/newsfirstlive-kannada/media/post_attachments/wp-content/uploads/2023/10/bigg-boss-94.jpg)
ಬಿಗ್ಬಾಸ್ ಸೀಸನ್ 10ರ ಮೊದಲ ಪಂಚಾಯ್ತಿಗೆ ಕಿಚ್ಚ ಸುದೀಪ್ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸೀಸನ್ 10ರ ಮೊದಲ ಪಂಚಾಯ್ತಿಗೆ ಮನೆಯ ಎಲ್ಲಾ ಸದಸ್ಯರು ಹಾಜರಾಗಿದ್ದಾರೆ. ಕಿಚ್ಚ ಬಂದ ತಕ್ಷಣ ಮೊದಲು ಮಾಡಿದ್ದ ಕೆಲಸವೇ ಅಸಮರ್ಥರು ಹಾಗೂ ಸಮರ್ಥರು ಅನ್ನೋ ಎರಡು ಗುಂಪುಗಳ ಬಗ್ಗೆ ಮಾತಾಡಿದ್ದರು. ಇದರ ಜೊತೆಗೆ ಇನ್ಮುಂದೆ ಈ ಮನೆಯಲ್ಲಿ ಎಲ್ಲರು ಸಮಾನರು ಎಂದು ಘೋಷಣೆ ಮಾಡಿದ್ದಾರೆ.
ಕಿಚ್ಚನ ಒಪ್ಪಿಗೆಯ ನಂತರ ಅಸಮರ್ಥರಿಗೂ ಬಟ್ಟೆಗಳು ಬಂದಿವೆ. ಆದರೆ ಅಸಮರ್ಥರಲ್ಲಿ ಸಂಗೀತಾ ಕಾರ್ತಿಕ್ ಹಾಗೂ ತನಿಶಾಗೆ ಬಿಟ್ಟು ಇನ್ನು ಮಿಕ್ಕುಳಿದ ಎಲ್ಲಾ ಅಸಮರ್ಥರಿಗೆ ಬಟ್ಟೆಗಳು ಬಂದಿವೆ. ಕಾರಣ ಏನಪ್ಪ ಅಂದ್ರೆ, ಮೊನ್ನೆ ರಾತ್ರಿ ಸಂಗೀತಾ, ಕಾರ್ತಿಕ್ ಹಾಗೂ ತನಿಶಾ ಯಾರಿಗೂ ಗೊತ್ತಾಗದಂತೆ ಒಂದು ಟೊಮ್ಯಾಟೋವನ್ನ ಕಟ್ ಮಾಡಿ ತಿಂದಿದ್ದಾರೆ. ಇದು ಬಿಗ್ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದಂತೆ. ಕ್ಯಾಪ್ಟನ್ ಸ್ನೇಹಿತ್ ಕಣ್ಣು ತಪ್ಪಿಸಿ ಈ ಮೂವರು ಅಡುಗೆ ಮನೆಯಲ್ಲಿ ಟೊಮ್ಯಾಟೋವನ್ನ ಕದ್ದು ತಿಂದಿದ್ದಾರೆ.
ಇದನ್ನು ಓದಿ:Video: ಡ್ರೋನ್ ಪ್ರತಾಪ್‌ಗೆ ಕೊನೆಗೂ ಸಿಕ್ಕ ನ್ಯಾಯ; ತುಕಾಲಿ, ವರ್ತೂರು ಟೊಮ್ಯಾಟೋಗೆ ಪಂಚ್ ಕೊಟ್ಟ ಕಿಚ್ಚ ಸುದೀಪ್
ಇದೇ ಕಾರಣಕ್ಕೆ ಬಿಗ್ಬಾಸ್ ಈ ಮೂರು ಸ್ಪರ್ಧಿಗಳಿಗೆ ಯಾವುದೇ ಬಟ್ಟೆಗಳನ್ನು ಕಳಿಸಿಲ್ಲ ಅದೇ ಕಾರಣಕ್ಕೆ ಸಿಟ್ಟಾದ ತನಿಶಾ ಬೇಸರದಲ್ಲಿ ಇದೆಲ್ಲಾ ಬಿಗ್ಬಾಸ್ ಬೇಕು ಬೇಕಂತಲೇ ಅವಮಾನ ಮಾಡುತ್ತಿದ್ದಾರೆ ಅಂತ ಬಿಗ್ಬಾಸ್ ಮೇಲೆ ಕೋಪಿಸಿಕೊಳ್ಳುತ್ತಾರೆ. ಅದಕ್ಕೆ ಕಿಚ್ಚ ಅವರ ತಪ್ಪನ್ನು ಅವರಿಗೆ ಅರಿವು ಮಾಡಿಸಿದ್ದಾರೆ. ಇನ್ಮುಂದೆ ಬಿಗ್ಬಾಸ್ ಅಸಮರ್ಥರು ಸಮರ್ಥರು ಎಂಬ ಗುಂಪುಗಳನ್ನ ವಿಂಗಡಣೆ ಮಾಡಿ ಮನೆ ಮಂದಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ