/newsfirstlive-kannada/media/post_attachments/wp-content/uploads/2024/11/gouathmi4.jpg)
ಕನ್ನಡದ ಬಿಗ್ಬಾಸ್ ಸೀಸನ್ 109ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಅಚ್ಚರಿಯ ರೀತಿಯಲ್ಲಿ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಬಂದಿಲ್ಲ. 108 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ನಿನ್ನೆಯ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಬಿಗ್ಬಾಸ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.
ಇದನ್ನೂ ಓದಿ:BBK11: ನಡು ರಾತ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಶಾಕ್.. ಮನೆಯಿಂದ ಹೊರ ಬಂದವರು ಯಾರು?
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಗೌತಮಿ ಆಚೆ ಬರುತ್ತಾರೆ ಅಂತ ಗುಸು ಗುಸು ಶುರುವಾಗಿತ್ತು. ಕೊನೆಯ ಕ್ಷಣದಲ್ಲಿ ಬಿಗ್ಬಾಸ್ ಮಿಡ್ ವೀಕ್ ಎಲಿಮಿನೇಷನ್ ಮುಂದೂಡಿಕೆ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಊಹಾಪೋಹಗಳಿಗೆ ತೆರೆ ಬಿದ್ದಿದ್ದೆ.
ಕನ್ನಡದ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಬಿಗ್ಬಾಸ್ ಮನೆಯಲ್ಲಿ ಒಂದು ರೇಂಜ್ಗೆ ಸೌಂಡ್ ಮಾಡಿದ್ದಾರೆ. ಈ ಹಿಂದೆ ಗೌತಮಿ ಅವರ ಪರ್ಫಾಮನ್ಸ್ ಖಡಕ್ ಆಗಿ ಇರಬೇಕು ಅಂತ ವೀಕ್ಷಕರು ಕೂಡ ನಿರೀಕ್ಷಿಸುತ್ತಿದ್ದರು. ಬೆನ್ನಲ್ಲೇ ವೀಕ್ಷಕರ ಕನಸ್ಸನ್ನು ಒಂದು ಮಟ್ಟಿಗೆ ನನಸು ಮಾಡಿದ್ರು. ವೀಕ್ಷಕರು ಸುಮಾರು 3 ವರ್ಷಗಳ ಕಾಲ ಗೌತಮಿ ಅವರನ್ನ ಸತ್ಯನ್ನೋ ಖಡಕ್ ಪಾತ್ರದಲ್ಲಿಯೇ ನೋಡಿದ್ದಾರೆ. ಯಾವುದೇ ಶೋಗೆ ಬಂದ್ರೂ ಅದೇ ಪಾತ್ರದಲ್ಲಿಯೇ ಎಂಟ್ರಿಯಾಗ್ತಿದ್ರು. ಅಲ್ಲೊಂದು ಇಲ್ಲೊಂದು ಸಂದರ್ಶನವೊಂದರಲ್ಲಿ ಬಿಟ್ಟರೆ ಗೌತಮಿ ನಿಜ ಜೀವನಲ್ಲಿ ಹೇಗಿರ್ತಾರೆ ಅನ್ನೋದು ವೀಕ್ಷಕರಿಗೆ ಗೊತ್ತೇ ಇರಲಿಲ್ಲ.
ಬಿಗ್ಬಾಸ್ನಲ್ಲಿ ಗೌತಮಿ ಹೇಗಿದ್ದಾರೆ ಅಂತ ಒಂದು ಮಟ್ಟಿಗೆ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಗೊತ್ತಾಗಿತ್ತು. ಗೌತಮಿ ಅವರು ಆಡುವ ಟಾಸ್ಕ್ ನೋಡಿ ಅಭಿಮಾನಿಗಳು ಖುಷಿ ಆಗಿದ್ದರು. ಟಾಸ್ಕ್ ಅಂತ ಬಂದರೆ ಅವರು ಎಷ್ಟು ಸ್ಟ್ರಾಂಗ್ ಆಗಿ ಆಡುತ್ತಾರೆ ಅಂತ ಅದನ್ನು ನೋಡಿದ್ದಾರೆ ಅಭಿಮಾನಿಗಳು. ಮತ್ತೊಂದು ವಿಚಾರ ಎಂದರೆ ಗೌತಮಿ ಅವರು ಅಷ್ಟು ಕೂಲ್ ಆಗಿ ಇರೋದಕ್ಕೆ ಮುಖ್ಯ ಕಾರಣವೇ ಧ್ಯಾನ. ಬಿಗ್ಬಾಸ್ ಮನೆಯಲ್ಲಿ ದೇವರ ವಿಗ್ರಹದ ಮುಂದೆ ಕುಳಿತುಕೊಂಡ ಆಗಾಗ ಧ್ಯಾನ ಮಾಡುತ್ತ ಇರುತ್ತಿದ್ದರು. ಯಾವಾಗಲೂ ಧನಾತ್ಮಕವಾಗಿ ಯೋಚನೆ ಮಾಡುತ್ತಾರೆ. ಹೀಗಾಗಿ ಬಿಗ್ಬಾಸ್ ಮನೆಯಲ್ಲಿ ಇಷ್ಟು ದಿನ ಗೌತಮಿ ಅವರು ಏಕಾಗ್ರತೆಯಿಂದ ಇರೋದಕ್ಕೆ ಸಾಧ್ಯವಾಗಿದೆ.
ಈ ವಾರ ಬಿಗ್ಬಾಸ್ ಸ್ಪರ್ಧಿಗಳಿಗೆ ನಾಮಿನೇಷನ್ನಿಂದ ಸೇಫ್ ಆಗಲು ಅವಕಾಶವೊಂದನ್ನು ಕೊಟ್ಟಿದ್ದರು. ಆದ್ರೆ ನಿನ್ನೆಯ ಎಲಿಮಿನೇಷನ್ನಲ್ಲಿ ಗೌತಮಿ ಅವರು ಕೊನೆಯ ಕ್ಷಣದಲ್ಲಿ ಸೇಫ್ ಆಗಿದ್ದೀರಿ ಅಂತ ಬಿಗ್ಬಾಸ್ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಮಧ್ಯ ರಾತ್ರಿ ನಡೆಯಬೇಕಿದ್ದ ಮೀಡ್ ವೀಕ್ ಎಲಿಮಿನೇಷನ್ ಮುಂದೂಡಿಕೆ ಮಾಡಲಾಗಿದೆ. ಬಿಗ್ಬಾಸ್ ಮನೆಯಲ್ಲಿ ಗೌತಮಿ, ಭವ್ಯಾ, ಮೋಕ್ಷಿತಾ, ಧನರಾಜ್, ತ್ರಿವಿಕ್ರಮ್, ರಜತ್ ಹಾಗೂ ಹನುಮಂತ ಉಳಿದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ