/newsfirstlive-kannada/media/post_attachments/wp-content/uploads/2024/12/bigg-boss-bhavya.jpg)
ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಮೂರು ವಾರಗಳು ಉಳಿದುಕೊಂಡಿವೆ. ಫ್ಯಾಮಿಲಿ ರೌಂಡ್ ಮುಗಿಯುತ್ತಿದ್ದಂತೆ ವಾರದ ಕತೆ ನಡೆಸಿಕೊಡಲು ಬಿಗ್​ಬಾಸ್​ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಜೊತೆಗೆ ಸ್ಪರ್ಧಿಗಳಿಗೆ ಖಡಕ್​ ಮಾತಿನ ಮೂಲಕವೇ ಅರ್ಥ ಮಾಡಿಸಿದ್ದಾರೆ. ಜೊತೆಗೆ ಉಳಿದ ಮೂರು ವಾರಗಳಲ್ಲಿ ಸ್ಪರ್ಧಿಗಳು ಹೇಗೆ ಆಟ ಆಡಬೇಕು ಅಂತ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/01/bbk1143.jpg)
ಸದ್ಯ ಬಿಗ್​ಬಾಸ್​ ಸೀಸನ್ 11, 100ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಮನೆಯಲ್ಲಿ ಸದ್ಯ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಭವ್ಯಾ, ಮಂಜು, ಚೈತ್ರಾ, ಗೌತಮಿ, ಧನ್‌ರಾಜ್, ಹನುಮಂತ, ರಜತ್ ಹಾಗೂ ಮೋಕ್ಷಿತಾ. ಫ್ಯಾಮಿಲಿ ರೌಂಡ್‌ನಲ್ಲೇ ಸ್ಪರ್ಧಿಗಳು ಮುಳುಗಿ ಹೋಗಿದ್ದಾರೆ. ಆದ್ರೆ ಫ್ಯಾಮಿಲಿ ರೌಂಡ್ ಇದ್ದ ಕಾರಣ ಈ ವಾರ ನಾಮಿನೇಷನ್​ ಪ್ರಕ್ರಿಯೆ ನಡೆದಿಲ್ಲ. ಹಾಗಾದರೆ ಮುಂದಿನ ವಾರ ಡಬಲ್​ ಎಲಿಮಿನೇಷನ್​ ಇರುವ ಸಾಧ್ಯತೆ ಇದೆ. ಆದ್ರೆ ಈ ವಾರದಿಂದ ಮನೆಯಲ್ಲಿ ಆಟ ಸಖತ್ ಟಫ್ ಆಗಿರಲಿದೆ. ಈ 9 ಸ್ಪರ್ಧಿಗಳಲ್ಲಿ ಯಾರಿಗೆ ಯಾರಿಗೆ ಟಫ್​ ಆಗಲಿದ್ದಾರೆ ಅಂತ ಗೊತ್ತಾಲಿದೆ.
ಇದನ್ನೂ ಓದಿ:BBK11: ಇನ್ನು 3 ವಾರಗಳು ಅಷ್ಟೇ.. ಬಿಗ್ ಬಾಸ್ ಫಿನಾಲೆಯ ಬಿಗ್ ಅಪ್ಡೇಟ್; ಉಳಿಯೋರು ಯಾರು?
ಅದರಲ್ಲೂ ಈ ವಾರ ಕ್ಯಾಪ್ಟನ್ಸಿ ಪಟ್ಟ ಗಿಟ್ಟಿಸಿಕೊಂಡಿರೋ ರಜತ್​ ಮುಂದಿನ ವಾರಕ್ಕೆ ಇಮ್ಯೂನಿಟಿ ಪಡೆದುಕೊಂಡಿದ್ದಾರೆ. ಹೀಗಾಗಿ ರಜತ್​ ಟಾಪ್​ 5 ಸ್ಪರ್ಧಿಗಳಲ್ಲೂ ಇವರು ಇರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಮುಂದಿನ ವಾರ ಮಿಡ್ ವೀಕ್ ಎಲಿಮಿನೇಷನ್ ಆಗಬಹುದು ಅಥವಾ ಮುಂದಿನ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಯಾವಾಗ ಬೇಕಾದರೂ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ. ಇದರಿಂದ ಮನೆಯ ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/01/hanumatha8.jpg)
ಅಲ್ಲದೇ ಭಾನುವಾರದ ಎಪಿಸೋಡ್​ನಲ್ಲಿ ಕಿಚ್ಚ ಸದೀಪ್​ ಅವರು ವೇದಿಕೆ ಮೇಲೆ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಮುಂದಿನ ವಾರ ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ. ಗೇಮ್​ ಚೇಂಜಿಂಗ್ ವೀಕ್​ ಆಗಿದೆ. ಮುಂದಿನ ವಾರ ನಡೆಯುವ ಗೇಮ್​ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತೆ. ಅಂದ್ರೆ ಗ್ರ್ಯಾಂಡ್​ ಫಿನಾಲೆಗೆ ನೇರವಾಗಿ ಸೆಲೆಕ್ಟ್​ ಆಗ್ತಾರೆ. ಇಷ್ಟು ವಾರದ ಆಟ ಒಂದು ಲೆಕ್ಕಾವಾದರೆ, ಈಗಿನಿಂದ ಒಂದು ಲೆಕ್ಕಾ ಶುರುವಾಗಿದೆ. ತುಂಬಾ ಚೆನ್ನಾಗಿ ಆಡಿ ಕಪ್​ ಹೇಗೆ ಗೆಲ್ಲಬೇಕು ಅಂತ ಯೋಚನೆ ಮಾಡಿ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us