newsfirstkannada.com

BIGG BOSS: ದೊಡ್ಮನೆಯ ರಾಜ ತುಕಾಲಿಗೆ ಕಿಸ್​ ಕೊಟ್ಟ ಕಾರ್ತಿಕ್! ಒಂದು ನಿಮಿಷ ಅಂದ್ರು ಬಿಡಲಿಲ್ಲ ಗುರು!​

Share :

Published January 26, 2024 at 8:26am

Update January 26, 2024 at 11:49am

    ಮನೆ ಮಂದಿಗೆ ಸರ್​ಪ್ರೈಸ್​​ ಕೊಟ್ಟ ಬಿಗ್​ ಬಾಸ್​

    ದೊಡ್ಮನೆಗೆ ಬಂತು ಪ್ರತಾಪ್​ ತಯಾರಿಸಿದ ಡ್ರೋನ್

    ಬಿಗ್​ ಬಾಸ್​ ಮನೆಯಲ್ಲಿ ರಾಜನಾದ ತುಕಾಲಿ ಸಂತೋಷ್

ಫಿನಾಲೆ ವಾರದಲ್ಲಿರುವ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದಲ್ಲಾ ಒಂದು ಸರ್​ಪ್ರೈಸ್​ ಕೊಡುತ್ತಿದ್ದಾರೆ. ಅದರಂತೆಯೇ ಇದೀಗ ಮನೆಯ ತಮ್ಮಾಸೆಯಂತೆ ಕೇಳಿಕೊಂಡ ಸ್ಪರ್ಧಿಗಳಿಗೆ ಅವರು ಕೋರಿಕೊಂಡಿರುವುದನ್ನು ನೀಡುತ್ತಿದ್ದಾರೆ.

ಹೌದು. ಸ್ಪರ್ಧಿಗಳು ಕೇಳಿದ್ದನ್ನು ಬಿಗ್​ ಬಾಸ್ ತಥಾಸ್ತು ಅಂತಿದ್ದಾರೆ. ಅವರ ಆಸೆಗಳೇನು ಅದನ್ನು ಒಲಿಸಿ ಕೊಟ್ಟಿದ್ದಾರೆ. ಅದರಂತೆಯೇ ಡ್ರೋನ್​ ಪ್ರತಾಪ್​ ಬಿಗ್​ ಬಾಸ್​ ಬಳಿ ಡ್ರೋನ್​ ಕೇಳಿದ್ದು, ಮನೆಗೆ ಡ್ರೋನ್​ ಆಗಮನವಾಗಿದೆ. ಇದರಿಂದ ಪ್ರತಾಪ್​ ಖುಷಿಯಾಗಿದ್ದಾರೆ.

ರಾಜನಂತೆ ಬದುಕಿದ ತುಕಾಲಿ

ಬಿಗ್​ ಬಾಸ್​ ತುಕಾಲಿ ಸಂತೋಷ್​ಗೆ ರಾಜನಂತೆ ಬದುಕಲು ಹೇಳಿದ್ದಾರೆ. ಇದೇ ಸಂತಸದಲ್ಲಿ ತುಕಾಲಿ ಕೆಂಪು ಕೋಟು, ಪ್ಯಾಂಟ್​ ಧರಿಸಿಕೊಂಡು ​​ರಾಜನಂತೆ ವರ್ತಿಸಿದ್ದಾರೆ. ಈ ವೇಳೆ ತಲೆದಿಂಬು ತೆಗೆದುಕೊಂಡು ಬೀಸಬೇಕು ಎಂದು ಕಾರ್ತಿಕ್​ ಬಳಿ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್​ ಅವರು ಹೇಳಿದಂತೆ ಮಾಡಿದ್ದಾರೆ.

ಅತ್ತ ವಿನಯ್​, ಸಂಗೀತ ಕೂಡ ರಾಜನ ಶುಶ್ರೂಷೆ ಮಾಡಿದ್ದಾರೆ. ವಿನಯ್​ ರಾಜ ತುಕಾಲಿಗೆ ಹಣ್ಣು ತಿನ್ನಿಸುವ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಕಾರ್ತಿಕ್​ ತುಕಾಲಿಗೋಸ್ಕರ ರಾಣಿಯಂತೆ ಬದಲಾಗಿದ್ದು, ಸೀರೆ ಉಟ್ಟಿದ್ದಾರೆ. ಈ ವೇಳೆ ತುಕಾಲಿ ಕೆನ್ನೆಗೆ ಕಿಸ್​ ಕೂಡ ಕೊಟ್ಟಿದ್ದಾರೆ. ಒಂದು ನಿಮಿಷ ಅಂದರೂ ತಡಮಾಡದಡ ಕಿಸ್​ ಕೊಟ್ಟಿದ್ದಾರೆ. ಈ ವೇಳೆ ಉಳಿದ ಸ್ಪರ್ಧಿಗಳು ನಕ್ಕು ನಕ್ಕು ಸುಸ್ತಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ದೊಡ್ಮನೆಯ ರಾಜ ತುಕಾಲಿಗೆ ಕಿಸ್​ ಕೊಟ್ಟ ಕಾರ್ತಿಕ್! ಒಂದು ನಿಮಿಷ ಅಂದ್ರು ಬಿಡಲಿಲ್ಲ ಗುರು!​

https://newsfirstlive.com/wp-content/uploads/2024/01/bigg-boss-14.jpg

Load More