Advertisment

BIGG BOSS; ಉಗ್ರಂ ಮಂಜು- ತ್ರಿವಿಕ್ರಮ್​ ನಡುವೆ ಬಿರುಸಿನ ಮಾತುಕತೆ.. ಟಾಸ್ಕ್ ಕೈ ಚೆಲ್ಲಿದ್ರಾ ಸ್ಪರ್ಧಿಗಳು?

author-image
Bheemappa
Updated On
BIGG BOSS; ಉಗ್ರಂ ಮಂಜು- ತ್ರಿವಿಕ್ರಮ್​ ನಡುವೆ ಬಿರುಸಿನ ಮಾತುಕತೆ.. ಟಾಸ್ಕ್ ಕೈ ಚೆಲ್ಲಿದ್ರಾ ಸ್ಪರ್ಧಿಗಳು?
Advertisment
  • ಟಾಸ್ಕ್​ನಲ್ಲಿ ಕೇವಲ 6 ಸ್ಪರ್ಧಿಗಳು ಮಾತ್ರ ಭಾಗವಹಿಸಬೇಕಾ?
  • ರೋಚಕ ಹಂತಕ್ಕೆ ತಲುಪುತ್ತಿರುವ ಕನ್ನಡದ ಬಿಗ್​ಬಾಸ್ ಶೋ
  • ತ್ರಿವಿಕ್ರಮ್ ಹಾಗೂ ಮಂಜು ನಡುವೆ ನಡೆದ ಮಾತುಗಳು ಏನು?

ದಿನದಿಂದ ದಿನಕ್ಕೆ ಬಿಗ್​ಬಾಸ್ ಶೋ ರೋಚಕವಾಗುತ್ತಿದೆ. ಟಾಸ್ಕ್​ಗಳಲ್ಲಿ ಗೆಲ್ಲಲೇಬೇಕಾಗಿದ್ದರಿಂದ ಒಬ್ಬರನೊಬ್ಬರು ದ್ವೇಷಿಸುವುದು ಸಾಮಾನ್ಯ. ಮನೆಯ ಸದಸ್ಯರಿಗೆ ಭವ್ಯ ಹೊಸದೊಂದು ಟಾಸ್ಕ್ ಬಗ್ಗೆ ಹೇಳಿದ್ದಾರೆ. 9 ಸ್ಪರ್ಧಿಗಳಲ್ಲಿ 6 ಸದಸ್ಯರು ಟಾಸ್ಕ್ ಆಡಿ ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಪಡೆಯಬೇಕಿದೆ. ಇದರಲ್ಲಿ ಯಾರು ಯಶಸ್ವಯಾಗಿದ್ದಾರೆ ಎನ್ನುವುದು ಕೂತುಹಲ ಮೂಡಿಸಿದೆ.

Advertisment

ಟಾಸ್ಕ್​ ಕುರಿತು ಉಗ್ರಂ ಮಂಜು ಅವರು, ಚೈತ್ರಾ ಹಾಗೂ ಧನರಾಜ್​ಗೆ ಟಾಂಗ್ ಕೊಟ್ಟು ಸೆಟ್​ಬ್ಯಾಕ್ ಆಗುವಂತೆ ಹೇಳಿದ್ದರು. ಈ ವೇಳೆ ಗರಂ ಆದ ತ್ರಿವಿಕ್ರಮ್​ ನೀನಗೇನಣ್ಣ ಅಂತ ಪ್ರಶ್ನಿಸಿದರು. ದಿನಸಿಗಳಿಗೆ ನಿಮ್ಮಿಂದ ಪ್ರಾಬ್ಲಂ ಆದರೆ ನಾವೇನು ಮಾಡೋಣ ಎಂದು ಮಂಜುನಾ ಕೇಳಿದ್ದಾರೆ. ಸದ್ಯಕ್ಕಂತೂ ಮಂಜು ಹಾಗೂ ತ್ರಿವಿಕ್ರಮ್​ ಮಧ್ಯೆ ಬಿರುಸಿನ ಮಾತುಕತೆ ನಡೆದಿದೆ ಎನ್ನಬಹುದು. ಗೇಮ್​ನಲ್ಲಿ ಚೈತ್ರಾ ಜೊತೆ ಮಂಜು ಆಡುತ್ತಿದ್ದಾರೆ.

publive-image

ಇದನ್ನೂ ಓದಿ: BBK11; ಸ್ಪರ್ಧಿಗಳಿಗೆ ಕೊಟ್ಟ ಹೊಸ ಟಾಸ್ಕ್​ ಯಾವುದು.. ಕ್ಯಾಪ್ಟನ್​ ಭವ್ಯ ಹೇಳಿದ್ದೇನು?

ಮನೆಯಲ್ಲಿ ಉಳಿದ 9 ಜನರಲ್ಲಿ 6 ಸದಸ್ಯರು ಈ ಗೇಮ್​ನಲ್ಲಿ ಪಾಲ್ಗೊಳ್ಳಬೇಕಿದೆ. ಇವರು ಉತ್ತಮವಾಗಿ ಆಡಿದರೆ ಮನೆಗೆ ದಿನಸಿ ಸಿಗುತ್ತವೆ. ಇಲ್ಲವಾದರೆ ಇಲ್ಲ. ನಾನು ಆಡಬಲ್ಲೇ ಎಂದು ಮುಂದೆ ಬಂದಿರುವ ಮಂಜು, ಎರಡೇರಡು ನಿಮಿಷಕ್ಕೊಂದು ಚೆಂಡು ಹಾಕ್ಕೊಂಡು ಬರ್ತಿನಿ ನೋಡು ಎಂದು ತ್ರಿವಿಕ್ರಮ್​ಗೆ ಚಾಲೆಂಜ್​ ರೀತಿಯಲ್ಲಿ ಹೇಳಿದ್ದಾರೆ. ಆದರೆ ಗೇಮ್​ನಲ್ಲಿ ಚೈತ್ರಾ, ಮಂಜು ಇಬ್ಬರು ಅಷ್ಟೇನೂ ಚೆನ್ನಾಗಿ ಆಡಿಲ್ಲ ಎನ್ನುವುದು ಸದ್ಯದ ವಿಡಿಯೋದಿಂದ ಗೊತ್ತಾಗುತ್ತದೆ.

Advertisment

ಮಂಜು ಹಾಗೂ ಚೈತ್ರಾ ಗೇಮ್​ನಲ್ಲಿ ವಿಫಲವಾಗಿ ಆಡುತ್ತಿದ್ದಂತೆ ಉಳಿದ ಸ್ಪರ್ಧಿಗಳ ಮುಖದಲ್ಲಿ ಬೇಸರ ಕಾಣಿಸಿದೆ. ಟೇಬಲ್​ನಿಂದ ಬಾಲ್ ಕೆಳಗೆ ಬೀಳುತ್ತಿದ್ದಂತೆ ಮೋಕ್ಷಿತಾ, ಆಡುವವರ ಕಡೆ ಕೈ ಮಾಡಿ ಕೋಪಿಸಿಕೊಂಡರು. ಅಯ್ಯೋ ಎನ್ನುವಂತೆ ಹನುಮಂತನ ಮುಖದ ಭಾವ ಇತ್ತು. ಇನ್ನು ಕುಳಿತುಕೊಂಡು ಇದನ್ನೆಲ್ಲ ತ್ರಿವಿಕ್ರಮ್, ಭವ್ಯ ನೋಡುತ್ತಲಿದ್ದರು. ಚೆಂಡು ಕಳೆಗೆ ಬಿದ್ದಿದ್ದಕ್ಕೆ ಮಂಜು ತನ್ನ ಹಣೆಗೆ ಕೈಯಿಂದ ಹೊಡೆದುಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment