BIGG BOSS: ಈ ವಾರ ನಾಮಿನೇಷನ್​ ಲಿಸ್ಟ್​​ನಲ್ಲಿ ಇವರೇ ಮುಂದು; ಆಚೆ ಹೋಗುವ ಸ್ಪರ್ಧಿ ಯಾರು?

author-image
Veena Gangani
Updated On
BIGG BOSS: ಈ ವಾರ ನಾಮಿನೇಷನ್​ ಲಿಸ್ಟ್​​ನಲ್ಲಿ ಇವರೇ ಮುಂದು; ಆಚೆ ಹೋಗುವ ಸ್ಪರ್ಧಿ ಯಾರು?
Advertisment
  • ಈ ಬಾರಿ ಬಿಗ್​ಬಾಸ್​ನಿಂದ ವಿಶೇಷ ಅಧಿಕಾರ ಪಡೆದ ಸ್ಪರ್ಧಿ ಯಾರು?
  • ನಮ್ರತಾ, ವಿನಯ್​​, ತುಕಾಲಿ ಸಂತು, ಕಾರ್ತಿಕ್​, ತನಿಶಾ ಫುಲ್​ ಸೇಫ್​
  • ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು ಇವರೇ!

ಬಿಗ್​ಬಾಸ್​ ಸೀಸನ್​ 10ರಲ್ಲಿ 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ಬಾರಿ ಬಿಗ್​​ಬಾಸ್​​ ಮನೆಯಿಂದ ಆರು ಸ್ಪರ್ಧಿಗಳು ನಾಮಿನೇಟ್​ ಆಗಿದ್ದಾರೆ. ಬಿಗ್​ಬಾಸ್​ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳೆಂದರೆ ಸಂಗೀತಾ, ವರ್ತೂರು ಸಂತೊಷ್, ಅವಿನಾಶ್​, ಸಿರಿ, ಪ್ರತಾಪ್​ ಹಾಗೂ ಮೈಕಲ್.

publive-image

ವಾರದಿಂದ ವಾರಕ್ಕೆ ಬಿಗ್​ಬಾಸ್​ ಮನೆಯ ಆಟ ರಂಗೇರುತ್ತಿದೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ವಿಭಿನ್ನವಾಗಿ ನಡೆದಿದೆ. ಈ ವಾರ ನಾಮಿನೇಟ್ ಮಾಡುವ ಅಧಿಕಾರ 8 ಮಂದಿಗೆ ಮಾತ್ರ ಇತ್ತು. ನಾಮಿನೇಷನ್ ಪ್ರಕ್ರಿಯೆಯಲ್ಲಿ ನಮ್ರತಾ ವಿಶೇಷ ಅಧಿಕಾರ ಹೊಂದಿದ್ದಾರೆ. ಅದರಂತೆ ಈ ಬಾರಿ 6 ಮಂದಿ ನಾಮಿನೇಟ್​ ಆಗಿದ್ದಾರೆ. ಹೀಗಾಗಿ ಈ ವಾರ ಬಿಗ್​​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಬರಬಹುದು ಎಂದು ವೀಕ್ಷಕರಲ್ಲಿ ಮತ್ತಷ್ಟೂ ಕೂತುಹಲ ಹೆಚ್ಚಾಗಿದೆ.

publive-image

ಇತ್ತ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 11 ಸ್ಪರ್ಧಿಗಳು ಉಳಿದುಕೊಂಡು ತಮ್ಮ ಆಟವನ್ನು ಆಡುತ್ತಿದ್ದಾರೆ. 11 ಜನರ ಪೈಕಿ 6 ಜನ ನಾಮಿನೇಟ್​ ಆದರೆ ಉಳಿದ 5 ಸ್ಪರ್ಧಿಗಳು ಸೇಫ್​ ಆಗಿದ್ದಾರೆ. ಕಾರ್ತಿಕ್​​, ತುಕಾಲಿ ಸಂತೋಷ್​, ತನಿಶಾ, ವಿನಯ್​​​ ಹಾಗೂ ನಮ್ರತಾ ಗೌಡ ಸೇಫ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment