BBK11: ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಟ್ವಿಸ್ಟ್; ಈ ವಾರ ಮನೆಯಿಂದ ಔಟ್ ಆಗೋದ್ಯಾರು?

author-image
Veena Gangani
Updated On
BBK11: ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಟ್ವಿಸ್ಟ್; ಈ ವಾರ ಮನೆಯಿಂದ ಔಟ್ ಆಗೋದ್ಯಾರು?
Advertisment
  • ಭವ್ಯಾ ಗೌಡ, ಚೈತ್ರಾ, ಧರ್ಮ ಕೀರ್ತಿರಾಜ್ ಇವರಲ್ಲಿ ಯಾರು ಔಟ್
  • ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವವರು ಯಾರು?
  • ಬಿಗ್​ಬಾಸ್ ಕಾರ್ಯಕ್ರಮದ ಕೊನೆಯಲ್ಲಿ ಇರಲಿದೆಯಾ ಮಸ್ತ್ ಟ್ವಿಸ್ಟ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 41ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಅಂತ ವೀಕ್ಷಕರು ಲೆಕ್ಕ ಹಾಕುತ್ತಿದ್ದಾರೆ. ಈಗಾಗಲೇ ಬಿಗ್​ಬಾಸ್ ಮನೆಯಿಂದ 5 ಸ್ಪರ್ಧಿಗಳು ಆಚೆ ಹೋಗಿದ್ದಾರೆ. ನಟಿ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ರಂಜಿತ್‌, ಹಂಸ ಹಾಗೂ ಮಾನಸಾ ಔಟ್ ಆಗಿದ್ದಾರೆ. ಆದರೆ ಈ ಬಾರಿ ಯಾವ ಸ್ಪರ್ಧಿ ಬಿಗ್​ಬಾಸ್​ ಮನೆಯ ಆಟ ಮುಗಿಸಲಿದ್ದಾರೆ ಅಂತ ಸದ್ಯದ ಕುತೂಹಲ.

ಇದನ್ನೂ ಓದಿ:ಅಕ್ಕ ಅನು ಅಂದ್ರೆ ಮಕ್ಕಳಿಗೆ ಎಷ್ಟು ಇಷ್ಟ.. ನೋಡೋಕೆ ಎರಡು ಕಣ್ಣು ಸಾಲದು; ಮಿಸ್ ಮಾಡ್ದೆ ವಿಡಿಯೋ ನೋಡಿ!

publive-image

ಇನ್ನೂ ಈ ವಾರ ಬಿಗ್​ಬಾಸ್​ ಮನೆಯಲ್ಲಿ ಗುರುವಾರದ ಸಂಚಿಕೆವರೆಗೂ ಟಾಸ್ಕ್‌ಗಳು ನಡೆದವು. ಬಿಗ್​ಬಾಸ್​ ಕೊಟ್ಟ ಟಾಸ್ಕ್‌ಗಳು ನಾಮಿನೇಷನ್‌ ಮೇಲೆ ಪರಿಣಾಮ ಬೀರಿದ್ದವು. ಹೀಗಾಗಿ ನಾಮಿನೇಟ್‌ ಆದವರ ಪಟ್ಟಿಯನ್ನ ಸ್ಪರ್ಧಿಗಳಿಗೆ ಬಿಗ್ ಬಾಸ್‌ ಘೋಷಿಸಿದ್ದು ಗುರುವಾರದ ಸಂಚಿಕೆಯಲ್ಲಿ. ಆದರೆ ಇದೇ ಸಂಚಿಕೆಯಲ್ಲಿ ‘ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ’ ಎಂಬ ಸೂಚನೆಯನ್ನ ವೀಕ್ಷಕರಿಗೆ ಬಿಗ್​ಬಾಸ್ ನೀಡಿದ್ದರು. ಅಲ್ಲಿಗೆ ಒಂದು ಮಟ್ಟಿಗೆ ಈ ವಾರ ನೋ ಎಲಿಮಿನೇಷನ್ ವೀಕ್ ಅಂತಾ ಗೊತ್ತಾಗಿದೆ.

publive-image

ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಭವ್ಯಾ ಗೌಡ, ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಆಚಾರ್‌ ನಾಮಿನೇಟ್ ಆಗಿದ್ದಾರೆ. ಆದರೆ, ವೋಟಿಂಗ್‌ ಲೈನ್ಸ್ ತೆರೆಯದ ಕಾರಣ ಇವರೆಲ್ಲರೂ ಈ ವಾರ ಸೇಫ್‌ ಅಥವಾ ಕಾರ್ಯಕ್ರಮದ ಕೊನೆಯಲ್ಲಿ ಏನಾದರೂ ಟ್ವಿಸ್ಟ್​ ಇರಲಿದ್ಯಾ, ಅಥವಾ ಫೇಕ್ ಎಲಿಮಿನೇಷನ್‌ ನಡೆಸಿ ಯಾರನ್ನಾದರೂ ಸೀಕ್ರೆಟ್‌ ರೂಮ್‌ನಲ್ಲಿ ಬಿಡ್ತಾರಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment