/newsfirstlive-kannada/media/post_attachments/wp-content/uploads/2024/10/jagadish5.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಿಂದ ಇತ್ತೀಚೆಗಷ್ಟೇ ಲಾಯರ್ ಜಗದೀಶ್ ಆಚೆ ಬಂದಿದ್ದರು. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಒಪನಿಂಗ್ ದಿನ ವೇದಿಕೆಗೆ ಅಚ್ಚರಿಯ ರೀತಿಯಲ್ಲಿ ಜಗದೀಶ್ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ:ಬಿಗ್ಬಾಸ್ ಇತಿಹಾಸದಲ್ಲೇ ಮೊದಲು.. ಕ್ಯಾಪ್ಟನ್ಸಿ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ನಡೆದ ಭಾರೀ ಜಿದ್ದಾಜಿದ್ದಿ ಹೇಗಿತ್ತು?
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಲಾಯರ್ ಜಗದೀಶ್ ಒಂದು ಹವಾ ಕ್ರಿಯೇಟ್ ಮಾಡಿದ್ದರು. ಇದರಿಂದಲೇ ಕ್ರಶ್ ಆಫ್ ಕರ್ನಾಟಕ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ನಿನ್ನೆ ಬಿಗ್ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಗ್ಬಾಸ್ ನಟ ರಂಜಿತ್ ಹಾಗೂ ಲಾಯರ್ ಜಗದೀಶ್ ಅವರನ್ನು ಬಿಗ್ಬಾಸ್ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಿಗ್ಬಾಸ್ ಮನೆಯಿಂದ ಆಚೆ ಬಂದ ಬಳಿಕ ಲಾಯರ್ ಜಗದೀಶ್ ಅವರು ಕಲರ್ಸ್ ವಾಹಿನಿಯ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.
View this post on Instagram
ಹೌದು, ಈ ಹಿಂದೆ ಜಗದೀಶ್ ಅವರ ಪತ್ನಿ ಸೌಮ್ಯಾ ಜಗದೀಶ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಸವಿರುಚಿ ಸೀಸನ್ 3ಗೆ ಬಂದಿದ್ದರು. ಇದೀಗ ಲಾಯರ್ ಜಗದೀಶ್ ಸವಿರುಚಿಗೆ ಎಂಟ್ರಿ ಕೊಟ್ಟಿದ್ದಾರೆ. ಸವಿರುಚಿ ಕಾರ್ಯಕ್ರಮ ಜನಪ್ರಿಯ ಅಡುಗೆ ಕಾರ್ಯಕ್ರಮವಾಗಿದೆ. ಇದೇ ಸವಿರುಚಿ ಕಾರ್ಯಕ್ರಮಕ್ಕೆ ಆಗಮಿಸಿದ ಲಾಯರ್ ರುಚಿ-ರುಚಿಯಾದ ಅಡುಗೆ ಮಾಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ಇದೇ ಸವಿರುಚಿಗೆ ಬಂದ ಲಾಯರ್ ಯಾವ ರೆಸಿಪಿ ಮಾಡಿದ್ದಾರೆ ಅಂತ ಚಾನೆಲ್ ಬಿಟ್ಟುಕೊಟ್ಟಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ