Advertisment

ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಸನ್ನಿವೇಶ.. ಹೀಗೆ ಬಂದು ಹಾಗೇ ಹೋದ ಕಾರ್ತಿಕ್ ತಾಯಿ ಹೇಳಿದ್ದೇನು?

author-image
Bheemappa
Updated On
ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಸನ್ನಿವೇಶ.. ಹೀಗೆ ಬಂದು ಹಾಗೇ ಹೋದ ಕಾರ್ತಿಕ್ ತಾಯಿ ಹೇಳಿದ್ದೇನು?
Advertisment
  • ಬಿಗ್​ ಬಾಸ್ ಮನೆಗೆ ಆಗಮಿಸಿದ ಕಾರ್ತಿಕ್ ಅವರ ತಾಯಿ
  • ತಾಯಿ ಬಂದು ಹೋದ ಬೆನ್ನಲ್ಲೇ ಕಾರ್ತಿಕ್​ಗೆ ಒಂದು ನೋವು ಕಾಡಿದೆ
  • ಕ್ಷಣಾರ್ಧದಲ್ಲೇ ಹೊರಟು ಹೋದ ಕಾರ್ತಿಕ್ ಅವರ ತಾಯಿ

ಅಮ್ಮ ಎಂದರೆ ಎಲ್ಲರಿಗೂ ಮರೆಯದ ಮಾಣಿಕ್ಯ. ನಾವು ಮಗುವಾಗಿದ್ದಾಗ ಪ್ರೀತಿಯಿಂದ ಬೆಳೆಸಿದವಳು. ಈ ಅಮ್ಮ ಎನ್ನುವ ಎರಡಕ್ಷರಕ್ಕೆ ಶಕ್ತಿ ಜಾಸ್ತಿ. ಪ್ರೀತಿ ಉಕ್ಕಿ ಹರಿಯುತ್ತದೆ. ಬಿಗ್​ ಬಾಸ್​ ಮನೆಗೆ ಅಮ್ಮಂದಿರ ಆಗಮನವಾಗುತ್ತಿದೆ. ಒಬ್ಬೊಬ್ಬರಾಗಿಯೇ ಆಗಮಿಸಿ ತಮ್ಮ ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಸ್ಪರ್ಧಿ ಕಾರ್ತಿಕ್ ಅವರ ತಾಯಿ ಬಿಗ್ ಹೌಸ್​ಗೆ ಎಂಟ್ರಿಯಾದರೂ ಕಾರ್ತಿಕ್​ಗೆ ಆ ಒಂದು ನೋವು ತುಂಬಾ ಕಾಡಿದೆ.

Advertisment

publive-image

ಬಿಗ್​ಬಾಸ್ ಮನೆ ಬಾಗಿಲಿನಿಂದ ಕಾರ್ತಿಕ್ ಅವರ ತಾಯಿ ಆಗಮಿಸಿದ್ದಾರೆ. ಬಂದು ಮಗನಿಗೆ ಒಂದು ಅಪ್ಪುಗೆ ಕೊಟ್ಟು ಅಳಬಾರದು, ಯಾಕೆ ಅಳುತ್ತಿಯಾ ಕಂದ ಎಂದು ಒಂದು ಮುತ್ತು ಕೊಟ್ಟು ಕೊಟ್ಟಿದ್ದಾರೆ. ನನ್ನನ್ನು ನೆನಸಬೇಡ, ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಕಂದ ಎಂದು ಹೇಳಿದ್ದಾರೆ. ಅಷ್ಟೇ ತಕ್ಷಣ ಬಿಗ್ ಮನೆಯ ಬಾಗಿಲು ಓಪನ್ ಆಗಿದ್ದರಿಂದ ಕಾರ್ತಿಕ್​​​ನನ್ನು ಬಿಟ್ಟು ಅಮ್ಮ ಬಾಯ್​.. ಬಾಯ್​ ಎಂದು ಹೇಳುತ್ತಾ ಹೊರ ಹೋಗಿದ್ದಾರೆ.

ಆಗಲೇ ಹೋಗುತ್ತಿದ್ದೀರಾ, ಇನ್ನು ಅವರು ಕರೆದಿಲ್ಲ ಎಂದು ಕಾರ್ತಿಕ್ ಹೇಳುತ್ತಿರುತ್ತಾರೆ ಅಷ್ಟರಲ್ಲೇ ಅಮ್ಮ ಮನೆಯಿಂದ ಹೊರ ಹೋಗುತ್ತಾರೆ. ಈ ವೇಳೆ ಕಾರ್ತಿಕ್ ಅವರು ತುಂಬಾ ದುಖಃದಲ್ಲಿ ಅಳುತ್ತ, ಮುಖ ಸಪ್ಪೆ ಮಾಡುತ್ತಾರೆ. ಅಮ್ಮ ವಾಪಸ್ ಬಾರಮ್ಮ ಎಂದು ಕಾರ್ತಿಕ್ ಅವರು ಕೂಗುತ್ತಾರೆ. ಆದರೆ ಪ್ರೋಮೋದಲ್ಲಿ ಅಮ್ಮ ಮಾತ್ರ ಹೊರಗೆ ಹೋದವರು ವಾಪಸ್ ಅಂತೂ ಬಂದಿಲ್ಲ. ಕ್ಷಣಾರ್ಧದಲ್ಲಿ ಅಮ್ಮ ಬಂದು ಹೋಗಿದ್ದಕ್ಕೆ ಕಾರ್ತಿಕ್​​ಗೆ ತಾಯಿಯ ಇನ್ನು ಸ್ವಲ್ಪ ಹೊತ್ತು ಇರಬೇಕಿತ್ತು ಎನ್ನುವ ನೋವು ತುಂಬಾ ಕಾಡಿದೆ. ಒಟ್ಟಿನಲ್ಲಿ ಅಮ್ಮನನ್ನು ಮಿಸ್​ ಮಾಡಿಕೊಳ್ಳುತ್ತಿದ್ದ ಮಕ್ಕಳಿಗೆ ಬಿಗ್​ ಬಾಸ್​ ತಾಯಿಯ ದರ್ಶನ ಮಾಡಿಸಿದ್ದಾರೆ. ಈ ಎಲ್ಲದರ ನಡುವೆ ಡ್ರೋನ್​ ಪ್ರತಾಪ್​ಗಾಗಿ​ ಬಿಗ್ ಬಾಸ್​ ಮನೆಗೆ ಯಾರ್ ಬರುತ್ತಾರೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ?.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment