/newsfirstlive-kannada/media/post_attachments/wp-content/uploads/2024/12/MOKSHITHA.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ಕೊನೆಯ ಹಂತಕ್ಕೆ ಬಂದಂತೆ ಕಾಣುತ್ತಿದೆ. ಮನೆ ಒಳಗೆ ಸ್ಪರ್ಧಿಗಳು ಜಿದ್ದಿಗೆ ಬಿದ್ದವರಂತೆ ಟಾಸ್ಕ್​ಗಳನ್ನು ಪೂರೈಸುತ್ತಿದ್ದಾರೆ. ಇದರ ನಡುವೆ ಈ ವಾರ 8 ಸ್ಪರ್ಧಿಗಳು ಹೊರಗಡೆ ಹೋಗಲು ನಾಮಿನೇಟ್ ಆಗಿದ್ದು ಡಬಲ್ ಎಲಿಮಿನೇಷನ್ ಏನಾದರೂ ಇದೆ ಇಂಬುದು ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಗೊತ್ತಾಗಲಿದೆ.
ಬಿಗ್​ಬಾಸ್​ 90 ದಿನಗಳು ಅಂದರೆ ಮೂರು ತಿಂಗಳನ್ನು ಮುಗಿಸಿದ ಹಿನ್ನೆಲೆಯಲ್ಲಿ ಇಂದಿನ ಕಿಚ್ಚನ ಪಂಚಾಯತಿ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಮನೆಯಿಂದ ಯಾರು ಹೊರಗಡೆ ಹೋಗುತ್ತಾರೆ ಎಂದು ಇವತ್ತು ಗೊತ್ತಾಗಬಹುದು. ಸದ್ಯ ರಿಲೀಸ್ ಮಾಡಿರುವ ವಿಡಿಯೋದಲ್ಲಿ ರೆಸಾರ್ಟ್​ ಗೇಮ್ ಟಾಸ್ಕ್ ಅನ್ನು ಸ್ಪರ್ಧಿಗಳಿಗೆ ಕೊಡಲಾಗಿತ್ತು. ಆದರೆ ಈ ಟಾಸ್ಕ್​ನಲ್ಲಿ ಮೋಕ್ಷಿತಾ ಮ್ಯಾನೇಜರ್ ಆಗಿದ್ದರು. ಒಬ್ಬೊಬ್ಬರು ಒಂದೊಂದು ರೀತಿ ಆಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/MOKSHITHA_1.jpg)
ಇದನ್ನೂ ಓದಿ: BBK11: 90ನೇ ದಿನಕ್ಕೆ ಕಾಲಿಟ್ಟ ಬಿಗ್​ಬಾಸ್ ಸೀಸನ್ 11; ಈ ವಾರದ ಗೇಟ್ ಪಾಸ್ ಯಾರ್ ಯಾರಿಗೆ?
ರೆಸಾರ್ಟ್​ ಗೇಮ್​ನಲ್ಲಿ ಎಲ್ಲರೂ ರೆಸಾರ್ಟ್​ಗೆ ಎಂಟ್ರಿ ಕೊಟ್ಟಿದ್ದು ಹೊಸ ಹೊಸ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಐಶ್ವರ್ಯ ಜೂಸ್ ಕುಡಿಯುತ್ತ ಕೂದಲು ಬಾಚಿಸಿಕೊಂಡಿದ್ದಾರೆ. ಹನುಮಂತು ಗ್ರೀನ್​ ಟೀ ಶರ್ಟ್​​ನಲ್ಲಿ ಮಿಂಚಿದ್ದು ಜೂಸ್ ಕುಡಿಯುತ್ತ ಎಂಜಾಯ್ ಮಾಡಿದ್ದಾರೆ. ಭವ್ಯಗೌಡ ವೇಟರ್ ಆಗಿ ನೈಲ್ ಪಾಲಿಸ್ ಮಾಡಿದ್ದಾರೆ. ತ್ರಿವಿಕ್ರಮ್​ ತನ್ನ ಕಾಲುಗಳನ್ನು ಬಕೆಟ್​ನಲ್ಲಿ ಇಟ್ಟಿದ್ದು ಚೈತ್ರಾ ತೊಳೆದಿದ್ದಾರೆ. ರಜತ್ ಹಾಗೂ ಇನ್ನೊಬ್ಬ ಸ್ಪರ್ಧಿ ಬಟ್ಟೆಗಳನ್ನು ವಾಶ್ ಮಾಡಿದ್ದಾರೆ.
ಇನ್ನು ಉಗ್ರಂ ಮಂಜು ಮ್ಯಾನೇಜರ್ ಮೋಕ್ಷಿತಾ ಮೇಲೆ ಫುಲ್ ಗರಂ ಆಗಿದ್ದಾರೆ. ಧನ್​ರಾಜ್ ಬೆಡ್​ಶೀಟ್ ಎತ್ತಿ ಬಿಸಾಕಿ ಕೂಗಾಡಿದ್ದಾರೆ. ಎಚ್ಚಿತ್ತುಕೊಳ್ಳಿ ಎಂದು ಮಂಜು ಮುಖಕ್ಕೆ ಗೌತಮಿ ಟೀ ಚೆಲ್ಲಿದ್ದಾರೆ. ಮತ್ತೆ ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದು ಮನೆಯಂತೂ ರಣರಂಗವಾಗಿ ಬದಲಾಗಿದೆ. ನಾಮಿನೇಟ್​ ಆದ 8 ಜನರಲ್ಲಿ ಮನೆಯಿಂದ ಹೊರಗಡೆ ಯಾರು ಹೋಗುತ್ತಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us