಾಹ; ಯಾರೆಲ್ಲಾ ಬಂದಿದ್ರು? 

ಆದರೆ ಈ ಬಗ್ಗೆ, ಮಾಧ್ಯಮಗಳಿಗೆ ಸುದ್ದಿ ನೀಡಿ ನಿಮ್ಮ ಹೆಸರಿಗೆ ಧಕ್ಕೆ ತರುತ್ತೇನೆ. ಇಲ್ಲವಾದಲ್ಲಿ ನನಗೆ ಹಣ ನೀಡಬೇಕು. ನೀವು ಹಣ ನೀಡದೆ ಇದ್ದರೆ ನಾನು ಸಾಲಗಾರರ ಕಾಟಕ್ಕೆ ನಿಮ್ಮ ಹೆಸರು ಬರೆದು ಸಾಯುತ್ತೇನೆ ಎಂದು ಬೆದರಿಕೆ ಹಾಕುತ್ತಿರುತ್ತಾನೆ, ಈ ವಿಚಾರವಾಗಿ ಈಗಾಗಾಲೆ ಯಶವಂತನ ಮೇಲೆ ನಮ್ಮ ಅಳಿಯ ದೀಪಕ್ ಕುಮಾರ್ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆಯ ದಾವೆ ಹಾಕಿದ್ದು, ಇದು ವಿಚಾರಣೆಯಲ್ಲಿರುತ್ತೆ, ಯಶವಂತನು ದೀಪಕ್ ಕುಮಾರ್​ನ ಸ್ನೇಹಿತರಾದ ವೆಂಕಟೇಶ್​ಗೆ ಕರೆ ಮಾಡಿ ಸುಳ್ಳು ಆರೋಪಗಳನ್ನು ಮಾಡುತ್ತಾ, ನಮ್ಮ ಅಳಿಯ ಮಾಡಿರುವ ಬಡಾವಣೆಗಳ ಬಗ್ಗೆ, ಅಪಪ್ರಚಾರ ಮಾಡುತ್ತಿರುತ್ತಾನೆ. ಇದರ ಬಗ್ಗೆಯೂ ಸೆಪ್ಟೆಂಬರ್ 27 ರಂದು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ, ಯಶವಂತ ನ್ಯಾಯಾಲಯಕ್ಕೆ, ಹಾಜರಾಗಿರುವುದಿಲ್ಲ. ನನ್ನ ಮಗಳು ಮತ್ತು ಅಳಿಯನ ಹೆಸರನ್ನು ಬಳಸಿಕೊಂಡು ನಮ್ಮ ಘನತೆಗೆ ಕುತ್ತು ತರುವ ಪ್ರಚಾರವನ್ನು ಮೀಡಿಯಾಗಳಲ್ಲಿ ಮಾಡುವುದಾಗಿ ಹೇಳಿದ್ದಾನೆ. ಹಣಕ್ಕಾಗಿ ಬೇಡಿಕೆ ಇಟ್ಟು ಪದೇ ಪದೇ ನನಗೆ ಪೋನ್ ಮಾಡಿ ಹಣ ಕೊಡಿಸದಿದ್ದರೆ ಸಾಯುವುದಾಗಿ ಬೆದರಿಕೆ ಹಾಕುತ್ತಿರುತ್ತಾನೆ. ಆದ್ದರಿಂದ ಯಶವಂತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡುತ್ತಿದ್ದೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment