newsfirstkannada.com

ಡ್ರೋನ್‌ಗೆ ಕರ್ಚೀಫ್‌, ರಕ್ಷಕ್​ಗೆ ಸೈಕಲ್, ತುಕಾಲಿ​​ಗೆ ಪೊಲೀಸ್ ಮೈಕ್‌.. ಬಿಗ್‌ಬಾಸ್‌ ಪ್ರೇಕ್ಷಕರ ಟ್ವಿಸ್ಟ್‌ಗೆ ಸ್ಪರ್ಧಿಗಳು ಶಾಕ್‌!

Share :

Published October 28, 2023 at 5:17pm

Update October 28, 2023 at 7:27pm

    ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಗ್​ಬಾಸ್​​ ಸ್ಪರ್ಧಿಗಳಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್

    ಪ್ರೇಕ್ಷಕರ ಅಭಿಪ್ರಾಯ, ಉಡುಗೊರೆ​​ ಕಂಡು ಬಿಗ್​ಬಾಸ್​​ ಸ್ಫರ್ಧಿಗಳು ಫುಲ್​ ಶಾಕ್​

    ಪೊಲೀಸ್​ ಮೈಕ್, ರಿಟರ್ನ್​​ ಟಿಕೆಟ್, ಸೈಕಲ್, ಎಲೆಕೋಸು ಯಾರಿಗೆ ಯಾವುದು?

ಬಿಗ್​ಬಾಸ್‌ ಸೀಸನ್‌ 10ರ​ ಸ್ಪರ್ಧಿಗಳು ಈಗ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ಕಿಚ್ಚ ಸುದೀಪ್​​ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆಸಿದ್ದಾರೆ. ಸದ್ಯ ಕಲರ್ಸ್​​ ಕನ್ನಡ ಲೇಟೆಸ್ಟ್‌ ಪ್ರೋಮೋವೊಂದನ್ನ ರಿಲೀಸ್ ಮಾಡಿದೆ. ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್​​ ಎಂಟ್ರಿ ಆಗುತ್ತಿದ್ದಂತೆ ಬಿಗ್​ಬಾಸ್​ ಕಳಿಸಿರೋ ಬಾಕ್ಸ್​​ನಲ್ಲಿ ಗಿಫ್ಟ್​ಗಳಿವೆ. ಬಿಗ್​ಬಾಸ್​​ ನೋಡುತ್ತಿರೋ ಜನರು ನಿಮ್ಮ ಮೇಲೆ ಇಟ್ಟಿರೋ ಒಪಿನಿಯನ್ ಇದು ಎಂದು ಕಿಚ್ಚ ಸುದೀಪ್​ ಹೇಳುತ್ತಾರೆ.

ಬಿಗ್​ಬಾಸ್​​ ವೀಕ್ಷಕರು ಮನೆ ಮಂದಿಯ ಮೇಲೆ ಇಟ್ಟಿರೋ ಅಭಿಪ್ರಾಯವನ್ನು ಆ ಗಿಫ್ಟ್​ ಮೂಲಕ ಕಳಿಸಲಾಗಿದೆ. ಇನ್ನೂ ಈ ಎಲ್ಲ ಸ್ಪರ್ಧಿಗಳು ಒಂದೊಂದಾಗಿ ಅವರ ಹೆಸರಿಗೆ ಬಂದ ಗಿಫ್ಟ್ ಅನ್ನು ಓಪನ್​​ ಮಾಡುತ್ತಾರೆ. ಬಳಿಕ ತಮಗೆ ಬಂದ ಗಿಫ್ಟ್​ ನೋಡಿ ಶಾಕ್​ ಆಗುತ್ತಾರೆ. ಅರೇ ಏನಿದು ಅನ್ನೋ ರಿಯಾಕ್ಷನ್​​ ಕೂಡ ಕೊಡುತ್ತಾರೆ. ಆದರೆ ಇಲ್ಲಿ ಬಿಗ್​ಬಾಸ್​​ ಟ್ವಿಸ್ಟ್​ವೊಂದನ್ನು ಇಟ್ಟಿದ್ದರು. ಈ ಗಿಫ್ಟ್​​ಗಳ ಜೊತೆಗೆ ಒಂದು ಲೇಟರ್​ ಸಹ ಕಳಿಸಿದ್ದರು. ಆ ಲೇಟರ್​​ನಲ್ಲಿ ಗಿಫ್ಟ್​ಗೆ ಕಳುಹಿಸಿದ ಬಗ್ಗೆ ಬರೆಯಲಾಗಿತ್ತು. ತೂಕಾಲಿ ಸಂತೋಷ್​​ಗೆ ಪೊಲೀಸ್​ ಮೈಕ್​, ವಿನಯ್​ಗೆ ಆನೆ ಗೊಂಬೆ, ನಮ್ರತಾ ಗೌಡಗೆ ಚಮಚ, ಸ್ನೇಹಿತ್​ಗೆ ರಿಟರ್ನ್​​ ಟಿಕೆಟ್, ಮೈಕಲ್​ಗೆ ಬ್ರೈನ್​ ಫೋಟೋ, ರಕ್ಷಕ್​ಗೆ ಸೈಕಲ್​, ನೀತುಗೆ ಗಾಳಿಯಿಲ್ಲ ಬಾಲ್​​, ಭಾಗ್ಯಶ್ರೀಗೆ ಎಲೆಕೋಸು, ಪ್ರತಾಪ್​ಗೆ ಕರ್ಚೀಫ್ ಕೊಟ್ಟಿದ್ದಾರೆ.

ತೂಕಾಲಿ ಸಂತೋಷ್​​ಗೆ ಕೊಟ್ಟ ಪೊಲೀಸ್​ ಮೈಕ್​ ಜೊತೆಗೆ ಲೆಟರ್​​ನಲ್ಲಿ ಈ ರೀತಿಯಲ್ಲಿ ಬರೆಯಲಾಗಿತ್ತು. ಎಲ್ಲರ ಬಗ್ಗೆ ಧೈರ್ಯವಾಗಿ ಮಾತಾಡ್ತೀರಲ್ಲ ಹಾಗೇ ವಿನಯ್​ ಕಿವಿಗೆ ಮುಟ್ಟುವ ತರಹ ಮಾತಾಡ್ರಿದೆ ಇನ್ನೂ ಒಳ್ಳೆಯದು ಎಂದು ಬಂದಿದೆ. ಇತ್ತ ನಮ್ರತಾ ಗೌಡ ಅವರಿಗೆ ನಿಮಗೆ ದಾದಾಗಿರಿ ಮಾಡೋಕೆ ಬರಲಿಲ್ಲ ಅಂದ್ರು ಪರವಾಗಿಲ್ಲ ಚಮಚಾಗಿರಿ ಮಾಡಿಕೊಂಡು ಇರಬೇಡಿ ಎಂದು ಲೆಟರ್​​ನಲ್ಲಿ ಬರೆಯಲಾಗಿದೆ. ಈ ಲೆಟರ್​​ ಓದಿದ ಕೂಡಲೇ ಇದಕ್ಕೆ ನಮ್ರತಾ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರಿಗೂ ಚಚ್ಮಾ ಆಗಿ ಇಲ್ಲಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಕಿಚ್ಚ ಸುದೀಪ್​ ಈ ಒಪಿನಿಯನ್​​ನನ್ನೇ ಜನರಿಗೆ ನೀವೆಲ್ಲರೂ ಕೊಟ್ಟಿದ್ದೀರಾ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೋನ್‌ಗೆ ಕರ್ಚೀಫ್‌, ರಕ್ಷಕ್​ಗೆ ಸೈಕಲ್, ತುಕಾಲಿ​​ಗೆ ಪೊಲೀಸ್ ಮೈಕ್‌.. ಬಿಗ್‌ಬಾಸ್‌ ಪ್ರೇಕ್ಷಕರ ಟ್ವಿಸ್ಟ್‌ಗೆ ಸ್ಪರ್ಧಿಗಳು ಶಾಕ್‌!

https://newsfirstlive.com/wp-content/uploads/2023/10/bigg-bos.jpg

Load More