/newsfirstlive-kannada/media/post_attachments/wp-content/uploads/2025/02/hanumantha.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ವಿನ್ನರ್ ಹನುಮಂತ ಸಖತ್​ ಬ್ಯುಸಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಟ್ರೋಫಿ ಪಡೆದುಕೊಂಡು ತಮ್ಮ ಊರಿಗೆ ಮರಳಿದ ಹನುಮಂತು ಸೆಲೆಬ್ರೇಷನ್ ಇನ್ನೂ ಕೂಡ ನಿಂತಿಲ್ಲ.
ಇದನ್ನೂ ಓದಿ:ರಮ್ಯಾ ಬಳಿ ಪ್ರೀತಿಯ ಮಗಳಿಗಾಗಿ ದುನಿಯಾ ವಿಜಿ ಕೇಳಿಕೊಂಡಿದ್ದು ಏನು ಗೊತ್ತಾ..? Video
/newsfirstlive-kannada/media/post_attachments/wp-content/uploads/2025/02/hanumantha1.jpg)
ಬಿಗ್​ಬಾಸ್​ ಸೀಸನ್ 11 ಮುಕ್ತಾಯಗೊಂಡು ಮೂರ್ನಾಲ್ಕು ವಾರಗಳು ಕಳೆದಿವೆ. ಆದರೆ ಹನುಮಂತನನ್ನು ದಿನದಿಂದ ದಿನಕ್ಕೆ ​ಸೆಲೆಬ್ರೇಟ್​​ ಮಾಡ್ತಾನೆ ಇದ್ದಾರೆ ಅಭಿಮಾನಿಗಳು. ಇನ್ನೂ, ಹನುಮಂತ ಕಂಠದಿಂದ ಬರುವ ಧ್ವನಿಯಲ್ಲಿ ಹಾಡನ್ನು ಕೇಳೋದಕ್ಕೆ ಅಭಿಮಾನಿಗಳು ಕಾಯುತ್ತಲೇ ಇರುತ್ತಾರೆ. ಹೀಗಾಗಿ ಗಾಯಕನ ಜನಪ್ರಿಯತೆ ದುಪ್ಪಟ್ಟಾಗಿದೆ. ಇದೀಗ ಹನುಮಂತು ಬೀದರ್ ನಲ್ಲಿ ಶಾಸಕ ಪ್ರಭು ಚೌಹಾಣ್ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/hanumantha2.jpg)
ವೇದಿಕೆ ಮೇಲೆ ಶಾಸಕರೊಂದಿಗೆ ಹಾಡು ಹಾಡುವುದರ ಜೊತೆಗೆ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ ಹನುಮಂತ ಲಮಾಣಿ. ಹೌದು, ಇಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದ ಜಗದಂಬಾ ದೇವಿಯ ಜಾತ್ರಾ ಮಹೋತ್ಸವ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಬಿಗ್​ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಅವರು ಭಾಗಿ ಆಗಿದ್ದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚೌಹಾಣ್ ಕೂಡ ಪಾಲ್ಗೊಂಡಿದ್ದರು. ಹನುಮಂತನ ಜೊತೆ ವೇದಿಕೆಯಲ್ಲಿ ಪ್ರಭು ಚೌಹಾಣ್ ಡ್ಯಾನ್ಸ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us